ಬೆಂಗಳೂರು: ನನಗೆ ಮತ್ತು ನಮ್ಮ ರಾಷ್ಟ್ರೀಯ ನಾಯಕರಿಗೆ ಇನ್ನು ಇಡಿಯವರು ಪ್ರಶ್ನೆ ಮಾಡ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ತಿಳಿಸಿದರು.
ಇಡಿ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸೋನಿಯಾ ಗಾಂಧಿಯವರು ಟೈಮ್ ಕೇಳಿದ್ದಾರೆ. ಅವರು ಪ್ರಶ್ನೆ ಮಾಡಲಿ ಐದು ದಿನ ಪ್ರಶ್ನೆ ಮಾಡುವಂತಹದ್ದು ಏನು ಇದೆ ಎಂಬುದೇ ನನಗೆ ಅರ್ಥವಾಗ್ತಿಲ್ಲ. ನಮಗೆ ನ್ಯಾಯ ದೊರಕುತ್ತದೆ ಅನ್ನೋ ವಿಶ್ವಾಸವಿದೆ. ನನಗೆ ಆರು ತಿಂಗಳಲ್ಲಿ ಚಾರ್ಜ್ ಶೀಟ್ ಹಾಕಬೇಕಿತ್ತು, ನೋಡೋಣ ಯಾವಾಗ ಮಾಡ್ತಾರೋ. ಅದೇನು ಉತ್ತರ ಕೊಡಬೇಕು ಕೊಡ್ತೀನಿ ಎಂದರು.
ಸಮನ್ಸ್ಗೆ 31 ಅಥವಾ 1ನೇ ತಾರೀಖು ಹೋಗಬೇಕು. ೧ನೇ ತಾರೀಖಿಗೆ ಇಡಿ ವಿಚಾರಣೆಗೆ ಹೋಗ್ತೀನಿ. ಜುಲೈ ೧ರಂದು ನ್ಯಾಯಲಯಕ್ಕೆ ಹಾಜರಾಗುತ್ತೇನೆ ಎಂಬ ಮಾಹಿತಿ ತಿಳಿಸಿದರು.
ಪ್ರಧಾನಿ ಮೋದಿ ಬಂದಾಗ ೨೪ ಕೋಟಿ ಖರ್ಚು ಹಾಗೂ ರಸ್ತೆಗಳಿಗೆ ಕಳಪೆ ಡಾಂಬರೀಕರಣ ಮಾಡಿದ್ದಾರೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ,ಗುಂಡಿಗಳ ಬಗ್ಗೆ ದೊಡ್ಡ ದೊಡ್ಡ ಮಾಧ್ಯಮದವರು ಅಭಿಯಾನ ಮಾಡಬೇಕು. ಜನರಿಗೆ ತೊಂದರೆಯಾಗುತ್ತಿದೆ ಎಂದಾಗ ಗುಂಡಿ ಮುಚ್ಚಿಲ್ಲ. ಅದೇ ನಾಯಕರು ಬರ್ತಾರೆ ಎಂದಾಗ ಗುಂಡಿ ಮುಚ್ಚಿದ್ದಾರೆ. ಅವರಿಗೆ ಜನ ಮುಖ್ಯ ಅಲ್ಲ ಅವರ ನಾಯಕರು ಅಲ್ಲಾಡಬಾರದು ಅಷ್ಟೇ.
ಇನ್ನು ಕಾಂಗ್ರೆಸ್ ಕಚೇರಿಯಲ್ಲಿ ಬೋರ್ಡ್ ಹಾಕಿದ್ದಕ್ಕೆ ನೊಟೀಸ್ ಕೊಟ್ಟದ್ದಾರೆ. ಆದ್ರೆ ಅವರು ಎಲ್ಲಾ ಕಡೆ ಫ್ಲೆಕ್ಸ್ ಹಾಕಿದ್ರು ನೊಟೀಸ್ ಕೊಡಲ್ಲ. ನಾವೂ ಬಿಜೆಪಿ ನಾಯಕರು ಮಾಡಿದ ಕಾನೂನಿನ ತಪ್ಪುಗಳ ವಿರುದ್ಧವೂ ಹೋರಾಟ ಮಾಡುತ್ತಿದ್ದೇವೆ. ನಾವು ಕಾನೂನಿನ ಹೋರಾಟ ಮಾಡುತ್ತೇವೆ ಎಂದು ಬಿಜೆಪಿ ಸರ್ಕಾರದ ವಿರುದ್ಧ ಡಿಕೆಶಿ ಕಿಡಿಕಾಡಿದರು.