Monday, December 23, 2024

60ರ ದಶಕದ ವೇದ.. ಪಾರ್ವತಮ್ಮನ ಹಾದಿಯಲ್ಲಿ ಗೀತಕ್ಕ

ಸೆಂಚುರಿ ಸ್ಟಾರ್​​ ಶಿವಣ್ಣ ಅವ್ರ 125ನೇ ಸಿನಿಮಾ ವೇದ. ಸದ್ಯ ಹಾಟ್​ ಟಾಪಿಕ್​ ಏನಂದ್ರೆ, ವೇದ ಚಿತ್ರದ ಮೋಷನ್​ ಪೋಸ್ಟರ್ ಸುನಾಮಿ ಸುಂಟರಗಾಳಿ ಎಬ್ಬಿಸೋ ಸೂಚನೆ ಕೊಟ್ಟಿದೆ. ಇದ್ರ ಜೊತೆಗೆ ಒಂದೇ ಫ್ರೇಮ್​ನಲ್ಲಿ ರಾಜ್​ ಫ್ಯಾಮಿಲಿ ಗೀತಕ್ಕನಿಗೆ ಬರ್ತ್ ಡೇ ಶುಭಾಶಯ ಹೇಳಿದೆ. ಆದ್ರೆ, ಸರ್ಪ್ರೈಸಿಂಗ್​ ವಿಷ್ಯ ಬೇರೇನೆ ಇದೆ.

60ರ ದಶಕದ ವೇದ.. ಪಾರ್ವತಮ್ಮನ ಹಾದಿಯಲ್ಲಿ ಗೀತಕ್ಕ

ರಣಭೇಟೆಗಾರನ ರಫ್​​ ಲುಕ್​ನಲ್ಲಿ ಸೆಂಚುರಿ ಸ್ಟಾರ್​ ಮಿಂಚು

ದೊಡ್ಮನೆಗೆ ಸ್ಪಿನ್​ ಜಾದುಗಾರ ಅನಿಲ್​ ಕುಂಬ್ಳೆ ಸಾಥ್​​

ಗೀತಾ ಪಿಕ್ಚರ್ಸ್​ ಲಾಂಚ್ ಮಾಡಿದ ಅನಂತ್ ನಾಗ್..!

ಕನ್ನಡ ಚಿತ್ರರಂಗದಲ್ಲೇ ನಿರ್ದೇಶಕ ಹರ್ಷ ಹಾಗೂ ಶಿವಣ್ಣ ಅವರದ್ದು 100% ಹಿಟ್ ಜೋಡಿ. ಇವ್ರ ಕಾಂಬೋ ಸಿನಿಮಾಗಳು ಅಬ್ಬರಿಸಿ ಬೊಬ್ಬಿರಿದು ಸಿಕ್ಕಾಪಟ್ಟೆ ಹೆಸರು ಮಾಡಿವೆ. ಇದೀಗ ಈ ಜೋಡಿಯ ವೇದ ಸಿನಿಮಾದ ಪೋಸ್ಟರ್ ಹಾಗೂ ಟೀಸರ್​​​ ಸಖತ್​ ವೈರಲ್​ ಆಗಿದೆ.  ಸಿಂಗಲ್​ ​ ಪೋಸ್ಟರ್​ ಗಾಂಧಿನಗರದ ಮೂಲೆ ಮೂಲೆಯಲ್ಲೂ ಹಲ್​ಚಲ್​ ಎಬ್ಬಿಸ್ತಿದೆ. ಶಿವಣ್ಣನ ರಾ ಅಂಡ್​ ರಗಡ್​ ಲುಕ್​​ಗೆ ಫ್ಯಾನ್ಸ್​ ಮಂತ್ರಮುಗ್ಧರಾಗಿದ್ದಾರೆ.

