Monday, December 23, 2024

ಬೀಜ,ಗೊಬ್ಬರ ಸರಿಯಾಗಿ ಪೊರೈಕೆ ಆಗದೆ ರೈತರು ಕಂಗಾಲು

ಕಾರವಾರ : ಉತ್ತರ ಕನ್ನಡ ಜಿಲ್ಲೆಯಾದ್ಯಂತ ಮುಂಗಾರು ಜೋರಾದಂತೆ ಗೊಬ್ಬರ, ಬಿತ್ತನೆ ಬೀಜ ಸಿಗದೆ ಕೃಷಿ ಚಟುವಟಿಕೆ ಇನ್ನೂ ಚುರುಕುಗೊಳ್ಳದೆ.

ರೈತರ ಜಮೀನಿಗೆ ಸಾಮರ್ಥ್ಯಕ್ಕೆ ಸರಿಯಾಗಿ ಸಿಗದ ಗೊಬ್ಬರ, ಭಿತ್ತನೆ ಬೀಜ ಸರಿಯಾಗಿ ಪೊರೈಕೆ ಆಗದೆ ರೈತಾಭಿ ವರ್ಗ ಕಂಗಾಲಾಗಿದ್ದು, ಪೊರೈಕೆ ಮಾಡಲಾಗಿದೆ ಎಂದು ಹೇಳಿಕೊಂಡೆ ಕಾಲ ಕಳೆಯುತ್ತಿರುವ ಉತ್ತರಕನ್ನಡ ಜಿಲ್ಲೆಯ ಬನವಾಸಿ, ಶಿರಸಿ,ಸಿದ್ದಾಪುರ, ಮುಂಡಗೋಡ ಭಾಗದಲ್ಲಿ ಹೆಚ್ಚಿನ ಸಮಸ್ಯೆ ಎದುರಿಸುತ್ತಿರುವ ರೈತರು ಗೊಬ್ಬರ, ಬೀಜ ಇಲ್ಲದೆ ಈ ಬಾರಿ ಕೃಷಿ ಚಟುವಟಿಕೆಗೆ ಹಿನ್ನಡೆ ಆಗುವ ಸಾಧ್ಯತೆ ಇದೆ.

ಕೃಷಿ ಭೂಮಿಯನ್ನ ಉಳುಮೆ ಮಾಡಿಕೊಂಡಿದ್ದರು ಸಿಗದ ಗೊಬ್ಬರ ಮತ್ತು ಬಿತ್ತನೆ ಬೀಜ ಪ್ರತಿ ಭಾರಿ ಮೇ‌ ಅಂತ್ಯದಲ್ಲಿ ಪೊರೈಕೆ ಆಗುತ್ತಿದ್ದ ರಸಗೊಬ್ಬರ ಆದರೆ ಈ ವರ್ಷ ಜೂನ್ ಮುಗಿಯುತ್ತಾ ಬಂದರು ಸರಿಯಾಗಿ ಪೊರೈಕೆ ಆಗುತ್ತಿಲ್ಲ. ಕೆಲವೆಡೆ ಭೂಮಿ ಹದಗೊಳಿಸಿ ಗೊಬ್ಬರ ಇಲ್ಲದೆ ಹಾಗೆ ಬಿಡಲಾಗಿದೆ. ಹೆಚ್ಚಿನ ಹಣಕೊಟ್ಟು ಖಾಸಗಿ ಅಂಗಡಿಯಲ್ಲಿ ಖರೀದಿಸಬೇಕಾದ ಪರಿಸ್ಥಿತಿ ಎದುರಾಗಿದ್ದು, ಖಾಸಗಿ ಅಂಗಡಿಗಳಿಂದ ಗೊಬ್ಬರ ಖರೀದಿಸಿದರೆ ರೈತರಿಗೆ ಭಾರಿ ಹೊರೆ ಉಂಟಾಗಿದ್ದು, ರೈತರ ಸಮಸ್ಯೆಗೆ ಸರಕಾರ ಸರಿಯಾಗಿ ಸ್ಪಂದಿಸದ ಹಿನ್ನಲೆಯಲ್ಲಿ ಸರಕಾರದ‌ ವಿರುದ್ಧ ರೈತರು ಹಿಡಿಶಾಪ ಹಾಕಿದ್ದಾರೆ.

RELATED ARTICLES

Related Articles

TRENDING ARTICLES