Thursday, January 23, 2025

3.500ಗ್ರಾಂ ಚಿನ್ನ ಕದ್ದಿದ್ದ ನಾಲ್ವರು ಕಳ್ಳರು ಅಂದರ್​​

ಬೆಳಗಾವಿ: ಕಳೆದ ತಿಂಗಳು‌ ಖಾಸಗಿ ಬ್ಯಾಂಕ್ ಒಂದರಲ್ಲಿ 3.500ಗ್ರಾಂ ಚಿನ್ನವನ್ನು ಖತರ್ನಾಕ ಕಳ್ಳರು ಕದ್ದಿದ್ದ ಪ್ರಕರಣ ಬೆಳಕಿಗೆ ಬಂದಿತ್ತು. ಆ ಕಳ್ಳರನ್ನು ಇದೀಗ ಬಂಧಿಸುವಲ್ಲಿ ಬೆಳಗಾವಿ ಜಿಲ್ಲಾ ಪೊಲೀಸ್​​ ಅಧಿಕಾರಿಗಳು ಸಫಲರಾಗಿದ್ದಾರೆ.

ಇನ್ನೂ ಓರ್ವನ ಹುಡುಕಾಟ ಜಾರಿಯಲ್ಲಿದೆ. ಹುಸೇನ್ ಮಲಿಕಸಾಬ್ ( 40 ), ಸದ್ದಾಂ ಜಮಖಂಡಿ (22 ), ರಿಯಾಜ್ ಪೈಲವಾನ್ ( 23 ),ಹಾಜಿಸಾಬ್ ಶೇಖ ( 36 ) ಬಂಧಿತ ಆರೋಪಿಗಳು.

ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಹಂದಿಗುಂದ ಗ್ರಾಮದ ಶ್ರೀ ಮಹಾಲಕ್ಷ್ಮಿ ಕೋ ಆಪ್ ಬ್ಯಾಂಕ್​​ನಲ್ಲಿ ಕಳೆದ ತಿಂಗಳು ದರೋಡೆಯಾಗಿತ್ತು. ದರೋಡೆ ಆದ ನಂತರ ಠೇವಣಿ ಇಟ್ಟ 110 ಗ್ರಾಹಕರು ಆತಂಕದಲ್ಲಿದ್ದರು.‌ ಠೇವಣಿದಾರರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೈತರೇ ಇದ್ದರು. ತನಿಖೆ ಶುರು ಮಾಡಿದ ಬೆಳಗಾವಿ ಜಿಲ್ಲಾ ಪೊಲೀಸ್, 4 ಜನರನ್ನು ಬಂಧಿಸಿ ಸುಮಾರು 2.800 ಗ್ರಾಂ ಚಿನ್ನ ವಾಪಸ್ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಬೆಳಗಾವಿ ಎಸ್ಪಿ ಲಕ್ಷ್ಮಣ ನಿಂಬರಗಿ, ಎಎಸ್ಪಿ ನಂದಗಾವಿ ಹಾಗೂ ಅಥಣಿ ವಲಯದ ಪೋಲಿಸ್ ಅಧಿಕಾರಿಗಳ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿತ್ತು. ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಎಲ್ಲ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗಕ್ಕೆ ಬ್ಯಾಂಕಿನ ಆಡಳಿತ ಮಂಡಳಿ ಹಾಗೂ ಸ್ಥಳಿಯರಿಂದ ಸನ್ಮಾನ ಕಾರ್ಯಕ್ರಮ ಕೂಡ ನಡೆಯಿತು.

RELATED ARTICLES

Related Articles

TRENDING ARTICLES