ಅರವತ್ತರ ದಶಕದ ಕ್ರೌರ್ಯದ ಕಥೆಯನ್ನ ಹೇಳೋಕೆ ನಿರ್ದೇಶಕ ಹರ್ಷ ಬಿಗ್​ ಪ್ಲ್ಯಾನ್​ ಮಾಡಿಕೊಂಡಿದ್ದಾರೆ. ವಜ್ರಕಾಯ, ಭಜರಂಗಿ, ಭಜರಂಗಿ-2 ಚಿತ್ರಗಳ ಮೂಲಕ ಬಾಕ್ಸ್​ಆಫೀಸ್​ ಚಿಂದಿ ಉಡಾಯಿಸಿದ್ದ ಬೆಸ್ಟ್​ ಜೋಡಿ, ಮತ್ತೆ ವೇದ ಸಿನಿಮಾಗೆ ಕೈ ಜೋಡಿಸಿದೆ. ಹ್ಯಾಟ್ರಿಕ್​ ಹೀರೋ ಅಭಿನಯದ 125ನೇ ಸಿನಿಮಾ ಇದಾಗಿದ್ದು. ಈ ಚಿತ್ರದ ಮೋಷನ್​ ಪೋಸ್ಟರ್​ ರಿಲೀಸ್​ ಜೊತೆಗೆ ಗೀತಾ ಶಿವರಾಜ್​ಕುಮಾರ್​ ನಿರ್ಮಾಪಕರಾಗಿ ಸ್ಯಾಂಡಲ್​ವುಡ್​​ಗೆ ಎಂಟ್ರಿ ಕೊಟ್ಟಿದ್ದಾರೆ. ಗೀತಕ್ಕನ ಬರ್ತ್​ಡೇಗೆ ಗೀತಾ ಪಿಕ್ಚರ್ಸ್​ ಬ್ಯಾನರ್​ ಲಾಂಚ್​ ಆಗಿ ಡಬಲ್​ ಖುಷಿ ಕೊಟ್ಟಿದೆ.

ದೊಡ್ಮನೆ ಫ್ಯಾಮಿಲಿಯಲ್ಲಿ ಈ ಮುಂಚೆ ಪಾರ್ವತಮ್ಮ ರಾಜ್​ಕುಮಾರ್​ ನಿರ್ಮಾಪಕರಾಗಿ ಸಾಲು ಸಾಲು ಸಿನಿಮಾಗಳ ಮೂಲಕ ಕನ್ನಡಕ್ಕೆ ಬೃಹತ್​ ಕೊಡುಗೆ ನೀಡಿದ್ರು. ಇದೀಗ ದೊಡ್ಮನೆಯ ಹಿರಿ ಸೊಸೆ ಗೀತಾ ಶಿವರಾಜ್​ಕುಮಾರ್​ ನಿರ್ಮಾಪಕಿಯಾಗಿ ಪದಾರ್ಪಣೆ ಮಾಡ್ತಿದ್ದಾರೆ. ಗೀತಕ್ಕನ ಬರ್ತ್​ಡೇ ಸಂಭ್ರಮದ ಜೊತೆಗೆ ಗೀತಾ ಪಿಕ್ಚರ್ಸ್​ ಬ್ಯಾನರ್​ ಕೂಡ ಲಾಂಚ್​ ಆಯಿತು. ಹಿರಿಯ ನಟ ಅನಂತನಾಗ್​​ ಬ್ಯಾನರ್​ ಲಾಂಚ್ ಮಾಡಿ ಅಣ್ಣಾವ್ರ ಮಗನಾಗಿ ಅಂತಹ ಸಿನಿಮಾಗಳನ್ನೇ ಮಾಡಿ ಅಂತ ವಿಶ್ ಮಾಡಿದ್ರು.

ಈ ಶುಭ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ, ಕ್ರಿಕೆಟ್​ ಜಗತ್ತಿನ ಶ್ರೇಷ್ಟ ಸ್ಪಿನ್​ ಬೌಲರ್​ ಅನಿಲ್​ ಕುಂಬ್ಳೆ ಆಗಮಿಸಿದ್ರು. ಶಿವಣ್ಣ ತುಂಬಾ ದಿನಗಳ ಹಿಂದೆಯೇ ನನ್ನ ಇನ್​ವೆಯ್ಟ್​ ಮಾಡಿದ್ರು. ಆದ್ರೇ ಅಪ್ಪು ಅಗಲಿದ ನಂತ್ರ ಈ ಕಾರ್ಯಕ್ರಮ ತಡವಾಯ್ತು. ಅಂದು ಅಪ್ಪು ಇದ್ರು. ಇಂದೂ ಕೂಡ ನಮ್ಮೊಂದಿಗೆ ಅಪ್ಪು ಇದ್ದಾರೆ ಎಂದು ಭಾವುಕ ಮಾತನ್ನಾಡಿದ್ರು.

