ಬಳ್ಳಾರಿ: ಸಾಕು ಪ್ರಾಣಿಗಳ ಪ್ರಾಮಾಣಿಕತೆ ಅದರ ಪ್ರೀತಿ ವರ್ಣಿಸಲು ಅಸಾಧ್ಯ. ಅದರಲ್ಲೂ ನಾಯಿ ಅಂದ್ರೆ ಎಲ್ಲಿಲ್ಲದ ಪ್ರೀತಿ. ಇಲ್ಲೋಬ್ಬ ತನ್ನ ಪ್ರೀತಿ ನಾಯಿಯ ಜೊತೆಗೆ ಕಳೆದ ಸಂತಸದ ಕ್ಷಣಗಳ ಹಂಚಿಕೊಂಡಿದ್ದಾರೆ.
ಬಳ್ಳಾರಿಯ ಡ್ಯಾನ್ಸ ಮಾಸ್ಟರ್ ತನ್ನ ಸಾಕು ಪ್ರೀತಿಯ ನಾಯಿಯ ಜೋತೆಗೆ ಚಾರ್ಲಿ 777 ಸಿನಿಮಾ ವೀಕ್ಷಣೆ ಮಾಡಿದ್ದಾನೆ. ಇನ್ನೂ ಸಾಕು ನಾಯಿಗಳು ಎಷ್ಟು ನಿಷ್ಟೆ, ಪ್ರಾಮಾಣಿಕತೆ ಹೊಂದಿರುವ ಪ್ರಾಣಿಗಳು ಎನ್ನುವ ಕುರಿತ ಚಲನ ಚಿತ್ರ 777 ಚಾರ್ಲಿ ರಾಜ್ಯಾದ್ಯಂತ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.ಅಂತೆಯೇ ಗಣಿನಾಡು ಬಳ್ಳಾರಿಯಲ್ಲೂ ಉತ್ತಮ ಪ್ರದರ್ಶನ ಕಾಣುತ್ತಿದೆ.
ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ನಾಯಿಯನ್ನು ಇಟ್ಟುಕೊಂಡು ಒಂದು ಅಪರೂಪದ ಚಿತ್ರ ಬಿಡುಗಡೆಯಾಗಿದ್ದು, ರಕ್ಷಿತ್ ಶೆಟ್ಟಿಯವರ ಅಭಿನಯ ಮತ್ತು ಶ್ವಾನ ಮಾಡಿರುವಂತಹ ಪಾತ್ರ ಥಿಯೇಟರಿಗೆ ಬಂದ ಪ್ರೇಕ್ಷಕರನ್ನು ಭಾವುಕರನ್ನಾಗಿಸುತ್ತಿದೆ.
ಇನ್ನೂ ಈ ಅಪರೂಪದ ಚಿತ್ರವನ್ನು ಬಳ್ಳಾರಿ ನಗರದ ಶಿವ ಚಿತ್ರಮಂದಿರದಲ್ಲಿ ಡ್ಯಾನ್ಸ್ ಮಾಸ್ಟರ್ ಸುಭಾಷ್‌ಚಂದ್ರ ತಮ್ಮ ಸಾಕು ನಾಯಿ ಆ್ಯನಿಯ ಜೊತೆ ವೀಕ್ಷಿಸಿದರು.777 ಚಾರ್ಲಿ ಚಿತ್ರದ ಮಾದರಿಯಲ್ಲಿಯೇ ಸುಭಾಷ್‌ಚಂದ್ರ ಅವರ ಜೀವನಗಾಥೆ ತುಂಬಾ ಹತ್ತಿರವಾಗಿದೆ. ಹೀಗಾಗಿ ಆ್ಯನಿ ತನ್ನ ಒಡೆಯನಿಗೆ ಧನ್ಯವಾದ ಹೇಳುವ ಭಂಗಿಯಲ್ಲಿ ಮುತ್ತಿಕ್ಕಿದೆ. ಮೂಕ ಭಾಷೆಯಲ್ಲಿ ತನ್ನ ಭಾವನೆಗಳನ್ನು ಹಂಚಿಕೊಂಡಿದೆ.
ಪ್ರಾಣಿಗಳಿಗೂ ನಮ್ಮಂತೆಯೇ ಭಾವನೆಗಳಿವೆ. ಅವು ಬದುಕಲು ಅವಕಾಶ ನೀಡಬೇಕೆನ್ನುತ್ತಾರೆ ಸುಬಾಷ್‌ಚಂದ್ರ. ಮತ್ತೊಂದು ವಿಷಯವೇನೆಂದರೆ ಚಿತ್ರ ಮಂದಿರದಲ್ಲಿ ಸಾಕು ಪ್ರಾಣಿಗಳ ಪ್ರವೇಶಕ್ಕೆ ನಿಷೇಧ ಇರುವುದರಿಂದ, ಸುಭಾಷ್ ಚಂದ್ರ ಅವರು ತಮ್ಮ ಪ್ರೀತಿಯ ನಾಯಿ ಜೊತೆಗೆ ಸಿನಿಮಾ ನೋಡಲು ಅವಕಾಶ ನೀಡಬೇಕೆಂದು ನಟರಾಜ್ ಕಾಂಪ್ಲೆಕ್ಸ್ ಮಾಲೀಕರಾದ ಲಕ್ಷ್ಮಿಕಾಂತ್ ರೆಡ್ಡಿ ಯವರಲ್ಲಿ ಮನವಿ ಮಾಡಿಕೊಂಡರು.
ಶಿವಕುಮಾರ್ ಪವರ್ ಟಿವಿ ನ್ಯೂಸ್ ಬಳ್ಳಾರಿ.