Thursday, January 23, 2025

ಡೇಟಿಂಗ್ ಆ್ಯಪ್ ಬೆಡಗಿಗಾಗಿ 6 ಕೋಟಿ ಕಳಕೊಂಡ ಬ್ಯಾಂಕ್ ಮ್ಯಾನೇಜರ್

ಬೆಂಗಳೂರು : ಡೇಟಿಂಗ್ ಆ್ಯಪ್ ಬೆಡಗಿಗಾಗಿ 6 ಕೋಟಿ ಕಳಕೊಂಡ ಘಟನೆ ಸಿಲಿಕಾನ್​ ಸಿಟಿಯಲ್ಲಿ ನಡೆದಿದೆ.

ಮ್ಯಾನೇಜರ್ ಹರಿಶಂಕರ ಇಂಡಿಯನ್ ಬ್ಯಾಂಕ್ ನ ಮ್ಯಾನೇಜರ್ ಆಗಿದ್ದ. ಮೇ 13 ರಿಂದ 19 ರ ವರೆಗೆ ಅನಿತಾ ಬ್ಯಾಂಕ್ ಠೇವಣಿದಾರರಾಗಿದ್ದರು. ಹರಿಶಂಕರ್ ಎಫ್ ಡಿ‌ ಮೇಲೆ ಸರಿಸುಮಾರು 6 ಕೋಟಿಯಷ್ಟು ಅಸಿಸ್ಟೆಂಟ್ ಮ್ಯಾನೇಜರ್ ಕೌಸಲ್ಯಾ ಹಾಗೂ ಕ್ಲರ್ಕ್ ಮುನಿರಾಜುವನ್ನ ಬಳಸಿಕೊಂಡು ಲೋನ್ ಮಾಡಿಸಿಕೊಂಡಿದ್ದಾನೆ.

ಇನ್ನು, ವೆಸ್ಟ್ ಬೆಂಗಾಲ್ ನ 28 ಬ್ಯಾಂಕ್ ಖಾತೆಗೆ ಹಣವನ್ನ ಜಮಾ ಮಾಡಿಕೊಂಡಿದ್ದ. ಆ ಹಣವನ್ನ ಡೇಟಿಂಗ್​​ನಲ್ಲಿದ್ದ ಲೇಡಿ ಒಬ್ಬಳಿಗೆ ಹಾಗೆಯೇ ಸುರಿದಿದ್ದ. ವಿಚಾರಣೆ ವೇಳೆ ಬ್ಯಾಂಕ್ ಮ್ಯಾನೇಜರ್ ಪ್ರೇಮಪುರಾಣ ಬಯಲಾಗಿದ್ದು, ಡೇಟಿಂಗ್ ಆ್ಯಪ್​​ನಲ್ಲಿ ನನ್ನ ಹಣವನ್ನೂ ಕಳಕೊಂಡೆ. ಕರ್ತವ್ಯ ಲೋಪ ಎಸಗಿ 6 ಕೋಟಿಯನ್ನೂ ಲೇಡಿಗೆ ತಿನ್ನಿಸ್ದೆ ಎಂದು ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾನೆ.

ಇದೀಗ ಹನುಮಂತನಗರ ಪೊಲೀಸರ ವಶದಲ್ಲಿರುವ ಹರಶಂಕರ್ ಹೆಚ್ಚಿನ ವಿಚಾರಣೆಗಾಗಿ 10 ದಿನ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ನಿನ್ನೆ 31 ನೇ ಎಸಿಎಂಎಂ ಕೋರ್ಟ್ ಗೆ ಹಾಜರುಪಡಿಸಿ 10 ದಿನ ಕಸ್ಟಡಿಗೆ ಪಡೆದಿದ್ದ ಪೊಲೀಸರು. ಸದ್ಯ ಪ್ರೇಮತಾಪಕ್ಕೆ ಕೋಟಿ‌ ಕೊಟ್ಟು ಕೈ ಸುಟ್ಟುಕೊಂಡ ಮ್ಯಾನೇಜರ್ ಹರಿಶಂಕರ್ ಇದೀಗ ಮುದ್ದೆಮುರೀತಿದ್ದಾನೆ.

RELATED ARTICLES

Related Articles

TRENDING ARTICLES