Thursday, December 26, 2024

ಕೇಬಲ್ ವೈರ್ ಕದ್ದು ಗ್ರಾಮಸ್ಧರಿಗೆ ಸಿಕ್ಕಿಬಿದ್ದ ಕಳ್ಳ

ದೇವನಹಳ್ಳಿ : ಗ್ರಾಮಸ್ಥರೇ ಕಳ್ಳನನ್ನು ಹಿಡಿದು ಪೋಲಿಸರಿಗೆ ಪೋನ್ ಮಾಡಿದ್ರೂ ಕಳ್ಳನನ್ನು ಅರೆಸ್ಟ್ ಮಾಡದೇ ನಿರ್ಲಕ್ಷ್ಯ ತೋರಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಯಂಬ್ರಹಳ್ಳಿ ಗ್ರಾಮದಲ್ಲಿ ನಡೆದಿದೆ.

ಮೊನ್ನೆ ರಾತ್ರಿ ಯಂಬ್ರಹಳ್ಳಿ ಗ್ರಾಮದ ತೋಟಗಳಲ್ಲಿ ಕಳ್ಳನೊಬ್ಬ ಬೋರ್ ಮೋಟಾರ್ ಗಳಿಗೆ ಅಳವಡಿಸಿದ್ದ ಕೇಬಲ್ ವೈರ್ ಗಳನ್ನು ಕಳ್ಳತನ ಮಾಡುತ್ತಿದ್ದ ಈ ವೇಳೆ ಗ್ರಾಮಸ್ಥರು ವಿಜಯಪುರ ಪೋಲಿಸರಿಗೆ ಪೋನ್ ಮೂಲಕ ಮಾಹಿತಿ ತಿಳಿಸಿದ್ದಾರೆ.

ಆದ್ರೆ ಪೋಲಿಸರು ಕಳ್ಳನನ್ನು ನೀವೆ ಬೈಕ್ ನಲ್ಲಿ ಕರೆದುಕೊಂಡು ಠಾಣೆಗೆ ಕರೆ ತನ್ನಿ ಅಂತಾ ನಿರ್ಲಕ್ಷ್ಯ ತೋರಿದ್ದಾರೆ. ನಂತರ ಗ್ರಾಮಸ್ಥರು 112 ಗೆ ಕರೆ ಮಾಡಿದ್ದಾರೆ 112 ಪೋಲಿಸರು ಸ್ಥಳಕ್ಕೆ ಬಂದ್ರೂ ಕಳ್ಳನನ್ನು ಠಾಣೆ ಕರೆದುಕೊಂಡು ಹೋಗದೇ ಬೇಜವಾಬ್ದಾರಿ ತೋರಿದ್ದಾರೆ. ಕೊನೆಗೆ ಗ್ರಾಮಸ್ಥರೇ ಠಾಣೆ ಕರೆದುಕೊಂಡು ಹೋಗಿದ್ದಾರೆ. ಈಗಾಗಲೇ ವಿಜಯಪುರ ಪೋಲಿಸರ ನಿರ್ಲಕ್ಷ್ಯ ತೋರಿರುವ ಘಟನೆ ಮೇಲಾಧಿಕಾರಿಗಳಿಗೆ ತಿಳಿದಿದೆ ಈ ಹಿನ್ನೆಲೆಯಲ್ಲಿ ಪೋಲಿಸ್ ಸಿಬ್ಬಂದಿಯ ನಿರ್ಲಕ್ಷ್ಯದ ಬಗ್ಗೆ ತನಿಖೆ ನಡೆಸುವಂತೆ ಆದೇಶ ಸಹ ಮಾಡಲಾಗಿದೆ.

RELATED ARTICLES

Related Articles

TRENDING ARTICLES