Thursday, January 23, 2025

BBMP ಹೊಸ ವಾರ್ಡ್​ಗಳಿಗೆ ಇತಿಹಾಸ ಪುರುಷರ ಹೆಸರು

ಬೆಂಗಳೂರು: ಸಿಲಿಕಾನ್​ ಸಿಟಿಯ ಕೇಂದ್ರಬಿಂದುವಾಗಿರೋ ಬಿಬಿಎಂಪಿಯ ಮೇಲೂ RSS ಹಾಗೂ BJP ತನ್ನ ಪ್ರಭಾವ ಬೀರಿದೆ. ಪಠ್ಯಪುಸ್ತಕವಾಯ್ತು ಈಗ ಬಿಬಿಎಂಪಿಯ ಸರದಿ. ಅಲ್ಲದೇ ಬಿಬಿಎಂಪಿಯಲ್ಲೂ ತನ್ನ ಲೆಕ್ಕದಾಟವಾಡಲು ಶುರುಮಾಡಿದೆ. 243 ವಾರ್ಡ್‌ಗಳ ಡೀಲಿಮೀಟೇಶನ್‌ಗೆ ಕೇಶವಕೃಪದಲ್ಲೇ ಬ್ಲೂಪ್ರಿಂಟ್ ಸಿದ್ದವಾಗಿದೆ ಹೀಗಂತ ಜನಸಾಮಾನ್ಯರು ಹೇಳ್ತಿದ್ದಾರೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವಾರ್ಡ್‌ ಮರುವಿಂಗಡಣಾ ಕಾರ್ಯ ಅಂತ್ಯಗೊಂಡಿದೆ. 198 ಇದ್ದ ವಾರ್ಡ್‌ಗಳ ಸಂಖ್ಯೆಯನ್ನು ಬಿಬಿಎಂಪಿ 243ಕ್ಕೆ ಏರಿಸಿದೆ. ರಾಜ್ಯ ಸರ್ಕಾರ ಕೂಡ 243 ವಾರ್ಡ್‌ಗಳಿಗೆ ಅನುಮೋದನೆ ನೀಡಿದ್ದು, ನಿನ್ನೆ ಈ ಕುರಿತ ರಾಜ್ಯಪತ್ರವನ್ನೂ ಹೊರಡಿಸಿದೆ.

15 ದಿನಗಳ ಒಳಗೆ ಆಕ್ಷೇಪಣೆ ಸಲ್ಲಿಸಲು ಅವಕಾಶವನ್ನೂ ನೀಡಿದೆ. ಇನ್ನು, ಇಂದು ಇದೇ ವಿಚಾರವಾಗಿ ಬಿಬಿಎಂಪಿ ಮುಖ್ಯ ಆಯುಕ್ತರ ಅಧ್ಯಕ್ಷತೆಯಲ್ಲಿ ಸುದ್ದಗೋಷ್ಠಿ ಕರೆಯಲಾಗಿತ್ತು. ಹಾಗಿದ್ರೆ, ಏನೆಲ್ಲಾ ವಿಚಾರಗಳನ್ನು ಆಯುಕ್ತರು ಹಂಚಿಕೊಂಡ್ರು ಅನ್ನೋ ಮಾಹಿತಿ ಇಲ್ಲಿದೆ.

2011ರ ಜನಗಣತಿ ಆಧರಿಸಿ ವಾರ್ಡ್​ ವಿಂಗಡಣೆ :

2011ರ ಜನಗಣತಿ ಆಧರಿಸಿ ಈ ಬಾರಿ ವಾರ್ಡ್‌ಗಳ ಪುನರ್‌ವಿಂಗಡಣೆ ಮಾಡಲಾಗಿದೆ. 198 ವಾರ್ಡ್‌ಗಳಲ್ಲಿದ್ದ ಜನಸಂಖ್ಯೆ ಶೇ. 10ರಷ್ಟು ಹೆಚ್ಚು ಅಥವ ಕಡಿಮೆ ಆಗಿರಬಹುದು ಎಂದು ಅಂದಾಜಿಸಿ ವಿಂಗಡಣೆ ಪ್ರಕ್ರಿಯೆ ಕೈಗೊಳ್ಳಲಾಗಿದೆ. ಕಾನೂನಾತ್ಮಕವಾಗಿ, ಕ್ರಮಬದ್ಧವಾಗಿ ಹಾಗೂ ಅಂಕಿಅಂಶಗಳಿಗೆ ಹೋಲುವಂತೆ ಈ ವಿಂಗಡಣೆ ನಡೆಯಬೇಕಿರೋದ್ರಿಂದ 2011ರ ಜನಗಣತಿಯನ್ನೇ ಪರಿಗಣಿಸಲಾಗಿದ್ದು, ಒಂದು ವಾರ್ಡ್‌ನಲ್ಲಿ 35000 ಮತದಾರರು ಇರುವಂತೆ ಜಾಗ್ರತೆ ವಹಿಸಲಾಗಿದೆ ಎಂದಿದ್ದಾರೆ.

