Saturday, November 2, 2024

16 ಬಂಡಾಯ ಶಿವಸೇನೆಯ ಶಾಸಕರಿಗೆ ಅನರ್ಹತೆ ನೋಟಿಸ್‌ ಜಾರಿ

ಮಹಾರಾಷ್ಟ್ರದ ಮಹಾ ರಾಜಕೀಯ ದಿನಕ್ಕೊಂದು ತಿರುವು ಪಡೆಯುತ್ತಿದೆ. ಇದೀಗ ಠಾಕ್ರೆ ಸೇನೆ ಮತ್ತು ಶಿಂಧೆ ಸೇನೆಯ ಮಧ್ಯೆ ಸಮರ ಶುರುವಾಗಿದ್ದು, ಅಲ್ಲೋಲ ಕಲ್ಲೋಲ ಸೃಷ್ಠಿದೆ.. ಈ ಮಧ್ಯೆ, ಉಪ ಸ್ಪೀಕರ್‌ ಶಿವಸೇನೆಯ 16 ಶಾಸಕರಿಗೆ ಅನರ್ಹತೆಯ ನೋಟಿಸ್‌ ಕಳುಹಿಸಿದ್ದು, ಮತ್ತಷ್ಟು ರೋಚತೆ ಪಡೆದುಕೊಳ್ತಿದೆ.

ಮಹಾರಾಷ್ಟ್ರ ಮಹಾ ನಾಟಕ ಇದೀಗ ಬೀದಿ ಜಗಳಕ್ಕೆ ಕಾರಣವಾಗಿದೆ. ಉದ್ಧವ್‌ ಠಾಕ್ರೆಯದ್ದು ಶಿವಸೇನೆಯಾದ್ರೆ, ಏಕನಾಥ್‌ ಶಿಂಧೆಯದ್ದು ಬಂಡಾಯ ಸೇನೆಯಾಗಿ ಸಮರವೇ ಸಾರಿಕೊಂಡಿದ್ದಾರೆ.. ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರದಲ್ಲಿ 144 ಜಾರಿಯಾಗುವಷ್ಟರ ಮಟ್ಟಿಗೆ ರಾಜಕೀಯ ಹೈಡ್ರಾಮಾ ಜೋರಾಗ್ತಿದೆ.

ಕೆಲವು ಬಂಡಾಯ ಪಕ್ಷದ ಶಾಸಕರ ಕಚೇರಿಗಳ ಮೇಲೆ ಶಿವಸೇನೆ ಕಾರ್ಯಕರ್ತರು ದಾಳಿ ನಡೆಸಿದ್ದಾರೆ. ಕೆಲವು ಹಿಂಸಾಚಾರದ ಘಟನೆಗಳ ನಂತರ ಹೈ ಅಲರ್ಟ್ ಆಗಿರುವ ಮುಂಬೈ ಪೊಲೀಸರು 144 ಜಾರಿ ಮಾಡಲಾಗಿದೆ.

ಮಹಾರಾಷ್ಟ್ರ ರಾಜ್ಯದಲ್ಲಿ ರಾಜಕೀಯ ಬಿಕ್ಕಟ್ಟು ಉದ್ವಿಗ್ನ ಪರಿಸ್ಥಿತಿ ತಲುಪಿದೆ. ರಿಬೆಲ್ ಶಾಸಕರ ವಿರುದ್ಧ ಎಲ್ಲ ರೀತಿಯ ತಂತ್ರ ಉಪಯೋಗಿಸಲು ಉದ್ಧವ್‌ ಠಾಕ್ರೆಯ ಬೆಂಬಲಿತ ಕಾರ್ಯಕರ್ತರು ಸಜ್ಜಾಗಿದ್ದಾರೆ.

ಈ ಮಧ್ಯೆ, ರೆಬೆಲ್ಸ್‌ ವಿರುದ್ಧ ಸಿಡಿದೆದ್ದಿರು ಉದ್ಧವ್‌ ಠಾಕ್ರೆ ಶಿವಸೇನೆ ರೆಬೆಲ್ಸ್‌ ವಿರುದ್ಧ ಹಲವು ನಿರ್ಣಯಗಳನ್ನು ತೆಗೆದುಕೊಂಡಿದೆ.. ಯಾರಾದ್ರೂ ಬಾಳಾ ಸಾಹೇಬ್‌ ಠಾಕ್ರೆ ಹೆಸ್ರು ಬಳಸಿದ್ರೆ ಹುಷಾರ್‌ ಎಂದಿದೆ. ಶಿವಸೇನೆ ಹೆಸರು ಬೇರೆ ಯಾರಿಗೂ ಉಪಯೋಗಿಸಲು ಬಿಡಲ್ಲ. ಧಮ್‌ ಇದ್ರೆ ಸ್ವಂತ ಅಪ್ಪನ ಹೆಸರಿನಲ್ಲಿ ಚುನಾವಣೆ ಎದುರಿಸಲಿ ಎಂದು ಸವಾಲೆಸಿದ್ದಾರೆ.. ಜೊತೆಗೆ, ಶಾಸಕಾಂಗ ಪಕ್ಷದ ನಾಯಕತ್ವದಿಂದ ಏಕನಾಥ್‌ ವಜಾಗೊಳಿಸಲಾಗಿದ್ದು, ಚುನಾವಣಾ ಆಯೋಗಕ್ಕೂ ಈ ಕುರಿತು ಮಾಹಿತಿ ನೀಡಿದ್ದೇವೆ ಎಂದು ಶಿವಸೇನೆ ಹೇಳಿದೆ. ಮಹಾ ವಿಕಾಸ್‌ ಅಘಾಡಿ ಜೊತೆಗೆ ಸರ್ಕಾರ ಮುಂದುವರಿಯಲಿದ್ದು, ಬಿಜೆಪಿ ಜೊತೆ ಸರ್ಕಾರ ರಚನೆ ಬಗ್ಗೆ ಯಾವುದೇ ಪ್ರಶ್ನೆ ಇಲ್ಲವೆಂದು ಶಿವಸೇನೆ ಸಭೆಯಲ್ಲಿ ಸ್ಪಷ್ಟನೆ ನೀಡಿದ್ದಾರೆ ಸಿಎಂ ಉದ್ಧವ್‌ ಠಾಕ್ರೆ.. ನಮ್ಮನ್ನು ಬಿಟ್ಟು ಹೋದವರು ಹೋಗಲಿ, ಪಕ್ಷ ಮತ್ತೊಮ್ಮೆ ಕಟ್ಟುವೆ ಎಂದು ಖಡಕ್‌ ಸಂದೇಶ ರವಾನಿಸಿದ್ದಾರೆ.

