Tuesday, December 24, 2024

ಶಾಸ್ತ್ರ ಕೇಳಲು ಬಂದವಳನ್ನ ಬಲೆಗೆ ಬೀಳಿಸಿದ ಅರ್ಚಕ

ಮೈಸೂರು: ಒಂದು ಕಡೆ ಕಾಡಂಚಿನಲ್ಲಿ ಒಬ್ಬಂಟಿಯಾಗಿ ಕುಳಿತಿರೋ ಗೃಹಿಣಿ, ಇನ್ನೂ ಸರಿಯಾಗಿ ಮೀಸೆ ಬಾರದ ಕಳ್ಳ ಅರ್ಚಕ. ಅಂದಹಾಗೆ ಈ 21 ವರ್ಷದ ಅಸಾಮಿ 35 ವರ್ಷದ ಗೃಹಿಣಿಯನ್ನ ನಂಬಿಸಿ ಕೈ ಕೊಟ್ಟು ಎಸ್ಕೇಪ್ ಆಗಿದ್ದಾನೆ.

ಈ ಕಳ್ಳ ಸಂತೋಷನ ಬಳಿ ಅದೇನು ಸಂತೋಷ ಕಾಣೋಕೆ ಬಂದ್ಲೋ ಗೊತ್ತಿಲ್ಲ. ಹಲವು ದಿನಗಳ ಕಾಲ ಕಾಡಿನಲ್ಲಿದ್ದುಕೊಂಡೆ ಗೃಹಿಣಿ ಜೊತೆ ಏಕಾಂತ ಕಳೆದು ವಂಚಕ ಎಸ್ಕೇಪ್ ಆಗಿದ್ದಾನೆ.

ಅಂದಹಾಗೆ ಮೈಸೂರಿನ ಕೊಲ್ಲೂಪುರ ಗ್ರಾಮದಲ್ಲಿ‌ನ ಮಹದೇಶ್ವರ ದೇಗುಲದ ಅರ್ಚಕನ ಮೋಸದಾಟ ಈಗ ಬಯಲಾಗಿದೆ. ಮಹದೇಶ್ವರ ದೇವಸ್ಥಾನಕ್ಕೆ ಶಾಸ್ತ್ರ ಕೇಳಲು 35 ವರ್ಷದ ಗೃಹಿಣಿಯೊಬ್ಬರು ಹೋದಾಗ 21 ವರ್ಷದ ಅರ್ಚಕ ಸಂತೋಷ್ ಪರಿಚಯವಾಗಿದ್ದ, ಗೃಹಿಣಿಗೆ ಬಾಳು ಕೊಡುವುದಾಗಿ ನಂಬಿಸಿದ್ದ. ಅರ್ಚಕನ ಮಾತು ನಂಬಿ ಮನೆ ಹಾಗೂ ಎರಡು ಮಕ್ಕಳನ್ನು ಬಿಟ್ಟು ಬಂದಿದ್ದ ಗೃಹಿಣಿ, ಇದ್ದರೂ ಸತ್ತರೂ ಸಂತೋಷ್ ಜೊತೆಗೆ ಅಂತ ಬೆನ್ನುಬಿದ್ದಿದ್ದಾಳೆ.

ಇನ್ನು 10 ದಿನಗಳ ಕಾಲ ಕಾಡಿನಲ್ಲಿಯೇ ಒಡನಾಟ ಬೆಳೆಸಿದ್ದ ಅರ್ಚಕ ಸಂತೋಷ್ ಮಹಿಳೆಯನ್ನು ಕಾಡಂಚಲ್ಲಿ ಬಿಟ್ಟು ಪರಾರಿಯಾಗಿದ್ದಾನೆ. ಮಹಿಳೆ ಇಡೀ ರಾತ್ರಿ ಒಂಟಿಯಾಗಿ ಕಾಡಿನಲ್ಲಿ ಕಾಲ ಕಳೆದು, ಮುಂಜಾನೆ ಸ್ಥಳೀಯರಿಗೆ ಅರ್ಚಕನ ಮೋಸದ ಕಥೆ ಹೇಳಿದ್ದಾರೆ. ಇದೀಗ ಮೋಸಗಾರ ಅರ್ಚಕನ ವಿರುದ್ಧ ಹುಲ್ಲಹಳ್ಳಿ ಪೊಲೀಸರು ಕೇಸ್‌ ದಾಖಲಾಗಿದೆ.

ಒಟ್ಟಿನಲ್ಲಿ ಸಂತೋಷನನ್ನ ನಂಬಿ ಬಂದ ಗೃಹಿಣಿ ,ಬೀದಿಗೆ ಬಿದ್ದಿದ್ರೆ, ಇತ್ತ ಮಹಿಳೆಯನ್ನ ನಂಬಿಸಿ ಎಸ್ಕೇಪ್ ಆದ ಕಳ್ಳ ಗುಡ್ಡಪ್ಪನ್ನ ಖೆಡ್ಡಕ್ಕೆ ಕೆಡವಲು ಪೊಲೀಸರು ಬಲೆ ಬೀಸಿದ್ದಾರೆ.

ಕ್ಯಾಮರಾ ಮೆನ್ ಹರೀಶ್ ಜೊತೆ ಸುರೇಶ್ ಬಿ ಪವರ್ ಟಿವಿ ಮೈಸೂರು.

RELATED ARTICLES

Related Articles

TRENDING ARTICLES