ಮೈಸೂರು : ಈ ಮೂಲಕ ಹಳೇ ಮೈಸೂರು ಭಾಗದಲ್ಲಿ ಕನಿಷ್ಟ ಸ್ಥಾನಗಳನ್ನ ಗೆದ್ದರೆ ಮಾತ್ರ ಅಧಿಕಾರಕ್ಕೆ ಬರಲು ಸಾಧ್ಯ ಎಂಬ ಲೆಕ್ಕಾಚಾರದಲ್ಲಿರುವ ಕೇಂದ್ರ ಬಿಜೆಪಿ ನಾಯಕರಿಗೆ ಸಿದ್ದರಾಮಯ್ಯ ಟಕ್ಕರ್ ನೀಡಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಬಿಜೆಪಿ ನಾಯಕರಿಗೆ ಹಿಡಿತ ಸಿಗದಂತೆ ಸಿದ್ದರಾಮಯ್ಯ ತಂತ್ರ ಹೂಡಿದ್ದಾರೆ. ಮೋದಿ ಪ್ರವಾಸದ ಬೆನ್ನಲ್ಲೇ ಅಲರ್ಟ್ ಆದ ಸಿದ್ದರಾಮಯ್ಯ ತವರಿನ ಕಾಂಗ್ರೆಸ್ ಮುಖಂಡರ ಜೊತೆ ಒನ್ ಟು ಒನ್ ಮೀಟಿಂಗ್ ಮಾಡಿದ್ದಾರೆ.
ಅದಲ್ಲದೇ, ನವಸಂಕಲ್ಪ ಚಿಂತನಾ ಶಿಬಿರದಲ್ಲಿ ಸಂಪೂರ್ಣ ಭಾಗಿಯಾದ ಸಿದ್ದರಾಮಯ್ಯ. ಪಕ್ಷ ಸಂಘಟನೆ, ಕೃಷಿ&ರೈತ, ಪಕ್ಷ ಸಂಘಟನೆ ಹಾಗು ಸವಾಲುಗಳು, ಮಹಿಳಾ ಸಬಲೀಕರಣ, ಯುವ ವಿದ್ಯಾರ್ಥಿ ನಾಯಕತ್ವ ಹೀಗೆ ಏಳು ಉಪ ಸಮಿತಿಗಳ ಸಭೆಯಲ್ಲಿ ಪ್ರತ್ಯೇಕವಾಗಿ ಭಾಗಿಯಾದ ಅವರು, ಎಲ್ಲಾ ಸಮಿತಿಗಳ ಸಭೆಯಲ್ಲಿ ಭಾಗಿಯಾಗಿ ಅಭಿಪ್ರಾಯ ಸಂಗ್ರಹಿಸಿದ್ದಾರೆ.
ಇನ್ನು, ದಕ್ಷಿಣ ಪದವೀಧರ ಚುನಾವಣೆಯಲ್ಲಿ ಮಂಡ್ಯ, ಹಾಸನ, ಚಾಮರಾಜನಗರ, ಮೈಸೂರು ಜಿಲ್ಲೆಯಲ್ಲೂ ಪ್ರವಾಸ ಮಾಡಿ ಯಶಸ್ವಿಯಾಗಿರುವ ಸಿದ್ದರಾಮಯ್ಯ. ರಾಜಕೀಯ ಬದ್ದವೈರಿ ಜೆಡಿಎಸ್ ಮೂರನೇ ತಳ್ಳಪಲ್ಟ ತಂತ್ರ ಹೂಡಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ ಎಂದರು.
ಮೈಸೂರು ಮಹರಾಜರು ಸ್ಥಾಪಿಸಿದ್ದ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಬ್ಯಾಂಕ್ ಮುಚ್ಚಿದ್ದು ಮೋದಿ ಸಾಧನೆನಾ..? ಮೈಸೂರಿಗೆ ಮೋದಿ ಕೊಡುಗೆ ಏನು ಎಂದು ಪ್ರಶ್ನಿಸಿದ್ದಾರೆ. ಈ ಮೂಲಕ ಹಳೇ ಮೈಸೂರು ಭಾಗದಲ್ಲಿ ಕನಿಷ್ಟ ಸ್ಥಾನಗಳನ್ನ ಗೆದ್ದರೆ ಮಾತ್ರ ಅಧಿಕಾರಕ್ಕೆ ಬರಲು ಸಾಧ್ಯ ಎಂಬ ಲೆಕ್ಕಾಚಾರದಲ್ಲಿರುವ ಕೇಂದ್ರ ಬಿಜೆಪಿ ನಾಯಕರಿಗೆ ಸಿದ್ದು ಟಕ್ಕರ್ ನೀಡಿದ್ದಾರೆ.