Monday, December 23, 2024

ದ್ರೌಪದಿ ಮುರ್ಮುಗೆ ಜಗನ್‌ ಮೋಹನ್ ರೆಡ್ಡಿ ಬೆಂಬಲ

ನವದೆಹಲಿ : ವೈಎಸ್‌ಆರ್‌ ಕಾಂಗ್ರೆಸ್‌ ಅಧ್ಯಕ್ಷ ಮತ್ತು ಆಂಧ್ರಪ್ರದೇಶ ಸಿಎಂ ಜಗನ್‌ ಮೋಹನ್‌ ರೆಡ್ಡಿ ಗುರುವಾರ ಎನ್‌ಡಿಎ ಅಧ್ಯಕ್ಷೀಯ ಅಭ್ಯರ್ಥಿ ದ್ರೌಪದಿ ಮುರ್ಮು ಅವರಿಗೆ ಬೆಂಬಲ ಸೂಚಿಸಿದ್ದಾರೆ,

YSRCP ಶೇ. 4ರಷ್ಟು ಮತಗಳನ್ನು ಹೊಂದಿದೆ.ಎಸ್‌ಸಿ, ಎಸ್‌ಟಿ, ಬಿಸಿ ಮತ್ತು ಅಲ್ಪಸಂಖ್ಯಾತ ಸಮುದಾಯಗಳ ಪ್ರಾತಿನಿಧ್ಯಕ್ಕೆ ಒತ್ತು ನೀಡುತ್ತಿರುವ ತಮ್ಮ ಪಕ್ಷದ ಆಶಯಕ್ಕೆ ಅನುಗುಣವಾಗಿ ಜಗನ್ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಪಕ್ಷವು ಹೇಳಿಕೆಯಲ್ಲಿ ತಿಳಿಸಿದೆ. ಕಳೆದ ಮೂರು ವರ್ಷಗಳಲ್ಲಿ, ಮುಖ್ಯಮಂತ್ರಿ ಜಗನ್ ಈ ಸಮುದಾಯಗಳ ಉನ್ನತಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿದ್ದಾರೆ ಮತ್ತು ಅವರು ಸಂಪುಟದಲ್ಲಿ ಈ ವರ್ಗಗಳಿಗೆ ಉತ್ತಮ ಪ್ರಾತಿನಿಧ್ಯ ನೀಡಿದ್ದಾರೆ.

ನಿಗದಿತ ಕ್ಯಾಬಿನೆಟ್ ಸಭೆಯ ಕಾರಣ ಮುರ್ಮು ಅವರ ನಾಮಪತ್ರ ಸಲ್ಲಿಕೆಗೆ ಮುಖ್ಯಮಂತ್ರಿ ಜಗನ್ ಹಾಜರಾಗಲು ಸಾಧ್ಯವಾಗಿಲ್ಲ ಎಂದು YSRCP ಹೇಳಿದೆ.

RELATED ARTICLES

Related Articles

TRENDING ARTICLES