Wednesday, January 22, 2025

ವಿಕ್ರಾಂತ್​ ರೋಣ ಟ್ರೈಲರ್ ರಿಲೀಸ್:​ ಪ್ಯಾನ್ ಇಂಡಿಯಾ ಲೆವೆಲ್​ನಲ್ಲಿ ಕಿಚ್ಚನ ಕಾಂದಾನ್

ದಿ ವೆಯ್ಟ್ ಈಸ್ ಓವರ್. ವಿಕ್ರಾಂತ್ ರೋಣನ ಫ್ಯಾಂಟಮ್ ವರ್ಲ್ಡ್​ ಈಸ್ ರೆಡಿ ಟು ಓಪನ್. ಯೆಸ್.. ಕೆಜಿಎಫ್ ನಂತ್ರ ಬಾಕ್ಸ್ ಆಫೀಸ್ ರೂಲ್ ಮಾಡೋಕೆ ರೋಣ ಕಮಿಂಗ್. ಆಲ್ ಇಂಡಿಯಾ ಕಟೌಟ್ ಕಿಚ್ಚನ ನಟನಾ ಗಮತ್ತಿಗೆ ಸುಸ್ತಾಗೋ ರೇಂಜ್​ಗಿದೆ ಟ್ರೈಲರ್. ಅನೂಪ್ ನೆಕ್ಸ್ಟ್ ಲೆವೆಲ್ ಮೇಕಿಂಗ್​ನ ಸತ್ಯ ದರ್ಶನ ಇಲ್ಲಿದೆ ಕಣ್ತುಂಬಿಕೊಳ್ಳಿ.

ಭಯವೇ ತುಂಬಿದ ಊರಿಗೆ ಭಯವಿಲ್ಲದವನ ಎಂಟ್ರಿ

5 ಭಾಷೆಯಲ್ಲಿ ಟ್ರೈಲರ್.. ಆರು ಭಾಷೆಯಲ್ಲಿ ಸಿನಿಮಾ

ಪ್ಯಾನ್ ಇಂಡಿಯಾ ಲೆವೆಲ್​ನಲ್ಲಿ ಕಿಚ್ಚನ ಕಾಂದಾನ್

ಸಲ್ಲು, ದುಲ್ಕರ್, ಧನುಷ್, ಚರಣ್ ಮೆಚ್ಚಿದ ರೋಣ

ಗುಮ್ಮ ಬಂದ ಗುಮ್ಮ ಬಂದ ಗುಮ್ಮ.. ಯೆಸ್ ಬಹುನಿರೀಕ್ಷಿತ ವಿಕ್ರಾಂತ್ ರೋಣ ಚಿತ್ರದ ಟ್ರೈಲರ್ ರಿಲೀಸ್ ಆಗಿ, ಯೂಟ್ಯೂಬ್​ ವೀವ್ಸ್​ನಲ್ಲಿ ನಾಗಾಲೋಟ ಶುರುವಿಟ್ಟಿದೆ. ಒಂದು ದಿನ ಮೊದಲೇ ತ್ರೀಡಿ ಟ್ರೈಲರ್ ಲಾಂಚ್ ಮಾಡಿದ್ದ ಸ್ಯಾಂಡಲ್​ವುಡ್ ತಾರೆಯರು ಕಿಚ್ಚ ಹಾಗೂ ಅನೂಪ್ ಭಂಡಾರಿಯ ಕಾರ್ಯವೈಖರಿಯನ್ನ ಶ್ಲಾಘಿಸಿತ್ತು. ಜಾಕ್ವೆಲಿನ್ ಬೆಡಗು ಬಿನ್ನಾಣಕ್ಕೆ ತಲೆದೂಗಿತ್ತು.

ಇದೀಗ ಪ್ಯಾನ್ ಇಂಡಿಯಾ ಲೆವೆಲ್​ನಲ್ಲಿ ವಿಕ್ರಾಂತ್ ರೋಣನ ಫ್ಯಾಂಟಮ್ ವರ್ಲ್ಡ್​ ತೆರೆದುಕೊಂಡಿದೆ. ತೆಲುಗಿನಲ್ಲಿ ರಾಮ್ ಚರಣ್ ತೇಜಾ, ಮಲಯಾಳಂನಲ್ಲಿ ದುಲ್ಕರ್ ಸಲ್ಮಾನ್, ತಮಿಳಿನಲ್ಲಿ ಧನುಷ್ ಹಾಗೂ ಹಿಂದಿಯಲ್ಲಿ ಸಲ್ಮಾನ್ ಖಾನ್ ನಮ್ಮ ವಿಕ್ರಾಂತ್ ರೋಣ ಟ್ರೈಲರ್​ನ ಅನಾವರಣಗೊಳಿಸಿದ್ದಾರೆ. ಈ ಮೂಲಕ ಕಿಚ್ಚನ ಕಾಂದಾನ್ ಇಂಡಿಯಾದ ಪ್ರತಿ ಭಾಷೆಯಲ್ಲೂ ಇದೆ ಅನ್ನೋದು ರುಜುವಾಗಿದೆ.

ಅನೂಪ್ ಭಂಡಾರಿಯ ಮೇಕಿಂಗ್​ಗೆ ಸಿನಿಮಾಟೋಗ್ರಫರ್ ವಿಲಿಯಂ ಡೇವಿಡ್, ಆರ್ಟ್​ ಡೈರೆಕ್ಟರ್ ಶಿವಕುಮಾರ್, ಮ್ಯೂಸಿಕ್ ಡೈರೆಕ್ಟರ್ ಅಜನೀಶ್ ಲೋಕನಾಥ್ ಸಾಥ್ ನೀಡಿದ್ದಾರೆ. ಅವರೆಲ್ಲರ ಹಗಲಿರುಳಿನ ಶ್ರಮದ ಪ್ರತಿಫಲ ಒಂದು ಹೊಸ ಪ್ರಪಂಚಕ್ಕೆ ನಾಂದಿ ಹಾಡಿದೆ. ಹಾಲಿವುಡ್ ಸಿನಿಮಾ ನೋಡಿದ ಫೀಲ್ ಕೊಡ್ತಿರೋ ರೋಣ ಟ್ರೈಲರ್​​ನಲ್ಲಿ ಕಿಚ್ಚ ಸೆಂಟರ್ ಆಫ್ ಅಟ್ರ್ಯಾಕ್ಷನ್.

ನಿರೂಪ್ ಭಂಡಾರಿ ಕೂಡ ಪ್ರಧಾನ ಪಾತ್ರ ಪೋಷಿಸಿದ್ದು, ಗುಮ್ಮನ ಕಥೆಗೆ ಪೊಲೀಸ್ ಟಚ್ ನೀಡಲಾಗಿದೆ. ಕಗ್ಗತ್ತಲ ದಟ್ಟಾರಣ್ಯ, ಸಮುದ್ರದಲ್ಲಿ ತೇಲಿ ಬರೋ ಹಡುಗು, ಮಕ್ಕಳಿಗೆ ಸಿಕ್ಕ ಕಥೆ ಹೀಗೆ ಸಾಕಷ್ಟು ಅಂಶಗಳಿಂದ ರೋಣ ಬಾಕ್ಸ್ ಆಫೀಸ್ ಬ್ಯಾಂಗ್ ಮಾಡೋ ಮನ್ಸೂಚನೆ ನೀಡಿದೆ.

ಇದೇ ಜುಲೈ 28ಕ್ಕೆ ವರ್ಲ್ಡ್​ ವೈಡ್ ಕನ್ನಡದ ಜೊತೆ ತೆಲುಗು, ತಮಿಳು, ಮಲಯಾಳಂ , ಹಿಂದಿ ಹಾಗೂ ಇಂಗ್ಲೀಷ್​ನಲ್ಲಿ ಸಿನಿಮಾ ತೆರೆಗಪ್ಪಳಿಸಲಿದೆ. ಚಿತ್ರತಂಡ ಕನ್ನಡದಲ್ಲಿ ಟ್ರೈಲರ್ ಲಾಂಚ್ ಮಾಡಿ, ಸದ್ಯ ಮುಂಬೈ, ಕೊಚ್ಚಿ, ಚೆನ್ನೈ ಹಾಗೂ ಹೈದ್ರಾಬಾದ್​​ನತ್ತ ಪ್ರೊಮೋಷನ್ಸ್​ಗೆ ಹೊರಟಿದೆ. ಅದೇನೇ ಇರಲಿ ಭಾರತೀಯ ಚಿತ್ರರಂಗದಲ್ಲಿ ಜಾಕ್ ಮಂಜು ನಿರ್ಮಾಣದ ರೋಣ ಒಂದೊಳ್ಳೆ ಟ್ರೆಂಡ್ ಸೆಟ್ ಮಾಡಲಿದೆ. ಹೊಸ ಟ್ಯಾಲೆಂಟ್ಸ್​ಗೆ ರೆಫರೆನ್ಸ್ ಸಿನಿಮಾ ಆಗಿ ಚರಿತ್ರೆಯ ಪುಟಗಳು ಸೇರಲಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES