Wednesday, January 22, 2025

ಹುಬ್ಬಳ್ಳಿ ರೌಡಿಗಳಿಗೆ ಖಾಕಿ ಬ್ರೇಕ್: ನೂರಾರು ರೌಡಿಗಳ ಮನೆ ಮೇಲೆ ಪೊಲೀಸ್ ದಾಳಿ

ಹುಬ್ಬಳ್ಳಿ : ಇತ್ತೀಚಿಗೆ  ಕ್ರೈಮ್ ಅಪರಾಧಗಳು ಹೆಚ್ಚಾಗಿರುವ ಹಿನ್ನಲೆಯಲ್ಲಿ ಅವಳಿ ನಗರ ಪೊಲೀಸರು ಅಲರ್ಟ್ ಆಗಿದ್ದು ಇಂದು ಬೆಳಗಿನ ಜಾವ ನವನಗರ, ಹಳೆ ಹುಬ್ಬಳ್ಳಿ, ಬೆಂಡಿಗೇರಿ, ಕೇಶ್ವಪುರ ಸೇರಿದಂತೆ ಅನೇಕ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಸಿಸುವ ರೌಡಿಗಳ ಮನೆ ಮೇಲೆ ದಾಳಿ ಮಾಡಲಾಗಿದೆ.

ಹುಬ್ಬಳ್ಳಿಯ ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆ, ಬೆಂಡಿಗೆರೆ ಪೊಲೀಸ್ ಠಾಣೆ, ವಿದ್ಯಾನಗರ, ಕೇಶ್ವಪುರಾ ಸೇರಿದಂತೆ ಹುಬ್ಬಳ್ಳಿಯ ಎಲ್ಲಾ ಠಾಣೆಯ ವಿಭಾಗದಲ್ಲಿ ಇಂದು ರೌಡಿ ಶೀಟರ್ ಮನೆ ಮೇಲೆ ದಾಳಿ ಮಾಡಲಾಗಿದೆ

ಬೆಂಡಿಗೇರಿ ಪೊಲೀಸ್ ಠಾಣೆ ಹಾಗೂ ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಒಂದೊಂದು ಆಯುಧ ದೊರೆತಿದ್ದು ಒಟ್ಟು 186 ರೌಡಿಗಳನ್ನ ಇಂದು ವಿಚಾರಣೆ ಮಾಡಲಾಗಿದೆ ಎಂದು ಹುಬ್ಬಳ್ಳಿ ಧಾರವಾಡ ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ಸಾಹಿಲ್ ಬಾಗ್ಲ ಮಾಹಿತಿ ನೀಡಿದರು.

ಇನ್ನು ಹುಬ್ಬಳ್ಳಿ ಧಾರವಾಡ ನಗರದ ಜನತೆ ರೌಡಿಗಳಿಂದ ತೊಂದರೆ ಅನುಭವಿಸಿದ್ದರೆ  ಖುದ್ದಾಗಿ ತಮ್ಮನ್ನ ಸಂಪರ್ಕಿಸುವಂತೆ ನಾಗರಿಕರಿಗೆ ಮನವಿ ಮಾಡಿದ್ದಾರೆ, ಯಾವುದೇ ವ್ಯಕ್ತಿ ಅಥವಾ ಸಂಘಟನೆಯಿಂದ ಸಾರ್ವಜನಿಕರಿಗೆ ತೊಂದರೆ ಆದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಜನರ ಆತಂಕ ಪಡುವ ಅವಶ್ಯಕತೆ ಇಲ್ಲಾ ಎಂದು ಹೇಳಿಕೆ ನೀಡಿದ್ದಾರೆ.

RELATED ARTICLES

Related Articles

TRENDING ARTICLES