Sunday, January 19, 2025

ದಿಲ್ ರಾಜು ಜೊತೆ #Y20 ನೆಕ್ಸ್ಟ್ ಲೆವೆಲ್ ಪ್ಯಾನ್ ಮೂವಿ

ಸುನಾಮಿ ಬರೋಕೂ ಮುನ್ನ ಕಡಲು ತುಂಬಾ ಪ್ರಶಾಂತವಾಗಿರುತ್ತೆ ಅಂತಾರೆ. ಯೆಸ್.. ರಾಕಿಭಾಯ್ ಯಶ್ ವಿಚಾರದಲ್ಲೂ ಅದು ಹಾಗೇನೇ. ಕೆಜಿಎಫ್-2ನಲ್ಲಿ ಅಬ್ಬರಿಸಿ ಬೊಬ್ಬರಿದ ನಂತ್ರ ಸಖತ್ ಸೈಲೆಂಟ್ ಆಗಿರೋ ನ್ಯಾಷನಲ್ ಸ್ಟಾರ್, ಇದೀಗ ಬರೋಬ್ಬರಿ 100 ಕೋಟಿ ರೆಮ್ಯುನರೇಷನ್​​ನ ಬಿಗ್ ಬ್ರೇಕಿಂಗ್ ನ್ಯೂಸ್​ ನೀಡಿದ್ದಾರೆ. ಅದು ಯಾವ ಸಿನಿಮಾಗಾಗಿ..? ಪ್ರೊಡ್ಯೂಸ್ ಮಾಡ್ತಿರೋದ್ಯಾರು ಅನ್ನೋದ್ರ ವೆರಿ ವೆರಿ ಇಂಟರೆಸ್ಟಿಂಗ್ ಸ್ಟೋರಿ ನಿಮಗಾಗಿ.

ಅಬ್ಬಬ್ಬಾ.. 100 ಕೋಟಿ ಮುಟ್ಟಿತು ಯಶ್ ಸಂಭಾವನೆ

ಭಾರತೀಯ ಚಿತ್ರರಂಗದಲ್ಲಿ ರಾಕಿಭಾಯ್ ಹೊಸ ಪರ್ವ

ದಿಲ್ ರಾಜು ಜೊತೆ #Y20.. ನೆಕ್ಸ್ಟ್ ಲೆವೆಲ್ ಪ್ಯಾನ್ ಮೂವಿ

ಸದ್ಯದಲ್ಲೇ ನರ್ತನ್- KVN ಮೆಗಾ ವೆಂಚರ್ ಕಿಕ್​ಸ್ಟಾರ್ಟ್​

ಸಕ್ಸಸ್​ಗೆ ಕೇರ್ ಆಫ್ ಅಡ್ರೆಸ್ ಆಗಿರೋ ನಮ್ಮ ಹೆಮ್ಮೆಯ ಕನ್ನಡಿಗ ರಾಕಿಭಾಯ್ ಯಶ್, ಕರುನಾಡಿಗೆ ಮತ್ತೊಂದು ಮುತ್ತಿನಂತ ಸುದ್ದಿ ಕೊಟ್ಟಿದ್ದಾರೆ. 1500 ಕೋಟಿ ಗಳಿಸೋ ಸಿನಿಮಾ ಮಾಡೋದೂ ಗೊತ್ತು, ಪರಭಾಷಿಗರ ರೀತಿ 100 ಕೋಟಿ ಸಂಭಾವನೆ ಪಡೆಯೋ ಹೊತ್ತು ಇದು ಅನ್ನೋದನ್ನ ನೆನಪಿಸಿದ್ದಾರೆ.

