Friday, January 10, 2025

‘ಭೀಮ’ನ ದುನಿಯಾಗೆ ಬಂದ ಈ ಗಿರಿಜಾ ಯಾರು ಗೊತ್ತಾ..?

ಸಿನಿದುನಿಯಾದಲ್ಲಿ ಇದೀಗ ಸಲಗ ನಡೆದದ್ದೆ ದಾರಿ. ಸ್ಯಾಂಡಲ್​​ವುಡ್​​ ಸಲಗ ದುನಿಯಾ ವಿಜಯ್​​ ನಿರ್ದೇಶಕನಾಗಿ ಸಕ್ಸಸ್​  ಕಂಡ ಮೇಲೆ ಮುಲಾಜಿಲ್ಲದೇ ಮತ್ತೊಂದು ಸಿನಿಮಾಗೆ ಕೈ ಹಾಕಿಬಿಟ್ರು. ಭೀಮನ ಅವತಾರದಲ್ಲಿ ಮತ್ತೊಂದು ಭೂಗತ ಲೋಕದ ಕರಾಳ ಕಥೆಯನ್ನು ಬಿಚ್ಚಿಡೋಕೆ ಸಜ್ಜಾಗಿಬಿಟ್ರು. ಯೆಸ್​​.. ಇದ್ರ ಜೊತೆಯಲ್ಲಿ ಭೀಮ ಚಿತ್ರದ ಹೊಸ ಪಾತ್ರವನ್ನು ಪರಿಚಯಿಸೋ ಮೂಲಕ ಮತ್ತೊಮ್ಮೆ ಸೆನ್ಸೇಷನ್​ ಕ್ರಿಯೇಟ್​ ಮಾಡಿದೆ ಭೀಮ ಚಿತ್ರತಂಡ.

‘ಭೀಮ’ನ ದುನಿಯಾಗೆ ಬಂದ ಈ ಗಿರಿಜಾ ಯಾರು ಗೊತ್ತಾ..?

ಪೊಲೀಸ್​ ಡ್ರೆಸ್​​​​ನಲ್ಲಿ ಗಿರಿಜಾ ಮಿಂಚಿಂಗ್​​..ಭೀಮ ರಾಕಿಂಗ್​​

ಫಸ್ಟ್​ ಲುಕ್​ ನೋಡಿ ವಾವ್ಹ್​ ಎಂದಿದ್ದ ಪ್ರೇಕ್ಷಕರು

ಭಯಾನಕ ಕಥೆ ಹೇಳಲು ಹೊರಟ ​ ಕರಿಚಿರತೆ

ಸಲಗ ಸಿನಿಮಾ ಸಕ್ಸಸ್​ ಬಳಿಕ ಭೀಮ ಚಿತ್ರದ ಘೋಷಣೆ ಮಾಡಿದ ದುನಿಯಾ ವಿಜಯ್​​ ಚಿತ್ರರಸಿಕರಿಗೆ ಸರ್ಪ್ರೈಸ್​ ಕೊಟ್ಟರು. ಮತ್ತೊಮ್ಮೆ  ಭೂಗತ ಪ್ರಪಂಚದಲ್ಲಿ ನಡೆಯೋ ನಗ್ನ ಸತ್ಯಗಳನ್ನು ಬಿಚ್ಚಿಡೋಕೆ ಕರಿಚಿರತೆ ಕ್ಯಾಪ್​​ ತೊಟಿದ್ದಾರೆ. ಭೀಮ ಮೋಷನ್​ ಪೋಸ್ಟರ್​ ನೋಡಿದ ಮೇಲಂತೂ ಚಿತ್ರದ ಮೇಲಿನ ಕುತೂಹಲ, ಕಾತರ ಡಬಲ್​ ಆಗಿದ್ದಂತೂ ಸತ್ಯ.

ಮುಖಕ್ಕೆ ಬಿದ್ದಿರುವ ಮಾರ್ಕ್​​​, ರಕ್ತ ಚಿಮ್ಮುತ್ತಿರುವ  ಹಣೆ, ಜೊತೆಯಲ್ಲಿ ಮುಖಕ್ಕೆ ಕಟ್ಟಿರೋ ಮಾಸ್ಕ್​​ ನೋಡಿದವರೂ ಪೆಚ್ಚಾಗಿ ಹೋಗಿದ್ರೂ. ಹಿಂದೆ ಸೈಲೆಂಟಾಗಿ ನಿಂತಿದ್ದ ಆರ್​ ಎಕ್ಸ್​ 100 ಬೈಕ್​​ ರೋಚಕತೆಯನ್ನು ಡಬಲ್​ ಮಾಡಿತ್ತು. ಇದ್ರ ಜೊತೆಯಲ್ಲಿ ಕೆಣಕದಿದ್ರೆ ಕ್ಷೇಮ ಅನ್ನೋ ಅಡಿಬರಹ ಭೀಮನ ಕೋಪ ಎಂಥದ್ದು ಅನ್ನೋದನ್ನು ಸಾಭೀತು ಮಾಡುತ್ತೆ. ಇದೀಗ ಚಿತ್ರತಂಡದಿಂದ ಗಿರಿಜಾ ಅನ್ನೋ ರೋಲ್​​ ಇಂಟ್ರೂಡ್ಯುಸ್​ ಮಾಡಿದ್ದು ಭೀಮನ ಗರಡಿಗೆ ಮತ್ತೊಬ್ಬರ ಎಂಟ್ರಿ ಆಗಿದೆ.

