Wednesday, January 22, 2025

ಗ್ರಾಮಸ್ಥರಿಗೆ ಖಡಕ್ ವಾರ್ನಿಂಗ್ ನೀಡಿದ ತಹಶೀಲ್ದಾರ್

ಚಿತ್ರದುರ್ಗ : ಚಳ್ಳಕೆರೆ ತಾಲೂಕಿನ ರೇಖಲಗೆರೆ ಗ್ರಾಮದ ಸರ್ವೇ ನಂಬರ್ 23 ರಲ್ಲಿ 56-14 ಎಕರೆ ಗೋಮಾಳ ಮತ್ತು ಸರ್ವೇ ನಂಬರ್ 24 ರಲ್ಲಿ 39-19 ಎಕರೆ ಗೋಮಾಳ ಜಮೀನು ಇದ್ದು, ಇದರಲ್ಲಿ ಗ್ರಾಮದ ಕೆಲ ಜನರು ತಲಾ 4-00 ಎಕರೆ ಜಮೀನು ರಾತ್ರೋರಾತ್ರಿ ಒತ್ತುವರಿ ಮಾಡಿ ಈ ಜಮೀನುಗಳಲ್ಲಿ ಕೃಷಿ ಮಾಡಲು ಮುಂದಾಗಿರೋ ಹಿನ್ನೆಲೆ ಅದೇ ಗ್ರಾಮದ ಕೆಲವು ಗ್ರಾಮಸ್ಥರು ಆರೋಪ ಮಾಡಿದ್ದಾರೆ.

ಈ ವಿಚಾರವನ್ನು ಗ್ರಾಮಸ್ಥರು ಜಿಲ್ಲಾಧಿಕಾರಿಗಳ, ಹಾಗೂ ತಹಶೀಲ್ದಾರ್ ಗಮನಕ್ಕೆ ತಂದಿದ್ದು ತಕ್ಷಣ ಎಚ್ಚೆತ್ತುಕೊಂಡ ತಹಶೀಲ್ದಾರ್ ಎನ್.ರಘುಮೂರ್ತಿ ಕಂದಾಯ ಇಲಾಖೆ ಮತ್ತು ಸರ್ವೆ ಸಿಬ್ಬಂದಿಯೊಂದಿಗೆ ಇಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಅಳತೆ ಮಾಡಿ ಒತ್ತುವರಿಯನ್ನು ತೆರವುಗೊಳಿಸಿ ಸರ್ಕಾರದ ಸುಪರ್ದಿಗೆ ಪಡೆದ ಈ ಪ್ರದೇಶದಲ್ಲಿ ಸರ್ಕಾರಿ ಬೋರ್ಡ್ ಅಳವಡಿಸಿದ್ದಾರೆ.

ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿ ಈ ರೀತಿ ಸರ್ಕಾರಿ ಜಮೀನು ಒತ್ತುವರಿ ಆದರೆ, ಮುಂದಿನ 30 ವರ್ಷಗಳ ನಂತರ ಆರಡಿ ಮೂರಡಿ ಜಮೀನು ಕೂಡ ಸಾರ್ವಜನಿಕರಿಗೆ ಲಭ್ಯವಾಗುವುದಿಲ್ಲ ಗ್ರಾಮದ ಉಪಯೋಗಗಳ ಆದ ಶಾಲೆ ಆಟದ ಮೈದಾನ ಅಂಗನವಾಡಿ ಕಟ್ಟಡ ಹಣ ತ್ಯಾಜ್ಯ ವಿಲೇವಾರಿ ಅಂಬೇಡ್ಕರ್ ಭವನ ವಾಲ್ಮೀಕಿ ಭವನ ಇನ್ನೂ ಹಲವು ಹತ್ತು ನಾಗರಿಕ ಸೌಲಭ್ಯಗಳಿಗೆ ಜಮೀನು ಇಲ್ಲದಂತಾಗುತ್ತದೆ ಇದರ ಅರಿವು ಸಾರ್ವಜನಿಕರಿಗೆ ಇರಬೇಕು ಸರ್ಕಾರಿ ಜಮೀನನ್ನು ಯಾರು ಒತ್ತುವರಿ ಮಾಡಲು ಪ್ರಯತ್ನಪಟ್ಟರೆ ಮೊದಲು ಗ್ರಾಮಸ್ಥರು ಒತ್ತುವರಿದಾರರನ್ನು ತಡೆಯಬೇಕು ತದನಂತರ ಕಂದಾಯ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತರಬೇಕು ಮುಂದಿನ ದಿನಗಳಲ್ಲಿ ಈ ರೀತಿ ಹೊತ್ತುವರೆಗೆ ಪ್ರಯತ್ನಪಟ್ಟರೆ ನಿರ್ದಾಕ್ಷಿಣ್ಯವಾಗಿ ಅವರುಗಳ ಮೇಲೆ ಮೊಕದ್ದಮೆ ದಾಖಲಿಸಿ ಕ್ರಮಕೈಗೊಳ್ಳಲಾಗುವುದು ಅಂತ ಖಡಕ್ ವಾರ್ನಿಂಗ್ ನೀಡಿದ್ದಾರೆ.

RELATED ARTICLES

Related Articles

TRENDING ARTICLES