Monday, December 23, 2024

ರೈತನ ಪ್ರಾಣಕ್ಕೆ ಕುತ್ತು ತಂದ ಸಾಲ

ಹಾವೇರಿ : ಸಾಲ ಬಾಧೆಯಿಂದ ಮನನೊಂದು ರೈತ ಹೊಲದಲ್ಲಿರುವ ಮರಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಲಿಂಗದಹಳ್ಳಿ ಗ್ರಾಮದಲ್ಲಿ ನಡೆದಿದೆ.

ವಾಸಪ್ಪ ಬಸಪ್ಪ ಬಲ್ಲೂರು (58) ಮೃತಪಟ್ಟಿರುವ ರೈತ. ಇತ್ತೀಚೆಗಷ್ಟೆ ಈ ರೈತ ಟ್ರ್ಯಾಕ್ಟರ್ ಟ್ರ್ಯಾಕ್ಟರ್ ತೆಗೆದುಕೊಂಡಿದ್ದ ಮತ್ತು ವೈಯಕ್ತಿಕ ಸಮಸ್ಯೆಗಳಿಗೆ ಸಾಲ ಮಾಡಿಕೊಂಡಿದ್ದ.

ಈ ಹಿನ್ನೆಲೆ ಕಾರ್ಪೊರೇಷನ್ ಬ್ಯಾಂಕ್​ನಲ್ಲಿ 4 ಲಕ್ಷ ಸಾಲ, ಕೈಗಡವಾಗಿ ಹಲವು ಕಡೆಗಳಲ್ಲಿ ಸಾಲ ಮಾಡಿಕೊಂಡಿದ್ದ. ಟ್ರ್ಯಾಕ್ಟರ್ ಕಂತು ಕಟ್ಟಲಾಗದೆ ಟ್ರ್ಯಾಕ್ಟರ್​ನ್ನು ಫೈನಾನ್ಸ್ ಕಂಪನಿ ವಶಕ್ಕೆ ಪಡೆದಿತ್ತು. ಈಗಾಗಿ ರೈತ ದಿಕ್ಕುತೋಚದೆ ಆತ್ಮಹತ್ಯೆ ಮಾಡಿಕೊಂಡಿದ್ದು,

ಹಲಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

Related Articles

TRENDING ARTICLES