ಮೊದಲ ಬಾರಿಗೆ ಆ್ಯಕ್ಷನ್​ ಕಟ್​ ಹೇಳಿ ಸಕ್ಸಸ್​ ಕಂಡಿದ್ದ ದುನಿಯಾ ವಿಜಯ್​ ಮತ್ತೊಂದು ವಿಭಿನ್ನ ಕಥೆಯೊಂದಿಗೆ ಎಲ್ಲರು ಹುಬ್ಬೇರಿಸಲು ಹೊರಟಿದ್ದಾರೆ. ಇದ್ರ ಜೊತೆಯಲ್ಲಿ ಚಿತ್ರದ ಮೇಕಿಂಗ್​ ವೀಡಿಯೋ ಕೂಡ ಎಲ್ಲರ ಕಣ್ಣರಳಿಸುವಂತೆ ಮಾಡಿದೆ. ಮೊದಲಿಗೆ ಡ್ಯಾಗನ್​ ಮಂಜು ಅನ್ನೋ ಬಾಡಿ ಬಿಲ್ಡರ್​ ಪರಿಚಯಿಸಿದ್ದ ದುನಿಯಾ ವಿಜಯ್​​ ಎಲ್ಲರಿಗೂ ಶಾಕ್​ ಕೊಟ್ಟಿದ್ರು. ಭೀಮ ಹಾಗೂ ಡ್ರ್ಯಾಗನ್​ ಮಂಜು ನಡುವೆ ಬೆಚ್ಚಿ ಬೀಳಿಸೋ  ಜಟಾಪಟಿ ನಡೆಯೋ ಸುಳಿವು ಕೊಟ್ಟಿದ್ದರು.

ಇದೀಗ ಭೀಮ ಚಿತ್ರತಂಡದಿಂದ ಗಿರಿಜಾ ಅನ್ನೋ ಹೊಸ ಪಾತ್ರದ ಪರಿಚಯವಾಗಿದೆ. ಗಿರಿಜಾ ಪೊಲೀಸ್​ ರೋಲ್​ನಲ್ಲಿ ಕೆಂಗಣ್ಣಿನಿಂದ ನೋಡ್ತಾ ಇದ್ದಾರೆ. ಬಹುಶಃ ಈ ಸಿನಿಮಾದಲ್ಲಿ ಈ ಪಾತ್ರಕ್ಕೆ ಪ್ರಾಮುಖ್ಯತೆ ಇರೋದಂತೂ ಖಂಡಿತ ನಿಜ. ಕೋಪದಿಂದ ಕೆಂಡ ಕಾರುತ್ತಿರೋ ಗಿರಿಜಾ ಸಿನಿಮಾದಲ್ಲಿ ಏನ್ ಹವಾ ಮಾಡ್ತಾರೋ ಕಾದು ನೋಡ್ಬೇಕು.

ಸಲಗ ಚಿತ್ರದಂತೆ ಈ ಸಿನಿಮಾದಲ್ಲೂ ಕೂಡ ಸಮಾಜದಲ್ಲಿ ನಡೆಯೋ ಅನ್ಯಾಯಗಳ ಕುರಿತಾಗಿ ಹೇಳಲಾಗಿದೆಯಂತೆ. ಭೀಮ ಚಿತ್ರಕ್ಕೆ ಚರಣ್​ ರಾಜ್​ ಸಂಗೀತವಿದ್ದು ಸಿಕ್ಕಾಪಟ್ಟೆ ನಿರೀಕ್ಷೆ ಹುಟ್ಟಿಸಿದೆ. ಮಾಸ್ತಿಯ ಖಡಕ್​ ಸಂಭಾಷಣೆ ಚಿತ್ರಕ್ಕೆ ಪ್ಲಸ್​ ಆಗಲಿದೆ. ಶಿವುಸೇನಾ ಕ್ಯಾಮೆರಾ ಕೈಚಳಕ ಹೊಸ ಮ್ಯಾಜಿಕ್​ ಮಾಡೋದಂತೂ ಪಕ್ಕಾ. ಜಗದೀಶ್​ ಹಾಗೂ ಕೃಷ್ಣ ಸಾರ್ಥಕ್​ ನಿರ್ಮಾಣದಲ್ಲಿ ಅದ್ದೂರಿಯಾಗಿ ಮೂಡಿ ಬರ್ತಿರೋ ಭೀಮನ ಖದರ್​ ನೋಡೋಕೆ ಸ್ವಲ್ಪ ದಿನ ಕಾಯಲೇಬೇಕು.

ರಾಕೇಶ್​ ಆರುಂಡಿ, ಫಿಲ್ಮ್​ ಬ್ಯುರೋ, ಪವರ್​​ ಟಿವಿ.

RELATED ARTICLES

Related Articles

TRENDING ARTICLES