ಕಾರ್ಯಕ್ರಮದಲ್ಲಿ ಡಾ. ಶಿವಣ್ಣ ಮಿಡ್​ ನೈಟ್​ನಲ್ಲಿ ಪತ್ನಿ ಗೀತಾಗೆ ವಿಶ್​ ಮಾಡಿದ್ದನ್ನು ನೆನಪು  ಮಾಡಿಕೊಂಡ್ರು. ನನ್ನ ಹಿಂದಿನ ಶಕ್ತಿ ಯಾರು ಅಂತಾ ಎಲ್ರೂ ಕೇಳ್ತಾರೆ. ನನ್ನ ಅಭಿಮಾನಿ ದೇವರುಗಳಾದ ನೀವು, ನನ್ನ ಕುಟುಂಬ, ಅಪ್ಪಾಜಿ, ಅಮ್ಮ  ಅಂತಾರೆ.

ಕಾರ್ಯಕ್ರಮದಲ್ಲಿ ಅಶ್ವಿನಿ ಪುನೀತ್​ ರಾಜ್​ಕುಮಾರ್​​ ಹಾಗೂ ಮುದ್ದಿನ ಮಕ್ಕಳು, ಧನ್ಯಾ, ಧಿರೇನ್​, ಮಧು ಬಂಗಾರಪ್ಪ, ನಿರ್ದೇಶಕ ಯೋಗರಾಜ್​ ಭಟ್​​, ದುನಿಯಾ ವಿಜಯ್​​, ಸೇರಿದಂತೆ ಇಡೀ ರಾಜ್​​ ಫ್ಯಾಮಿಲಿ, ಈ ಸುಂದರ ಕ್ಷಣಗಳಿಗೆ ಸಾಕ್ಷಿಯಾಯ್ತು. ಆಂಕರ್  ಅನುಶ್ರಿ ಕಾರ್ಯಕ್ರಮದ ನಿರೂಪಣೆಯನ್ನು ಅಚ್ಚುಕಟ್ಟಾಗಿ ನಡೆಸಿಕೊಟ್ರು. ಅರ್ಜುನ್ ಜನ್ಯಾ ಲೈವ್ ಮ್ಯೂಸಿಕ್ ಶೋ ಎಲ್ಲರ ಹುಬ್ಬೇರಿಸಿತು.

ವೇದ ಚಿತ್ರವನ್ನು ಗೀತಾ ಶಿವರಾಜ್​ಕುಮಾರ್​​ ತಮ್ಮದೇ ನ್ಯೂ ಬ್ಯಾನರ್​ನಡಿಯಲ್ಲಿ ನಿರ್ಮಾಣ ಮಾಡ್ತಿದ್ದು, ಹರ್ಷ ಆ್ಯಕ್ಷನ್​ ಕಟ್​ ಹೇಳ್ತಿದ್ದಾರೆ. ರಿಲೀಸ್​ ಆಗಿರೋ ಮೋಷನ್ ಪೋಸ್ಟರ್ ಎದೆಯಲ್ಲಿ ಬೆಂಕಿಯ ಕಿಡಿ ಹಚ್ಚಿದೆ. ಒಟ್ಟಾರೆ ಶಿವಣ್ಣ- ಹರ್ಷ ಜಬರ್ದಸ್ತ್​ ಕಾಂಬಿನೇಷನ್​ ಮ್ಯಾಜಿಕ್ ಈ ಬಾರಿ ಹೇಗಿರಲಿದೆ ಅನ್ನೋದನ್ನ ಕಾದು ನೋಡಬೇಕಿದೆ.

ರಾಕೇಶ್​ ಅರುಂಡಿ, ಫಿಲ್ಮ್​ ಬ್ಯುರೋ, ಪವರ್ ಟಿವಿ

RELATED ARTICLES

Related Articles

TRENDING ARTICLES