Monday, December 23, 2024

ಬಿಡದಿಯಲ್ಲಿ ತಟ್ಟೆ ಇಡ್ಲಿ ಸವಿದ ಶಿವಣ್ಣ ಭೈರಾಗಿ ಚಿತ್ರತಂಡ

ರಾಮನಗರ: ಭೈರಾಗಿ‌ ಚಿತ್ರದ ಪ್ರೀರೀಲೀಸ್ ಗಾಗಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ಚಿತ್ರತಂಡ ಇಂದು ರಾಮನಗರಕ್ಕೆ ಆಗಮಿಸಿದರು. ಪತ್ನಿ ಗೀತಾ ಅವರ ಜೊತೆಗೆ ಸ್ವತಃ ಶಿವಣ್ಣ ಅವರೇ ಕಾರು ಡ್ರೈವ್ ಮಾಡಿಕೊಂಡು ಬಂದಿದ್ರು.

ಬೆಳಿಗ್ಗೆ ಬಿಡದಿಗೆ ಆಗಮಿಸಿದ ಚಿತ್ರತಂಡಕ್ಕೆ ಬಿಡದಿಯಲ್ಲಿ ಅದ್ದೂರಿ ಸ್ವಾಗತ ಕೋರಲಾಯಿತು, ಬಿಡದಿಯಲ್ಲಿ ತಟ್ಟೆ ಇಡ್ಲಿ ಸವಿದ ಚಿತ್ರತಂಡ ಭೈರಾಗಿ ಚಿತ್ರದ ಪ್ರಮೋಶನ್ ಮಾಡಿದ್ರು, ಅಲ್ಲಿಂದ ನೇರವಾಗಿ ರಾಮನಗರಕ್ಕೆ ಆಗಮಿಸಿದ ನಟ ಶಿವರಾಜ್ ಕುಮಾರ್, ಡಾಲಿ ಧನಂಜಯ್ ನಿರ್ಮಾಪಕ ಕೃಷ್ಣ ಸಾರ್ಥಕ್ ಅವರಿಗೆ ಡೊಳ್ಳು, ಬಾರಿಸುವ ಹಾಗೂ ಹೂ ಮಳೆ ಸುರಿಸುವ ಮೂಲಕ ಸಾವಿರಾರು ಅಭಿಮಾನಿಗಳು ಚಿತ್ರತಂಡಕ್ಕೆ ಅದ್ದೂರಿ ಸ್ವಾಗತ ಕೋರಿದರು.

ಇದೇ ವೇಳೆ ಮಾತನಾಡಿದ ನಟ ಶಿವರಾಜ್ ಕುಮಾರ್ ಪ್ರೀತಿ ಅನ್ನೋದು ಹೃದಯದಲ್ಲಿ ಇರಬೇಕು, ಅದನ್ನು ಬಾಯಲ್ಲಿ ಹೇಳೊಕೆ ಆಗೊಲ್ಲ, ಅಪ್ಪು ಕಳೆದುಕೊಂಡು ನಿಮಗೆ ಎಷ್ಟು ನೋವಿದ್ಯೋ ಅದರ ನೂರರಷ್ಟು ನೋವು ನಮಗೂ ಇದೆ. ನಿಮಗೆ ಇಷ್ಟು ನೋವಿದೆ ಅಂದ್ರೆ ಅಣ್ಣನಾದ ನನಗೆ ಎಷ್ಟು ನೋವಿರಬೇಕು ಹೇಳಿ. ಅಪ್ಪು ಎಲ್ಲೂ ಹೋಗಿಲ್ಲ ನಮ್ಮಲ್ಲೇ ಇದ್ದಾನೆ ಅಂತಾ ಭಾವಿಸಿಕೊಂಡು ಅಪ್ಪು ಮಾಡಿರೋ ಕೆಲಸಗಳನ್ನು ಮುಂದುವರಿಸಿಕೊಂಡು ಹೋಗಬೇಕು ಅನ್ನೋ ಮಾತುಗಳನ್ನು ಆಡಿದ್ರು, ಈ ವೇಳೆ ಶಿವಣ್ಣನ ಜೊತೆ ಸೆಲ್ಪಿ ತೆಗೆದುಕೊಳ್ಳಲು ಅಭಿಮಾನಿಗಳು ಮುಗಿಬಿದ್ದರು.

ನಂತರ ಬೊಂಬೆ ನಗರಿ ಚನ್ನಪಟ್ಟಣಕ್ಕೆ ಹೊರಟ ಚಿತ್ರ ತಂಡಕ್ಕೆ ಅಭಿಮಾನಿಗಳು ಅದ್ದೂರಿ ಸ್ವಾಗತ ಕೋರಿದ್ರು, ಬೆಂಗಳೂರು- ಮೈಸೂರು ಹೆದ್ದಾರಿಯ ಪಕ್ಕದಲ್ಲಿ ನಿಂತುಕೊಂಡ ಸಾವಿರಾರು ಅಭಿಮಾನಿಗಳು ಶಿವಣ್ಣನನ್ನು ನೋಡಲು ಮುಗಿಬಿದ್ದರು.

RELATED ARTICLES

Related Articles

TRENDING ARTICLES