ಚಿಕ್ಕಬಳ್ಳಾಪುರ: ಸರ್ಕಾರಿ ಬಸ್ಗಳ ಕೊರತೆಯಿಂದ ವಿಧಿಯಿಲ್ಲದೇ ಅಪಾಯ ಲೆಕ್ಕಿಸದೇ ಬಸ್ ಟಾಪಲ್ಲಿ ವಿದ್ಯಾರ್ಥಿಗಳು ಪ್ರಯಣ ಬೆಳೆಸಿದ್ದಾರೆ.
ಜಿಲ್ಲೆ ಬಾಗೇಪಲ್ಲಿ ತಾಲ್ಲೂಕಿನಲ್ಲಿ ನಿಲ್ಲದ ಖಾಸಗಿ ಬಸ್ ಟಾಪ್ ಸರ್ವೀಸ್. ಮಿತಿ ಮೀರಿ 120-150 ಮಂದಿ ಪ್ರಯಾಣಿಕರನ್ನು ತುಂಬುತ್ತಿರುವ ಖಾಸಗಿ ಬಸ್ಗಳು ಹೆಚ್ಚು ಕಡಿಮೆ ಆದರೆ ದೇವರಿಗೆ ಪ್ರೀತಿ ಎಂಬಂತಿರುವ ಖಾಸಗಿ ಬಸ್ಗಳ ಒತ್ತಡಕ್ಕೆ ಮಣಿಯುತಾ ಸಾರಿಗೆ ಇಲಾಖೆ ವಿದ್ಯಾರ್ಥಿಗಳು ಭವಿಷ್ಯ ಕಾಪಾಡಬೇಕಾದ ಜಿಲ್ಲಾಡಳಿತ ನಿರ್ಲಕ್ಷ್ಯ ತೋರೋದು ಸರಿನಾ..? ಎಂಬುವುದು ಪ್ರಶ್ನೆಯಾಗಿಯೇ ಉಳಿದಿದೆ.
ಅದಲ್ಲದೇ, ಸಮಸ್ಯೆ ಆದಾಗ ಎಚ್ಚೆತ್ತು, ಬಳಿಕ ಗಾಢ ನಿದ್ರೆಗೆ ಜಾರೋ ಸಾರಿಗೆ ವ್ಯವಸ್ಥೆಗೆ ಏನನ್ನಬೇಕು..! ಕಣ್ಮಚ್ಚಿ ಕುಳಿತ RTO ಅಧಿಕಾರಿಗಳಿಗೆ ಆಗ್ತಿದ್ಯಾ ಭರ್ತಿ ವಸೂಲಿ.! ಇಲಾಖೆ ಅಧಿಕಾರಿಗಳ ಮಕ್ಕಳು ಹೀಗೆ ಶಾಲಾ ಕಾಲೇಜುಗಳಿಗೆ ಹೋಗ್ತಾರಾ..? ಬಡಪಾಯಿ ಮಕ್ಕಳ ಜೀವದ ಜೊತೆಗೆ ವ್ಯವಹಾರಕ್ಕೆ ಮುಂದಾದ್ರಾ ಸಾರಿಗೆ, RTO ಅಧಿಕಾರಿಗಳು.! ಹಣದ ಹಿಂದೆ ಓಡೋ ಬದಲು ಸ್ವಲ್ಪ ಸಾಮಾಜಿಕ ಕಳಕಳಿಯ ಜೊತೆಗೆ ಕರ್ತವ್ಯ ನಿರ್ವಹಿಸಬೇಕಲ್ವಾ ಅಧಿಕಾರಿಗಳೇ ಸಾರಿಗೆ ಸಚಿವ ಶ್ರೀರಾಮುಲು, ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಎಂಟಿಬಿ ನಾಗರಾಜ್