ನಿಮ್ಮ ಊಹೆ ನಿಜಾನೇ. ಯಶ್ ಮುಂದಿನ ಹೊಚ್ಚ ಹೊಸ ಪ್ರಾಜೆಕ್ಟ್​ಗೆ ಪಡೆಯುತ್ತಿರೋ ಸಂಭಾವನೆ ಬರೋಬ್ಬರಿ 100 ಕೋಟಿ ಅಂದ್ರೆ ನೀವು ನಂಬಲೇಬೇಕು. ಇಟ್ಟ ಗುರಿಯೆಡಿ ದಿಟ್ಟ ಹೆಜ್ಜೆಯಿಟ್ಟು ಸಾಗೋ ರಿಯಲ್ ಕನಸುಗಾರ, ಅದನ್ನ ಸಾಕಾರಗೊಳಿಸೋ ಛಲಗಾರ ಈ ಸಿನಿಸಂತ ಯಶ್. ಹಾಗಾಗಿಯೇ ನೋಡ ನೋಡುತ್ತಲೇ ಇವ್ರ ಸಂಭಾವನೆ ಮುಗಿಲು ಮುಟ್ಟಿದೆ.

ಮಾಡೋ ಕೆಲಸದ ಬಗ್ಗೆ ತುಂಬಾ ಫೋಕಸ್ಡ್ ಆಗಿರೋ ರಾಕಿಭಾಯ್, ಕೆಜಿಎಫ್ ಸಿನಿಮಾದಿಂದ ಇಲ್ಲಿಯವರೆಗೂ ಕನ್ನಡ ಚಿತ್ರರಂಗಕ್ಕೆ ಅಡ್ಡಿಯಾಗಿದ್ದ ಎಲ್ಲಾ ಅಡೆತಡೆಗಳನ್ನ ಮೆಟ್ಟಿ ನಿಂತರು. ಕನ್ನಡ ಸಿನಿಮಾಗಳಿಗೆ ಪರಭಾಷೆಗಳಲ್ಲಿ ನೆಲೆ ಹಾಗೂ ಬೆಲೆ ತಂದುಕೊಟ್ಟರು. ಯೂತ್ ಐಕಾನ್ ಆಗಿ, ನ್ಯಾಷನಲ್ ಸ್ಟಾರ್ ಆಗಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ನಮ್ಮ ಕನ್ನಡದ ಕೀರ್ತಿ ಪತಾಕೆಯನ್ನು ಹಾರಿಸಿದ್ರು.

ಇದೀಗ ಕೆಜಿಎಫ್ ಚಾಪ್ಟರ್-2 ಬಳಿಕ ತಮ್ಮ ಡೈಹಾರ್ಡ್​ ಫ್ಯಾನ್ಸ್ ಜೊತೆ ಕೋಟ್ಯಂತರ  ಸಿನಿಪ್ರಿಯರ ಕಾತರತೆ ಹೆಚ್ಚಿಸಿದ್ರು ಯಶ್. ಅವ್ರ ಮುಂದಿನ ನಟೆ ಏನು ಅನ್ನೋದ್ರ ಬಗ್ಗೆ ಯಾರಿಗೂ ಸ್ಪಷ್ಟತೆ ಇರಲಿಲ್ಲ. ಆದ್ರೀಗ ಯಶ್​ರ 19ನೇ ಸಿನಿಮಾ ಟೇಕ್ ಆಫ್ ಆಗೋದು ಖಚಿತವಾಗಿದೆ. ಮಫ್ತಿ ಖ್ಯಾತಿಯ ನರ್ತನ್ ಜೊತೆ ರಾಕಿಭಾಯ್ ನಟಿಸಲಿದ್ದಾರೆ. ಅದನ್ನ ಪ್ರತಿಷ್ಠಿತ ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ನಿರ್ಮಿಸ್ತಿದೆ.

ಇದೆಲ್ಲಾ ಗೊತ್ತಿರೋ ವಿಷ್ಯವೇ ಆದ್ರೂ, ಸದ್ಯ ಯಶ್ ತಮ್ಮ 20ನೇ ಸಿನಿಮಾಗೆ 100 ಕೋಟಿ ಸಂಭಾವನೆ ಪಡೆಯಲಿದ್ದಾರೆ ಅನ್ನೋದು ಸದ್ಯ ಟಾಕ್ ಆಫ್ ದಿ ಟೌನ್ ಆಗಿದೆ. ಹೌದು.. ಟಾಲಿವುಡ್​ನ ಸೂಪರ್ ಹಿಟ್ ಸಿನಿಮಾಗಳ ಸರದಾರ ದಿಲ್​ರಾಜು ಬ್ಯಾನರ್​​ ನಮ್ಮ ರಾಕಿಭಾಯ್​ಗೆ ಸಿನಿಮಾ ಪ್ರೊಡ್ಯೂಸ್ ಮಾಡೋಕೆ ಮುಂದಾಗಿದ್ದು, ಆ ಚಿತ್ರಕ್ಕೆ ಬರೋಬ್ಬರಿ ಶತಕೋಟಿ ರೆಮ್ಯುನರೇಷನ್ ಪಡೆಯಲಿದ್ದಾರೆ ಅನ್ನೋದು ಖುಷಿಯ ವಿಚಾರ.

ದಿಲ್​ರಾಜು ನಿರ್ಮಿಸಲಿರೋ ಚಿತ್ರಕ್ಕೆ ಡೈರೆಕ್ಟರ್ ಕೂಡ ತೆಲುಗಿನವರೇ ಆಗಿರಲಿದ್ದು, ಕನ್ನಡ-ತೆಲುಗು ಸೇರಿದಂತೆ ಪ್ಯಾನ್ ಇಂಡಿಯಾ ಸಿನಿಮಾ ಆಗಲಿದೆಯಂತೆ. ದಿಲ್​ರಾಜು ಈಗಾಗ್ಲೇ ಆಂಧ್ರದಲ್ಲಿ ಕೆಜಿಎಫ್ ಡಿಸ್ಟ್ರಿಬ್ಯೂಷನ್ ರೈಟ್ಸ್ ಪಡೆದು, ಸಿನಿಮಾನ ರಿಲೀಸ್ ಮಾಡಿ, ದೊಡ್ಡ ಮಟ್ಟಕ್ಕೆ ಹಣ ಕೂಡ ಮಾಡಿದ್ದಾರೆ. ಯಶ್, ನೀಲ್ ಹಾಗೂ ಹೊಂಬಾಳೆ ಫಿಲಂಸ್​ನ ವಿಜಯ್ ಕಿರಗಂದೂರ್​ಗೂ ಆತ್ಮೀಯನಾಗಿರೋ ದಿಲ್​ರಾಜು ಸದ್ಯ ನಮ್ಮ ಮಾಸ್ಟರ್​ಪೀಸ್ ಜೊತೆ ಕೈಜೋಡಿಸ್ತಿರೋದು ಇಂಟರೆಸ್ಟಿಂಗ್.

ಸಾಕಷ್ಟು ಮಂದಿ ಸೂಪರ್ ಸ್ಟಾರ್ಸ್​ ತಮ್ಮ ಸಿನಿಮಾದ ಬಜೆಟ್​ ಅಥ್ವಾ ಬಾಕ್ಸ್ ಆಫೀಸ್ ಕಲೆಕ್ಷನ್​ಗೇನೇ 100 ಕೋಟಿ ಆದ್ರೆ ಸಾಕು ಅಂತ ಹೆಣಗಾಡ್ತಿರೋ ಈ ಕಾಲದಲ್ಲಿ ಯಶ್ ಸಂಭಾವನೆಯೇ 100 ಕೋಟಿ ಅನ್ನೋದು ನಿಜಕ್ಕೂ ಗ್ರೇಟ್. ರಜಿನೀಕಾಂತ್, ಪ್ರಭಾಸ್ ರೀತಿ ನಮ್ಮ ಯಶ್ ಕೂಡ ಶತಕೋಟಿ ಸಂಭಾವನೆಯ ಸ್ಟಾರ್ ಆಗಿ ರಾರಾಜಿಸಲಿರೋದು ಪ್ರತಿಯೊಬ್ಬ ಕನ್ನಡಿಗ ಹೆಮ್ಮೆ ಪಡೋ ವಿಷ್ಯ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES