Monday, December 23, 2024

ಡಿಕೆಶಿ ವಿರುದ್ಧ ಮಾಜಿ ಸಚಿವ ಎಂ.ಆರ್​.ಸೀತಾರಾಮ್​ ಸಮರ

ಬೆಂಗಳೂರು: ರಾಜ್ಯ ಕಾಂಗ್ರೆಸ್​ನಲ್ಲಿ ಕೋಲ್ಡ್ ವಾರ್ ಪಾಲಿಟಿಕ್ಸ್ ಜೋರಾಗ್ತಿದೆ.. ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಆಪ್ತ ಕೂಟದಲ್ಲಿನ ಒಡಕು ಇಕ್ಕಟ್ಟು ತಂದಿಟ್ಟಿದೆ.. ಡಿಕೆಶಿ ವಿರುದ್ಧ ಸಿದ್ದರಾಮಯ್ಯ ಆಪ್ತ ಎಂ.ಆರ್.ಸೀತಾರಾಮ್ ಬಂಡಾಯವೆದ್ದಿದ್ದಾರೆ.‌ ತಮ್ಮ ಬೆಂಬಲಿಗರ ಸಭೆ ನಡೆಸಿ, ಪಕ್ಷ ತೊರೆಯೋ ಬಗ್ಗೆಯೂ ಎಚ್ಚರಿಕೆ ನೀಡಿದ್ದಾರೆ.

MLC ಟಿಕೆಟ್ ಕೈತಪ್ಪಿದ್ದಕ್ಕೆ ಕಾಂಗ್ರೆಸ್ ನಾಯಕರ ವಿರುದ್ಧ ಎಂ.ಆರ್.ಸೀತಾರಾಮ್ ತಿರುಗಿ ಬಿದ್ದಿದ್ದಾರೆ.. ಟಿಕೆಟ್ ಕನ್ಫರ್ಮ್ ಆಗಿದ್ರೂ ಕೂಡ ದೆಹಲಿಗೆ ಹೋಗಿ ಪಿತೂರಿ ನಡೆಸಿದ್ದಾರೆ ಅಂತಾ ಡಿಕೆಶಿ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ರು.‌. ಅರಮನೆ ಮೈದಾನದಲ್ಲಿ ಸಾವಿರಾರು ಬೆಂಬಲಿಗರು ಹಾಗೂ ಬಲಿಜ ಸಮುದಾಯ ಮುಖಂಡರೊಂದಿಗೆ ಸಮಾಲೋಚನಾ ಸಭೆ ನಡೆಸಿದ್ರು.. ಸಭೆಯಲ್ಲಿ ಶಾಸಕ ಸಂಗಮೇಶ್, ಮಾಜಿ ಶಾಸಕ ಎಂ.ಡಿ.ಲಕ್ಷ್ಮೀನಾರಾಯಣ್, ಮಾಜಿ ಮೇಯರ್ ಹುಚ್ಚಪ್ಪ ಸೇರಿ ಹಲವು ನಾಯಕರು ಸಾಥ್ ನೀಡಿದ್ರು..

ಈ ವೇಳೆ ಡಿಕೆಶಿ ವಿರುದ್ಧ ವಾಗ್ದಾಳಿ ನಡೆಸಿದ ಎಂ.ಆರ್​.ಸೀತಾರಾಮ್​, ಕೆಲವರಿಗೆ ಮಿನಿಸ್ಟರ್ ಪಟ್ಟ ಸಿಕ್ಕರೆ ಬ್ಯುಸಿನೆಸ್ ಮಾಡ್ತಾರೆ.. ನಾನು ಕೊಡಗು ಜಿಲ್ಲಾ ಉಸ್ತುವಾರಿಯಾಗಿದ್ದಾಗ ಏನೇನ್ ಮಾಡಿದ್ದೀನಿ ಅಂತಾ ಹೋಗಿ ಕೇಳಿ.. 40 ವರ್ಷದಿಂದ ಪಕ್ಷಕ್ಕೆ ಸೇವೆ ಮಾಡಿದ್ದೇನೆ.. ಟಿಕೆಟ್ ಸಿಗದಿದ್ದಾಗ ಕರೆದು ಮಾತಾಡಿಸುವ ಸೌಜನ್ಯ ಪಕ್ಷದ ನಾಯಕರು ಕಳೆದುಕೊಂಡಿದ್ದಾರೆ.. ರಾಜ್ಯ ಕಾಂಗ್ರೆಸ್ ಉಸ್ತುವಾರಿ, ಪಕ್ಷದ ಚುಕ್ಕಾಣಿ ಹಿಡಿದವರ ಮೇಲೆ ಬೇಜಾರಿದೆ.. ಮುಂದಿನ ತಿಂಗಳು ಬೃಹತ್ ಸಮಾವೇಶ ನಡೆಸಿ ಮಹತ್ವದ ನಿರ್ಧಾರ ತೆಗೆದುಕೊಳ್ತೀನಿ ಅಂತಾ ಬಿಜೆಪಿ ಸೇರ್ಪಡೆ ಬಗ್ಗೆ ಪರೋಕ್ಷವಾಗಿ ಮಾತನಾಡಿದ್ರು.

ಡಿ.ಕೆ.ಶಿವಕುಮಾರ್ ಹಾಗೂ ನಲಪಾಡ್ ಗುರು-ಶಿಷ್ಯರ ವಿರುದ್ಧವೂ ಎಂ.ಆರ್.ಸೀತಾರಾಮ್ ಕಿಡಿಕಾರಿದ್ರು.. ಯೂತ್ ಕಾಂಗ್ರೆಸ್ ನಲ್ಲಿ ಡಿಸ್​ಕ್ವಾಲಿಫೈ ಆದ ಅಭ್ಯರ್ಥಿಯನ್ನ ರೆಕಮೆಂಡ್ ಮಾಡಿ ರಕ್ಷಾ ರಾಮಯ್ಯ ವಿರುದ್ಧ ನಿಲ್ಲಿಸಿದ್ರು. ರಕ್ಷಾ ರಾಮಯ್ಯ ಮೂರು ದಿನದ ಮುಂಚೆಯೇ ರಾಜೀನಾಮೆ ಕೊಟ್ರು.. ಮೂರು ಬಾರಿ ನನಗೆ ಟಿಕೆಟ್ ತಪ್ಪಿಸಿದ್ರು. ದೆಹಲಿಗೆ ಹೋಗಿ ಪಿತೂರಿ ನಡೆಸಿದ್ರು ಅಂತಾ ಆಕ್ರೋಶ ಹೊರಹಾಕಿದ್ರು.

ಕಾಂಗ್ರೆಸ್ ವಿರುದ್ಧ ಬಲಿಜ ಸಮುದಾಯದ ನಾಯಕರು ಕೂಡ ರೊಚ್ಚಿಗೆದ್ದಿದ್ದಾರೆ.. ಪಕ್ಷದಲ್ಲಿ ಸೂಕ್ತ ಸ್ಥಾನ ನೀಡದಿದ್ರೆ, ಮುಂದಿನ ಚುನಾವಣೆಯಲ್ಲಿ ನಿಮ್ಮ ಶಾಸಕರ ಸಂಖ್ಯೆ ಅರ್ಧಕ್ಕೆ ಇಳಿಯುತ್ತೆ ಅಂತಾ ಎಚ್ಚರಿಕೆ ಕೊಟ್ಟಿದ್ದಾರೆ.

ಈಗಾಗಲೇ ಪಕ್ಷದ ನಾಯಕರ ನಡವಳಿಕೆಯಿಂದ ಎಂ.ಆರ್​.ಸೀತಾರಾಮ್​ ಒಂದು ಹೆಜ್ಜೆ ಹೊರಗಿಟ್ಟಿದ್ದಾರೆ.. ಮುಂದಿನ ತಿಂಗಳು ಬೃಹತ್ ಸಮಾವೇಶ ನಡೆಸಲು ನಿರ್ಧಾರ ಮಾಡಿದ್ದು, ಬಿಜೆಪಿ ಸೇರ್ಪಡೆಯಾಗೋ ಸಾಧ್ಯತೆ ಇದೆ.

ಆನಂದ್ ನಂದಗುಡಿ, ಸ್ಪೆಷಲ್ ಕರೆಸ್ಪಾಂಡೆಂಟ್, ಪವರ್ ಟಿವಿ

RELATED ARTICLES

Related Articles

TRENDING ARTICLES