ಇನ್ನು, ವಾರ್ಡ್ ಪುನರ್‌ವಿಂಗಡಣೆ ವಿಚಾರವಾಗಿ ಯಾರಿಗೆ ಆಕ್ಷೇಪಣೆ ಸಲ್ಲಿಸೋದಿದ್ರೂ, ರಾಜ್ಯ ಸರ್ಕಾದ ರಾಜ್ಯಪತ್ರದಲ್ಲಿ ತಿಳಿಸಿರುವಂತೆ ವಿಧಾನಸೌಧಕ್ಕೇ ತೆರಳಬೇಕು. ಜನಸಾಮಾನ್ಯರಿಗೆ ಅಷ್ಟು ಸಲೀಸಾಗಿ ವಿಧಾನಸೌಧಕ್ಕೆ ಎಂಟ್ರಿ ಸಿಗೋದಿಲ್ಲ, ಆಗ ಏನು ಮಾಡಬೇಕು ಅನ್ನೋ ಪ್ರಶ್ನೆ ಮುಂದಿಟ್ರೆ, ಸರ್ಕಾರದ ಆದೇಶವನ್ನು ನಾವು ಪ್ರಶ್ನೆ ಮಾಡೋದಿಲ್ಲ ಅಂತಾರೆ ಬಿಬಿಎಂಪಿ ಮುಖ್ಯ ಆಯುಕ್ತರು.

ಇನ್ನು, ಹೊಸದಾಗಿ ಸೇರ್ಪಡೆಯಾಗಿರೋ ಹಲವಾರು ವಾರ್ಡ್‌ಗಳಿಗೆ ಇತಿಹಾಸ ಪುರುಷರ ಹೆಸರು ನಾಮಕರಣ ಮಾಡಲಾಗಿದೆ. ಚಾಣಕ್ಯ, ಛತ್ರಪತಿ ಶಿವಾಜಿ, ರಣಧೀರ ಕಂಠೀರವ, ವೀರಸಿಂಧೂರ ಲಕ್ಷ್ಮಣ, ವಿಜಯನಗರ ಕೃಷ್ಣದೇವರಾಯ, ನಾಲ್ವಡಿ ಕೃಷ್ಣರಾಜ ಒಡೆಯರ್ ಪಾರ್ಕ್ ಸೇರಿದಂತೆ ಇತರೆ ಹೆಸರುಗಳನ್ನು ವಾರ್ಡ್‌ಗಳಿಗೆ ನಾಮಕರಣ ಮಾಡಲಾಗಿದೆ. ಇದನ್ನು ಯಾವ ಆಧಾರದಲ್ಲಿ ಮಾಡಲಾಗಿದೆ ಎಂಬುದಕ್ಕೆ ಆಯುಕ್ತರ ಸಮರ್ಪಕ ಉತ್ತರವನ್ನು ನೀಡುವಲ್ಲಿ ವಿಫಲರಾಗಿದ್ದಾರೆ.

ಅದೇನೇ ಇರಲಿ ವಾರ್ಡ್​ ಡೀ ಲಿಮಿಟೇಷನ್ ಕುರಿತು ಬಿಬಿಎಂಪಿ ಆಯುಕ್ತರ ಮುಂದಿಟ್ಟ ಪ್ರಶ್ನೆಗಳಿಗೆ ಸೂಕ್ತವಾದ ಸಮರ್ಪಕವಾದ ಉತ್ತರ ಸಿಕ್ಕಿಲ್ಲ ಅನ್ನೋದು ಒಂದಿಷ್ಟು ಅನುಮಾನಗಳಿಗೆ ಎಡೆಮಾಡಿದ್ರೆ, ಮತ್ತೊಂದೆಡೆ ಕಾಂಗ್ರೆಸ್ ನ ಶಾಸಕರ ಅಭಿಪ್ರಾಯ ಕೇಳೇ ಇಲ್ಲ. ಕೇವಲ ಬಿಜೆಪಿ ಶಾಸಕರು ಹೇಳಿದಂತೆ ಡೀ ಲಿಮಿಟೇಷನ್ ಆಗಿದೆ ಮೇಲ್ನೋಟಕ್ಕೆ ಕಾಣ್ತಿದೆ.

ಮಲ್ಲಾಂಡಹಳ್ಳಿ ಶಶಿಧರ್ ಪವರ್ ಟಿವಿ ಬೆಂಗಳೂರು

RELATED ARTICLES

Related Articles

TRENDING ARTICLES