Friday, December 20, 2024

ಹಾಸನದಲ್ಲಿ ಮತ್ತೆ ಕಂಪಿಸಿದ ಭೂಮಿ..!

ಹಾಸನ : ಜಿಲ್ಲೆಯ ಅರಕಲಗೂಡು ತಾಲೂಕಿನ ಹಲವು ಗ್ರಾಮಗಳಲ್ಲಿ ಭೂ ಕಂಪನವಾಗಿದೆ. ಲಘು ಕಂಪನದಿಂದ ನಿದ್ರೆಯಲ್ಲಿದ್ದವರಿಗೆ ಶಾಕ್ ನೀಡಿದೆ.

ದೊಡ್ಡ ರೀತಿಯ ಶಬ್ದ ಬಂದು ಬಳಿಕ 4.38 ರಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ. ಅರಕಲಗೂಡು ತಾಲೂಕಿನ ಮುದ್ದನಹಳ್ಳಿ, ಅರಕಲಗೂಡು ಪಟ್ಟಣ, ಹನೆಮಾರನಹಳ್ಳಿ, ಕಾರಳ್ಳಿ ಗ್ರಾಮಗಳಲ್ಲಿ ಕಂಪನವಾಗಿದೆ. ಹೊಳೆನರಸೀಪುರ ತಾಲೂಕಿನಲ್ಲೂ ಕಂಪಿಸಿದ ಭೂಮಿ ಕಂಪಿಸಿದೆ.

ಇನ್ನು ಪಟ್ಟಣದ ಚಿಟ್ನಳ್ಳಿ ಹೌಸಿಂಗ್ ಬೋರ್ಡ್ ಪ್ರದೇಶದಲ್ಲಿ ಭೂ ಕಂಪನವಾಗಿದ್ದು, ಅರಕಲಗೂಡು ರಸ್ತೆಯ ಬಡಾವಣೆಯಲ್ಲೂ ಕೂಡ ಭೂಮಿ ಕಂಪಿಸಿದೆ. ಭೂ ಕಂಪನದ ಅನುಭವ ಆಗುತ್ತಲೇ ಜನರು ಓಡಿ ಹೊರಗೆ ಬಂದಿದ್ದಾರೆ. ನಿನ್ನೆ ಅಫ್ಘಾನಿಸ್ತಾನದಲ್ಲೂ ಭೀಕರ ಭೂ ಕಂಪನವಾದ್ದರಿಂದ ಜನರಲ್ಲಿ ತೀವ್ರ ಭೀತಿ ಹುಟ್ಟಿಸಿದೆ.

RELATED ARTICLES

Related Articles

TRENDING ARTICLES