ಮಹಾರಾಷ್ಟ್ರದಲ್ಲಿ ಮಹಾ ವಿಕಾಸ ಅಘಾಡಿ ಸರ್ಕಾರದ ವಿರುದ್ಧ ಬಂಡಾಯ ಬಾವುಟ ಹಾರಿಸಿರುವ ಶಿವಸೇನೆಯ 16 ಶಾಸಕರಿಗೆ ಉಪ ಸ್ಪೀಕರ್ ನರಹರಿ ಜಿರ್ವಾಲ್ ಅನರ್ಹತೆ ನೋಟಿಸ್ ಕಳುಹಿಸಿದ್ದಾರೆ. ಸೋಮವಾರ ಸಂಜೆ 5 ಗಂಟೆ ಒಳಗೆ ಉತ್ತರ ನೀಡಬೇಕೆಂದು ಸೂಚಿಸಲಾಗಿದೆ. ಶಿವಸೇನೆ ಬಂಡಾಯ ನಾಯಕ ಏಕನಾಥ್ ಶಿಂಧೆ ನೇತೃತ್ವದ ಬಂಡಾಯ ಶಾಸಕರನ್ನು ಅನರ್ಹಗೊಳಿಸಲು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಬಣ ಸಲ್ಲಿಸಿದ ಅರ್ಜಿಯನ್ನು ಅಂಗೀಕರಿಸಲಾಗಿದ್ದು, ಉಪ ಸಭಾಪತಿಯವರು ನೋಟಿಸ್ ಕಳುಹಿಸಿದೆ.

ಕಾನೂನು ಹೋರಾಟಕ್ಕೆ ರೆಡಿ ಎಂದ ಶಿಂಧೆ ಟೀಮ್‌ :

ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧ ಬಂಡಾಯ ಎದ್ದಿರುವ ಏಕನಾಥ್ ಶಿಂಧೆಯು ಶಿವಸೇನೆಯ ಶಾಸಕರು ಸೇರಿದಂತೆ ಒಟ್ಟು 55 ಶಾಸಕರ ಬೆಂಬಲವನ್ನು ಹೊಂದಿದ್ದಾರೆ ಎನ್ನಲಾಗ್ತಿದೆ. ಈ ಮಧ್ಯೆ, ನಾವು ಈಗ್ಲೂ ಶಿವಸೇನೆಯ ಭಾಗವಾಗಿದ್ದವೇ.. ಪಕ್ಷ ನೀಡಿರುವ ನೋಟಿಸ್‌ಗೆ ನಾವು ಉತ್ತರ ನೀಡ್ತೇವೆ.. ಉಪ ಸಭಾಧ್ಯಕ್ಷರು 16 ಜನರಿಗೆ ನೋಟಿಸ್‌ ನೀಡಿದ್ದು, ಪಕ್ಷಾಂತರ ನಿಷೇಧ ಕಾಯ್ದೆ ನಮಗೆ ಅನ್ವಯವಾಗೋದಿಲ್ಲ.. ಈ ಸಂಬಂಧ ನಾವು ಕಾನೂನು ಹೋರಾಟ ಮಾಡ್ತೀವಿ ಎಂದಿದ್ದಾರೆ ಬಂಡಾಯ ಶಾಸಕರು.

ತಮ್ಮ ಬಣವೇ ವಿಧಾನಸಭೆಯಲ್ಲಿ ವಿಶ್ವಾಸಮತವನ್ನು ಗೆದ್ದುಕೊಳ್ಳಲಿದೆ ಶಿವಸೇನೆ ಹೇಳ್ತಿದೆ. ಇಲ್ಲ, ನಮ್ಮ ಬಲವೇ ಹೆಚ್ಚಿದ್ದು ನಾವೇ ಗೆಲ್ಲುತ್ತೇವೆ ಎನ್ನುತಿದೆ ರೆಬೆಲ್ಸ್‌ ಟೀಮ್‌.. ಈ ಮಧ್ಯೆ, ರಾಜಕೀಯ ಹೈಡ್ರಾಮಾದ ಜೊತೆಗೆ, ಶಿವಸೇನೆ ಕಾರ್ಯಕರ್ತು ರೆಬೆಲ್ಸ್‌ ವಿರುದ್ಧ ಸೇಡಿಗೆ ನಿಂತಿದ್ದಾರೆ.

ಬ್ಯೂರೋ ರಿಪೋರ್ಟ್‌ ಪವರ್‌ ಟಿವಿ

RELATED ARTICLES

Related Articles

TRENDING ARTICLES