ಬೆಂಗಳೂರು: ಭಾರತೀಯರನ್ನ ಮೋಸ ಮಾಡ್ತಿದ್ದ ಚೈನಾ ಆ್ಯಪ್ ಬ್ಯಾನ್ ಮಾಡುವಂತೆ ಕೇಂದ್ರ ಸರ್ಕಾರ ಸೂಚನೆ ನೀಡಿದ್ದಾರೆ.
ಚೀನಿ ಆ್ಯಪ್ ಗಳ ವಿರುದ್ಧ ಸಮರ ಸಾರಿದ್ದ ಪವರ್ ಟಿವಿ, ಲೋನ್ ಕೊಡುವ ನೆಪದಲ್ಲಿ ಚೀನಿ ಆ್ಯಪ್‌ಗಳಿಂದ ಜನರಿಗೆ ಮೋಸ ಮಾಡಲಾಗುತ್ತಿದ್ದು, ಸಾಲದ ಜೊತೆಗೆ ಸಾರ್ವಜನಿಕರ ಮಾನ ಹರಾಜು ಹಾಕುತ್ತಿತ್ತು. ಈ ಬಗ್ಗೆ ಸವಿಸ್ತಾರವಾಗಿ ವರದಿ ಮಾಡಿದ್ದ ಪವರ್ ಟಿವಿ ಚೀನಿ ಆ್ಯಪ್ಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೇಂದ್ರ ಸರ್ಕಾರ ಸೂಚನೆಯನ್ನು ನೀಡಿದ್ದಾರೆ.
ಇನ್ನು ಕಳೆದ 6 ತಿಂಗಳಿಂದ 8 ಸೆನ್ ಪೊಲೀಸ್ ಠಾಣೆಯಲ್ಲಿ 600 ಕ್ಕೂ ಹೆಚ್ಚು ದೂರು ನೀಡಿದ್ದು, ಸುಮಾರು 130 ಚೀನಿಯ ಲೋನ್ ಆ್ಯಪ್ಗಳು ನಿಷ್ಕ್ರಿಯಗೊಂಡಿದೆ. ಅದಲ್ಲದೇ ಸುಮಾರು 160 ಬ್ಯಾಂಕ್ ಖಾತೆ ಬ್ಲಾಕ್ ಮಾಡಿ 8 ರಿಂದ 10 ಕೋಟಿ ಸೀಜ್ ಮಾಡಿದ ಪೊಲೀಸರು ಚೀನಿ ಆ್ಯಪ್ ಗಳನ್ನು ನಿಷ್ಕ್ರಿಯಗೊಳಿಸುವಲ್ಲಿ ಬೆಂಗಳೂರು ಪೊಲೀಸರು ಸಕ್ಸಸ್ ಆಗಿದ್ದಾರೆ.