Wednesday, January 22, 2025

ಶಿವಣ್ಣ- ಪ್ರಭುದೇವ ಪ್ಯಾನ್ ಇಂಡಿಯಾ ಚಿತ್ರಕ್ಕೆ ಯೋಗ

ಸ್ಯಾಂಡಲ್​ವುಡ್​​ನಲ್ಲಿ ಆ್ಯಕ್ಷನ್ ಡ್ರಾಮಾ ಸಿನಿಮಾವೊಂದು ಪ್ಯಾನ್ ಇಂಡಿಯಾ ಲೆವೆಲ್​ನಲ್ಲಿ ಅಬ್ಬರಿಸೋಕೆ ಸಜ್ಜಾಗಿದೆ. ಘಟಾನುಘಟಿಗಳ ಸಾರಥ್ಯದಲ್ಲಿ ಹೊಸ ಇತಿಹಾಸ ಬರೆಯೋಕೆ ತುದಿಗಾಲಲ್ಲಿ ನಿಂತಿದೆ. ಇಂಡಿಯನ್ ಮೈಕೆಲ್ ಜಾಕ್ಸನ್ ಪ್ರಭುದೇವ, ಕರುನಾಡ ಚಕ್ರವರ್ತಿ ಶಿವಣ್ಣ ಒಟ್ಟಿಗೆ ಧೂಳೆಬ್ಬಿಸೋಕೆ ರೆಡಿಯಾಗಿದ್ದಾರೆ. ಈ ಅತಿರಥ ಮಹಾರಥರ ಸಿನಿಮಾ ಹೇಗಿರುತ್ತೆ ಗೊತ್ತಾ..? ಮಿಸ್ ಮಾಡದೇ ಈ ಸ್ಟೋರಿ ನೋಡಿ.

ಶಿವಣ್ಣ- ಪ್ರಭುದೇವ ಪ್ಯಾನ್ ಇಂಡಿಯಾ ಚಿತ್ರಕ್ಕೆ ಯೋಗ

ಜಿದ್ದಿಗೆ ಬಿದ್ದವರಂತೆ ಕುಣೀತಾರೆ ಸೂಪರ್ ಡ್ಯಾನ್ಸರ್ಸ್..!

ಕನ್ನಡದಲ್ಲಿ ಸಂಚಲನ ಮೂಡಿಸಲಿದೆ ಭಟ್ರ ಹೊಸ ಕಥೆ

ಪ್ಯಾನ್ ಇಂಡಿಯಾ ಲೆವೆಲ್​ನಲ್ಲಿ ಅಬ್ಬರಿಸೋಕೆ ರೆಡಿ..!

ಹ್ಯಾಟ್ರಿಕ್ ಹೀರೋ ಶಿವಣ್ಣ, ಭಾರತದ ಮೈಕೆಲ್ ಜಾಕ್ಸನ್ ಪ್ರಭುದೇವ ಕಾಂಬಿನೇಷನ್ನಲ್ಲಿ ಸಿನಿಮಾ ಬರುತ್ತೇ ಅನ್ನೋ ಸುದ್ದಿ ಪ್ಯಾನ್ ಇಂಡಿಯಾ ಲೆವೆಲ್​ನಲ್ಲಿ ಸುದ್ದಿ ಮಾಡಿತ್ತು. ಗಲ್ಲಿ ಗಲ್ಲಿಗಳಲ್ಲೂ ಫ್ಯಾನ್ಸ್ ಕ್ರೇಜ್ ವಾವ್ಹ್, ಇಟ್ಸ್ ಅಮೇಜಿಂಗ್ ಅಂತ ಬಾಯಲ್ಲಿ ಬೆರಳಿಟ್ಟುಕೊಂಡಿದ್ರು. ಇದೀಗ ಕೋಟ್ಯಂತರ ಅಭಿಮಾನಿಗಳ ಕನಸು ನನಸಾಗಿದೆ. ಈ ಭರ್ಜರಿ ಕಾಂಬೋ ಚಿತ್ರಕ್ಕೆ ಮುಹೂರ್ತ ನೆರವೇರಿದೆ.

ಡ್ಯಾನ್ಸಿಂಗ್ ವಿಚಾರದಲ್ಲಿ ಇಬ್ಬರೂ ಕೂಡ ಹುಚ್ಚೆದ್ದು ಕುಣಿಯೋ ಮಹಾನ್ ಪ್ರವೀಣರು. ಕುಂತಲ್ಲೇ ಡ್ಯಾನ್ಸ್ ಮೂಲಕ ಚಿತ್ರರಸಿಕರ ಮೈ ಕೈ ಕುಣಿಸೋ  ಪ್ರಚಂಡ ಕಲಾವಿದರು. ಈ ಸಿನಿಮಾ ಡ್ಯಾನ್ಸ್ ಜೊತೆಯಲ್ಲಿ ನೀರಿನ ಪ್ರಾಮುಖ್ಯತೆ ಎಷ್ಟು ಅನ್ನೋ ಮೆಸೇಜ್ ಕೊಡಲಿದೆಯಂತೆ. ಪ್ರತಿಯೊಬ್ಬರೂ ನೀರು ಕುಡಿಯುವಾಗ ಖಂಡಿತ ಈ ಸಿನಿಮಾ ಕಣ್ಮುಂದೆ ಬಂದು ಹೋಗಲಿದೆಯಂತೆ. H2O ಚಿತ್ರದ ನಂತ್ರ ಮತ್ತೆ ನೀರಿನ ಕಥೆ ಹೇಳೋಕೆ ಬರ್ತಿದಾರಾ ಅನ್ಕೋಬೇಡಿ. ಇದು ಸಖತ್ ಡಿಫರೆಂಟ್ ಸಿನಿಮಾ ಅಂತಾರೆ ವಿಕಟ ಕವಿ ಯೋಗರಾಜ್ ಭಟ್.

ರಾಕ್​ಲೈನ್​​ ಪ್ರೊಡಕ್ಷನ್ ಅಡಿಯಲ್ಲಿ ಮೂಡಿ ಬರ್ತಿರೋ ಅದ್ಧೂರಿ ಸಿನಿಮಾ ಇದು. ರಾಕ್​ಲೈನ್​​ ಸ್ಟೂಡಿಯೋದಲ್ಲಿನ ಗಣಪತಿ ದೇವಸ್ಥಾನದಲ್ಲಿ ಇಂದು ಅದ್ಧೂರಿಯಾಗಿ ಮುಹೂರ್ತ ನೆರವೇರಿತು. ನಟ ಪ್ರಭುದೇವ ಕೂಡ ಕಥೆ ಕೇಳಿ ಒಂದೇ ಮಾತಿಗೆ ಯೆಸ್ ಎಂದಿದ್ದಾರೆ. ಈ ಸಿನಿಮಾ ಮೇಲೆ ಎಲ್ಲಿಲ್ಲದ ನಿರೀಕ್ಷೆ ಪ್ರಭುದೇವ ಅವರಿಗಿದೆಯಂತೆ. ಮುಹೂರ್ತಕ್ಕೆ ಬರಲು ಆಗದೇ ಇದ್ದ ಕಾರಣ, ವಿಡಿಯೋ ಮೂಲಕ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಯೋಗರಾಜ್ ಭಟ್ರ ಸಿನಿಮಾಗಳಂದ್ರೆ ಅಲ್ಲೇನೋ ವಿಶೇಷತೆ, ವಿಭಿನ್ನ ಕಥೆ, ರುಚಿಕಟ್ಟಾದ ಭೋಜನ ಅಂತೂ ಇರಲಿದೆ. ಇನ್ನೇನೂ ಸಿನಿಮಾವನ್ನು ಸಿಲ್ವರ್ ಸ್ಕ್ರೀನ್ ಮೇಲೆ ಬಾಯಿ ಚಪ್ಪರಿಸಿ ಬಾರಿಸೋದಷ್ಟೆ ಬಾಕಿ ಇದೆ. ರಾಕ್​ಲೈನ್​​ ಪ್ರೊಡಕ್ಷನ್ ಅಡಿಯಲ್ಲಿ ಯೋಗರಾಜ್ ಭಟ್ರು ಡಿಫರೆಂಟ್ ಕಥೆ ಹೇಳೋಕೆ ಬರ್ತಿದ್ದಾರೆ. ಇಬ್ರೂ ಕೂಡ ಕನ್ನಡದಲ್ಲಿ ನಾಟು ನಾಟು ಸ್ಟೆಪ್ ಮೀರಿಸೋ ಹಾಗೆ ಮಸ್ತ್ ಮನರಂಜನೆ ಕೊಡಲಿದ್ದಾರೆ. ಈ ಕುರಿತು ನಿರ್ಮಾಪಕ ರಾಕ್ ಲೈನ್ ಕೂಡ ಸಖತ್ ಕಾನ್ಫಿಡೆಂಟ್ ಆಗಿ ಮಾತನಾಡಿದ್ರು.

ಚಿತ್ರದಲ್ಲಿ ದೊಡ್ಡ ಸ್ಟಾರ್ ಕಾಸ್ಟಿಂಗ್ ಅಂತೂ ಪಕ್ಕಾ ಇರಲಿದೆ. ಸ್ಪೆಷಲ್ ರೋಲ್​ನಲ್ಲಿ ರಾಕ್​ಲೈನ್​​ ಕೂಡ ಕಾಣಿಸಲಿದ್ದಾರೆ. ಫನ್ ವಿತ್ ಎಮೋಷನ್ ಕಥೆ ಇದು. ವಿ.ಹರಿಕೃಷ್ಣ ಮ್ಯೂಸಿಕ್ ನೆಕ್ಸ್ಟ್ ಲೆವೆಲ್​ನಲ್ಲಿ ಇರಲಿದೆಯಂತೆ. ಕ್ಯಾಚಿ ಹಾಡುಗಳಿಂದ ಮೈ ಕುಣಿಸೋಕೆ ಭಟ್ರು ಕಾತರರಾಗಿದ್ದಾರೆ. ಸಂತೋಷ್ ರೈ ಪತಾಜೆ ಕ್ಯಾಮೆರಾ ಕೈ ಚಳಕ ಮ್ಯಾಜಿಕ್ ಮಾಡಲಿದೆ.  ರವಿವರ್ಮಾ ಸಾಹಸ ನಿರ್ದೇಶನದಲ್ಲಿ ಶಿವಣ್ಣ, ಪ್ರಭುದೇವ ನಡುವೆ ಜಟಾಪಟಿ ನಡೆಯುತ್ತಾ, ಅಥ್ವಾ ಬ್ರದರ್ ಎಮೋಷನ್ ಇರುತ್ತಾ ಕಾದು ನೋಡಬೇಕು.

ರಾಕೇಶ್ ಅರುಂಡಿ, ಫಿಲ್ಮ್ ಬ್ಯೂರೋ, ಪವರ್ ಟಿವಿ

RELATED ARTICLES

Related Articles

TRENDING ARTICLES