Monday, December 23, 2024

ರಾಷ್ಟ್ರಪತಿ ಚುನಾವಣೆ ನಡೆಯುವುದು ಹೇಗೆ..?

ನವದೆಹಲಿ : ಭಾರತದಲ್ಲಿ ರಾಷ್ಟ್ರಪತಿ ಚುನಾವಣೆ ಪರೋಕ್ಷ ಪದ್ಧತಿಯದ್ದಾಗಿದೆ. ಅಂದರೆ ಸಂಸತ್‌ ನ ಉಭಯ ಸದನ ಮತ್ತು ರಾಜ್ಯಗಳ ವಿಧಾನಸಭೆಗಳ ಸದಸ್ಯರು ರಾಷ್ಟ್ರಪತಿ ಚುನಾವಣೆಗೆ ಮತದಾರರಾಗಿರುತ್ತಾರೆ. ವಿಧಾನಸಭೆಯನ್ನು ಹೊಂದಿರುವ ದೆಹಲಿ ಮತ್ತು ಪುದುಚೇರಿಗಳ ಶಾಸಕರಿಗೂ ಮತದಾನದ ಹಕ್ಕಿದೆ. ಜಮ್ಮು-ಕಾಶ್ಮೀರದಲ್ಲಿ ರಾಷ್ಟ್ರಪತಿ ಆಡಳಿತ ಇರುವ ಕಾರಣ ಈ ಸಾರಿ ಸಂಸದರ ಮತಮೌಲ್ಯವು 708ರಿಂದ 700ಕ್ಕೆ ಕುಸಿದಿದೆ. ಸಾಮಾನ್ಯ ಚುನಾವಣಿಯಂತೆ ಅತಿಹೆಚ್ಚು ಮತಪಡೆದವರು ಜಯಶಾಲಿ ಎಂಬ ನಿಯಮ ರಾಷ್ಟ್ರಪತಿ ಚುನಾವಣೆಗೆ ಅನ್ವಯ ಆಗುವುದಿಲ್ಲ. ಚಲಾವಣೆಯಾದ ಒಟ್ಟು ಮತಗಳಲ್ಲಿ ಶೇ. 50ಕ್ಕಿಂತ ಹೆಚ್ಚು ಮತವನ್ನು ಗಳಿಸಿದ ಅಭ್ಯರ್ಥಿ ವಿಜಯಿ ಆಗುತ್ತಾರೆ. ಮತದಾರರು ಕೂಡ ಪ್ರಾಶಾಸ್ತ್ಯದ ಮತದಂತೆ ಮತಪತ್ರದ ಮೂಲಕ ಮತದಾನ ಮಾಡುತ್ತಾರೆ.

ಚುನಾವಣೆಗೆ ಸ್ಪರ್ಧಿಸಲು ಅರ್ಹತೆ ಏನು…!

ರಾಷ್ಟ್ರಪತಿ ಚುನಾವಣೆಯಲ್ಲಿ ಸ್ಪರ್ಧಿಸಲು ಕನಿಷ್ಠ 35 ವರ್ಷ ವಯಸ್ಸಾಗಿರಬೇಕು. ಲಾಭದಾಯಕ ಸರ್ಕಾರಿ ಹುದ್ದೆಯಲ್ಲಿ ಇರಬಾರದು, ಎಲೆಕ್ಟೋರಲ್ ಕಾಲೇಜಿನ ಕನಿಷ್ಠ 50 ಮಂದಿ ಸೂಚಕರು, 50 ಅನುಮೋದಕರ ಬೆಂಬಲ ಇರಬೇಕು. 15 ಸಾವಿರ ರೂ. ಠೇವಣಿ ಇರಿಸಬೇಕು. ಸಂಸತ್ ಭವನ ಮತ್ತು ರಾಜ್ಯಗಳ ವಿಧಾನಸಭೆಗಳು ಮತ ಕೇಂದ್ರಗಳಾಗಿರುತ್ತವೆ. ಸಂಸದರು ಸಂಸತ್ ಭವನ ಅಥವಾ ತಾವು ಪ್ರತಿನಿಧಿಸುವ ರಾಜ್ಯದ ವಿಧಾನಸಭೆಯಲ್ಲಿ ಮತದಾನ ಮಾಡಬಹುದು. ಆದರೆ, ಎಲ್ಲಿ ಮತದಾನ ಮಾಡಲು ಬಯಸುತ್ತಾರೆ ಎಂಬುದನ್ನು ಚುನಾವಣಾ ದಿನಾಂಕಕ್ಕೆ 10 ದಿನ ಮೊದಲು ಚುನಾವಣಾ ಆಯೋಗಕ್ಕೆ ತಿಳಿಸಬೇಕು.

ಮತಗಳ ಮೌಲ್ಯ ಲೆಕ್ಕಾಚಾರ ಹೇಗೆ…!

4033, ಶಾಸಕರು ಮತ್ತು 776 (ಲೋಕಸಭೆ 543, ರಾಜ್ಯಸಭೆ 233) ಸಂಸದರನ್ನು ಎಲೆಕ್ಟೋರಲ್ ಕಾಲೇಜ್ ಎಂದು ಗುರುತಿಸಲಾಗುತ್ತದೆ. ಆದರೆ, ನಾಮನಿರ್ದೇಶಿತ ಸಂಸದರು ಅಥವಾ ಶಾಸಕರಿಗೆ ಮತದಾನದ ಹಕ್ಕಿಲ್ಲ, ಪ್ರತಿ ಸಂಸದರ ಮತಮೌಲ್ಯ 700ಕ್ಕೂ ತುಸು ಹೆಚ್ಚಾಗಿದ್ದು, ಒಟ್ಟು ಮತ ಮೌಲ್ಯ 5,43,231, ಆದರೆ, ಪತಿ ಶಾಸಕರ ಮತವನ್ನು ಆಯಾ ರಾಜ್ಯಗಳ ಜನಸಂಖ್ಯೆಗೆ ಅನುಗುಣವಾಗಿ ವಿಂಗಡಿಸಿ ಮೌಲ್ಯ ಮಾಡಲಾಗುತ್ತದೆ. ರಾಜ್ಯದಿಂದ ರಾಜ್ಯಕ್ಕೆ ಇದು ಭಿನ್ನವಾಗಿರುತ್ತದೆ. ಒಟ್ಟಾರೆ ಮತಮೌಲ್ಯ 10,86,431 ಆಗಿರಲಿದೆ. ಉದಾಹರಣೆಗೆ ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು ಶಾಸಕರಿದ್ದು, ಅಲ್ಲಿ ಪ್ರತಿ ಮತದಾರರ ಮೌಲ್ಯ 208, ಇಡೀ ದೇಶದಲ್ಲಿ ಅಧಿಕ ಮುಮೌಲ್ಯ ಹೊಂದಿರುವ ಎಲೆಕ್ಟೋರಲ್ ಕಾಲೇಜ್ ಶಾಸಕರ ಮತಮೌಲ್ಯ 131 ಆಗಿದೆ.

ಈ ಸಲದ ರಾಜಕೀಯ ಲೆಕ್ಕಾಚಾರಗಳೇನು…!

ರಾಜಸ್ಥಾನ, ಛತ್ತೀಸ್‌ಗಡ, ಮತ್ತು ತಮಿಳುನಾಡು ರಾಜ್ಯಗಳು ಈ ಸಾರಿ ಚುನಾವಣೆಯಲ್ಲಿ ಮಹತ್ವದ ಪಾತ್ರ ವಹಿಸಲಿವೆ. 2017ರಲ್ಲಿ ರಾಜಸ್ಥಾನ ಮತ್ತು ಛತ್ತೀಸ್‌ಗಢದಲ್ಲಿ ಬಿಜೆಪಿ ಸರ್ಕಾರ ಇತ್ತು. ತಮಿಳುನಾಡಿನಲ್ಲಿ ಎನ್‌ಡಿಎ ಮಿತ್ರಪಕ್ಷವಾದ ಎಐಎಡಿಎಂಕೆ ಸರ್ಕಾರ ಇತ್ತು. ಆಂದ್ರ, ಈ ಸಾರಿ ಮೊದಲೆರಡು ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರದಲ್ಲಿದ್ದರೆ, ತಮಿಳುನಾಡಿನಲ್ಲಿ ಡಿಎಂಕೆ ಸರ್ಕಾರ ಇದೆ. ಒಡಿಶಾ, ಪಶ್ಚಿಮ ಬಂಗಾಳ, ಕೇರಳದಲ್ಲಿ ಬದಲಾವಣೆ ಆಗಿಲ್ಲ. ಪಂಜಾಬ್‌ನಲ್ಲಿ ಕಾಂಗ್ರೆಸ್‌ ಬದಲು ಅಮ್ ಆದ್ಮ ಪಕ್ಷ ಅಧಿಕಾರದಲ್ಲಿ ಇದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಬದಲು ಬಿಜೆಪಿ ಅಧಿಕಾರದಲ್ಲಿದೆ.

2017ರ ಚುನಾವಣೆ..

ಬಿಹಾರದ ರಾಜ್ಯಪಾಲರಾಗಿದ್ದ ರಾಮನಾಥ ಕೋವಿಂದರನ್ನು 2017ರಲ್ಲಿ ರಾಷ್ಟ್ರಪತಿ ಚುನಾವಣೆ ಅಭ್ಯರ್ಥಿಯನ್ನಾಗಿ ಬಿಜೆಪಿ ಆಯ್ಕೆ ಮಾಡಿತ್ತು. ಕಾಂಗ್ರೆಸ್ ಇನ್ನಿತರ ವಿರೋಧ ಪಕ್ಷಗಳು ಮಾಜಿ ಸ್ಪೀಕರ್ ಮೀರಾ ಕುಮಾರ್ ಅವರನ್ನು ಕಣಕ್ಕೆ ಇಳಿಸಿದ್ದವು. ಜುಲೈ 17ರಂದು ನಡೆದ ಚುನಾವಣೆಯಲ್ಲಿ 65.65ರಷ್ಟು ಮತದಾನ ಆಗಿತ್ತು. 7,02,044 ಎಲೆಕ್ಟೋರಲ್ ಕಾಲೇಜ್ ಮತ ಮೌಲ್ಯ ಇತ್ತು. ಜುಲೈ 20ಕ್ಕೆ ಫಲಿತಾಂಶ ಪ್ರಕಟವಾಗಿ ಕೋವಿಂದ ಅವರು 3.34 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಜಯಶಾಲಿಗಳಾದರು. 2012ರಲ್ಲಿ ಕಾಂಗ್ರೆಸ್‌ ನೇತೃತ್ವದ ಯುಪಿಎ ಅಭ್ಯರ್ಥಿ ಪ್ರಣಬ್ ಮುಖರ್ಜಿ ಜಯಗಳಿಸಿದ್ದರು. ಎನ್‌ಡಿಎ ಬೆಂಬಲಿತ ಅಭ್ಯರ್ಥಿ ಪಿ.ಎ. ಸಂಗ್ರಾ ಎದುರಾಳಿಯಾಗಿದ್ರು.
ಈ ಸಲದ ಅಭ್ಯರ್ಥಿಗಳ ಬಲಾಬಲ.

ಬಿಜೆಪಿ ಒರಿಸ್ಸಾದ ಆದಿವಾಸಿ ಜನಾಂಗದ ಮಹಿಳೆಯನ್ನು ಆಯ್ಕೆ ಮಾಡಿರುವುದು ಸಾಕಷ್ಟು ರಾಜಕೀಯ ಲೆಕ್ಕಾಚಾರಗಳಿಗೆ ಸಾಕ್ಷಿಯಾಗಿದೆ. ಈ ಹಿಂದೆ ಜಾರ್ಜ್ಂಡ್ ರಾಜ್ಯಪಾಲರಾಗಿದ್ದ ದ್ರೌಪದಿ ಮುರ್ಮು, ಒಡಿಶಾ ಸರಕಾರದಲ್ಲಿ ಸೇವೆ ಸಲ್ಲಿಸಿದ್ರು. ಬಿಜೆಪಿ ಮಹಿಳಾ ಅಭ್ಯರ್ಥಿ ಕಣಕ್ಕೆ ಇಳಿಸಿರಿವುದರಿಂದ ಪ್ರಾದೇಶಿಕ ಪಕ್ಷಗಳ ನಿಲುವುಗಳಲ್ಲಿ ಬದಲಾವಣೆ ತೀರಾ ಕಡಿಮೆ ಅನ್ನುವ ಅಂಶವು ಒಳಗೊಂಡಿದೆ.

ಇನ್ನೂ ಎಲ್ಲಾ ವಿಪಕ್ಷಗಳ ನಾಯಕನಾಗಿ ಯಶವಂತ್ ಸಿನ್ಹಾ ರನ್ನು ರಾಷ್ಟ್ರಪತಿ ಅಭ್ಯರ್ಥಿಯಾಗಿ ಕಣಕ್ಕಿಳಿಸಿದೆ. ವಿಪಕ್ಷಗಳ ಅಭ್ಯರ್ಥಿಗೆ ವೈಎಸ್ ಆರ್ ಸಿಪಿ, ಬಿಜೆಡಿ, ಕೆಸಿಆರ್, ಇನ್ನೂಳಿದ ಕೆಲ ಪ್ರಾದೇಶಿಕ ಪಕ್ಷಗಳು ಬೆಂಬಲಿಸಿದ್ರೆ ಸಮಾಧಾನಕರ ಮತಗಳನ್ನು ವಿಪಕ್ಷಗಳ ಅಭ್ಯರ್ಥಿ ಯಶವಂತ ಸಿಹ್ಹಾ ಪಡೆಯುವ ಸಾಧ್ಯತೆ ಇದೆ. ಇಲ್ಲವಾದಲ್ಲಿ 70-30 ರ ಮತಗಳು ಇಬ್ಬರು ಅಭ್ಯರ್ಥಿಗಳಿಗೆ ಹಂಚಿಕೆಯಾಗಲಿವೆ.
ಸಂತೋಷ್ ಹೊಸಹಳ್ಳಿ, ಪವರ್ ಟಿವಿ, ನವದೆಹಲಿ.

RELATED ARTICLES

Related Articles

TRENDING ARTICLES