Tuesday, December 24, 2024

ಇಲೆಕ್ಟ್ರಿಕ್ ಬೈಕ್​ ಶೋರೂಂನಲ್ಲಿ ಬೆಂಕಿ : 10ಕ್ಕೂ ಹೆಚ್ಚು ಸ್ಕೂಟರ್​​ಗಳು ಭಸ್ಮ

ಮಂಗಳೂರು: ಇಲೆಕ್ಟ್ರಿಕ್ ಸ್ಕೂಟರ್ ಗಳ ಶೋರೂಂ ಬೆಂಕಿಗಾಹುತಿಯಾಗಿದೆ. ಮಂಗಳೂರು ನಗರದ ನಾಗುರಿಯಲ್ಲಿದ್ದ ಒಕಿನಾವ ಕಂಪೆನಿಯ ಸ್ಕೂಟರ್ ಶೋ ರೂಂನಲ್ಲಿ ಇಂದು ಬೆಳಗ್ಗೆ ಬೆಂಕಿ ಕಾಣಿಸಿಕೊಂಡಿದೆ.

ಇನ್ನು, ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತಿಕೊಂಡಿದೆ ಎನ್ನಲಾಗುತ್ತಿದ್ದು ಶೋ ರೂಂನಲ್ಲಿದ್ದ 10ಕ್ಕೂ ಹೆಚ್ಚು ಸ್ಕೂಟರ್ ಗಳು ಸುಟ್ಟು ಹೋಗಿವೆ. ಅಗ್ನಿಶಾಮಕ ದಳದ ಸಿಬ್ಬಂದಿ ಬಂದು ಬೆಂಕಿ ನಂದಿಸಿದ್ದಾರೆ.‌ ನಿನ್ನೆ ರಾತ್ರಿ ಸ್ಕೂಟರ್ ಗಳ ಬ್ಯಾಟರಿಯನ್ನು ಶೋರೂಮ್ ಸಿಬ್ಬಂದಿ ಚಾರ್ಜ್ ಮಾಡಲು ಇಟ್ಟಿದ್ದರು. ಅದರಲ್ಲಿ ಕಿಡಿ ಉಂಟಾಗಿ ಇಡೀ ಶೋರೂಮ್ ಹೊತ್ತಿ ಉರಿದಿದೆ.

RELATED ARTICLES

Related Articles

TRENDING ARTICLES