Thursday, January 23, 2025

ಮಾಜಿ ಮಿಸ್ ಬ್ರೆಜಿಲ್ ಗ್ಲೇಸಿ ಕೊರಿಯಾ ನಿಧನ

ಮಾಜಿ ಮಿಸ್ ಬ್ರೆಜಿಲ್ ಗ್ಲೇಸಿ ಕೊರಿಯಾ ನಿಧನ. ಅವರಿಗೆ 27 ವರ್ಷ ವಯಸ್ಸಾಗಿತ್ತು. ಗ್ಲೇಸಿ ಕೊರಿಯಾ ಟಾನ್ಸಿಲ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಚಿಕಿತ್ಸೆ ಸಂದರ್ಭದಲ್ಲೇ ಮೆದುಳಿನ ರಕ್ತಸ್ರಾವ ಮತ್ತು ಹೃದಯಾಘಾತದಿಂದ ನಿಧನರಾಗಿದ್ದಾರೆ.

2018 ರಲ್ಲಿ ಮಿಸ್ ಯುನೈಟೆಡ್ ಕಾಂಟಿನೆಂಟ್ಸ್ ಬ್ರೆಜಿಲ್ ಕಿರೀಟವನ್ನು ಧರಿಸಿದ್ದ ಕೊರಿಯಾ ಟಾನ್ಸಿಲ್​ ಚಿಕೆತ್ಸೆಗೆ ಒಳಗಾಗಿದ್ರು. ಏಪ್ರಿಲ್​ 4 ರಂದು ಹೃದಯಾಘಾತವಾಗಿ 2 ತಿಂಗಳಿಗೂ ಹೆಚ್ಚು ಕಾಲ ಕೋಮಾದಲ್ಲಿದ್ದುರು. ಗ್ಲೇಸಿ ಕೊರಿಯಾ ಅವರ ಮರಣೋತ್ತರ ಪರೀಕ್ಷೆಯಲ್ಲಿ ಟಾನ್ಸಿಲ್​ ಚಿಕೆತ್ಸೆ ವೇಳೆಯೇ ಎಡವಟ್ಟಾಗಿರುವುದು ತಿಳಿದುಬಂದಿದೆ. ಮಾಡೆಲ್ ಆಗಿ ಜನಪ್ರಿಯರಾಗಿದ್ದ ಅವರು ಇನ್ಸ್ಟಾಗ್ರಾಂನಲ್ಲಿ ಸುಮಾರು 56,000 ಕ್ಕೂ ಅಧಿಕ ಅನುಯಾಯಿಗಳನ್ನು ಹೊಂದಿದ್ದರು.

RELATED ARTICLES

Related Articles

TRENDING ARTICLES