Monday, December 23, 2024

ಹೊಸ ಚರಿತ್ರೆ ಬರೆಯೋಕೆ ಅಭಿನಯ ಚತುರ ಕಮಿಂಗ್

ಐದು ವರ್ಷಗಳ ಹಿಂದೆ ಸೆಟ್ಟೇರಿದ್ದ ಬಹುನಿರೀಕ್ಷಿತ ಸಿನಿಮಾ ಡಿಯರ್​ ವಿಕ್ರಮ್​ ರಿಲೀಸ್​ ಆಗೋಕೆ ಸಜ್ಜಾಗಿದೆ. ಈ ಚಿತ್ರದ ಮೂಲಕ ಹೊಸ ಚರಿತ್ರೆ ಬರೆಯೋಕೆ ಅಭಿನಯ ಚತುರ ನೀನಾಸಂ ಸತೀಶ್​ ರೆಡಿಯಾಗಿದ್ದಾರೆ. ಸಮಾಜದಲ್ಲಿ ನಡೆಯೋ ಅನ್ಯಾಯದ ವಿರುದ್ಧ ತೊಡೆ ತಟ್ಟಿ ನಿಲ್ಲೋ ಸತೀಶ್​​ ಹೋರಾಟಗಾರನಾಗಿ ರಂಜಿಸೋಕೆ ಬರ್ತಿದ್ದಾರೆ. ಇದೀಗ ಈ ಚಿತ್ರದ ಟ್ರೈಲರ್​ ಸಖತ್​​ ಹೈಪ್​ ಕ್ರಿಯೇಟ್​ ಮಾಡಿದೆ.

ಕೆಲವು ದಿನಗಳ ಹಿಂದೆ ರಿಲೀಸ್ ಆಗಿದ್ದ ಡಿಯರ್​ ವಿಕ್ರಮ್​​ ಟೀಸರ್​ ಚಿತ್ರಪ್ರೇಮಿಗಳ ಹೃದಯ ಗೆದ್ದಿತ್ತು. ಸಖತ್​ ಮೆಚ್ಚುಗೆಗೆ ಪಾತ್ರವಾಗಿದ್ದ ಟೀಸರ್​ ನೋಡಿ ಎಲ್ಲರೂ ಇಂಪ್ರೆಸ್​ ಆಗಿದ್ದರು. ಇದೀಗ ಈ ಚಿತ್ರದ ಟ್ರೈಲರ್​​ ಮತ್ತೊಮ್ಮೆ ಸೌಂಡ್​ ಮಾಡ್ತಿದೆ. ಟ್ರೈಲರ್​ ನೋಡಿದವ್ರಿಗೆ ಸಿನಿಮಾ ಮೇಲಿನ ಕ್ಯೂರಿಯಾಸಿಟಿ ದುಪ್ಪಟ್ಟಾಗಿದೆ. ಸಿನಿಮಾದಲ್ಲಿ ಗಟ್ಟಿ ಕಥೆ, ಪರಿಣಾಮಕಾರಿ ಸಂದೇಶ, ಮನಮುಟ್ಟೋ ಅಭಿನಯವಂತೂ ಖಂಡಿತ ಇದೆ. ನೀನಾಸಂ ಸತೀಶ್​​, ಶ್ರದ್ಧಾ ಶ್ರೀನಾಥ್​​ ಅಭಿನಯದ ಡಿಯರ್​ ವಿಕ್ರಮ್​ ನೇರವಾಗಿ ಓಟಿಟಿ ಯಲ್ಲಿ ರಿಲೀಸ್ ಆಗ್ತಿದೆ.

ಕೆ.ಎಸ್​​ ನಂದೀಶ್​​ ನಿರ್ದೇಶನದಲ್ಲಿ ಅದ್ಭುತವಾಗಿ ಮೂಡಿ ಬಂದಿರೋ ಸಿನಿಮಾದಲ್ಲಿ ವಶಿಷ್ಠ ಸಿಂಹ, ಸೋನು ಗೌಡ, ಅಚ್ಯುತ್​​ಕುಮಾರ್​ ಸೇರಿದಂತೆ ಮುಂತಾದ ಕಲಾವಿದರು ಬಣ್ಣ ಹಚ್ಚಿದ್ದಾರೆ.  ಜೂನ್​ 30ಕ್ಕೆ ಓಟಿಟಿಯಲ್ಲಿ ನೇರವಾಗಿ ರಿಲೀಸ್​ ಆಗಲಿದೆ ಡಿಯರ್​ ವಿಕ್ರಮ್​ ಸಿನಿಮಾ. ಹುಟ್ಟು ದರಿದ್ರ ಆದರೂ ಸಾವು ಮಾತ್ರ ಚರಿತ್ರೆಯಾಗಬೇಕು ಅನ್ನೋ ಕಾನ್ಸೆಪ್ಟ್​ ಮೇಲೆ ರಿಸ್ಕಿ ಕಥೆ ಹೇಳಲು ಹೊರಟಿದೆ ಚಿತ್ರತಂಡ.

ರಾಕೇಶ್​ ಆರುಂಡಿ, ಫಿಲ್ಮ್ ಬ್ಯೂರೋ, ಪವರ್ ಟಿವಿ

RELATED ARTICLES

Related Articles

TRENDING ARTICLES