Wednesday, January 22, 2025

ಏಷಿಯನ್ ಚಾಂಪಿಯನ್ ಶಿಪ್​​ನಲ್ಲಿ ಚಿನ್ನದ ಪದಕ ಗೆದ್ದ ಕನ್ನಡಿಗ

ಬಾಗಲಕೋಟೆ : ಕಿರಗಿಸ್ತಾನ್ ದೇಶದಲ್ಲಿ ನಡೆದ ಏಷಿಯನ್ ಚಾಂಪಿಯನ್ ಶಿಪ್​​ನಲ್ಲಿ ಕುಸ್ತಿ ಪಟು ನಿಂಗಪ್ಪ ಗೆನನ್ನವರ ಚಿನ್ನದ ಪದಕ ಪಡೆದಿದ್ದಾರೆ.

ಕಿರಗಿಸ್ತಾನ್ ದೇಶದಲ್ಲಿ ನಡೆದ ಏಷಿಯನ್ ಚಾಂಪಿಯನ್ ಶಿಪ್​​ನಲ್ಲಿ 45 ಕೆಜಿ ವಿಭಾಗದ ಕುಸ್ತಿ ಪದ್ಯದಲ್ಲಿ ಚಿನ್ನ ಪಡೆದು ಸಾಧನೆ ಮಾಡಿದೆ. ಮುಧೋಳ ನಗರದಲ್ಲಿ ಕುಟುಂಬಸ್ಥರು ಹಿತೈಷಿಗಳ ಸಂಭ್ರಮ ಆಚರಿಸುತ್ತಿದ್ದು, ನಿಂಗಪ್ಪನ ಪೋಷಕರನ್ನ ಸನ್ಮಾನಿಸಿದ್ದಾರೆ.

ಬಡತನದಲ್ಲಿ ಬೆಳೆದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ ಕುಸ್ತಿಪಟು. ಚಿನ್ನದ ಪದಕ ಪಡೆದು ದೇಶಕ್ಕೆ ಕೀರ್ತಿ ತಂದ ರೈತನ ಮಗ ಜೈ ಹನುಮಂತ ಶಾಲೆಯ ಕುಸ್ತಿಗರಡಿಯಲ್ಲಿ ತರಬೇತಿ ಪಡೆದಿದ್ದ ನಿಂಗಪ್ಪ ಸಚಿವ ಗೋವಿಂದ ಕಾರಜೋಳ ಸೇರಿದಂತೆ ಗಣ್ಯರು ಅಭಿನಂದನೆ ಸಲ್ಲಿಸುತ್ತಿದ್ದಾರೆ.

RELATED ARTICLES

Related Articles

TRENDING ARTICLES