ಕಾರವಾರ : ರಾಜ್ಯವಿಧಾನ ಸಭೆ ಚುನಾವಣೆಗೆ ಇನ್ನೇನು ಒಂದು ವರ್ಷ ಬಾಕಿ ಇರುವಾಗಲೆ ಅಭ್ಯರ್ಥಿ ಆಗುವವರ ಸಂಖ್ಯೆ ಸಹ ಹೆಚ್ಚಾಗತ್ತಾ ಇದೆ. ಇನ್ನೂ ಉತ್ತರಕನ್ನಡ ಜಿಲ್ಲೆಯ ಕುಮಟಾ ವಿಧಾನಸಭಾ ಕ್ಷೇತ್ರದ ಹಾಲಿ ಬಿಜೆಪಿ ಶಾಸಕ ದಿನಕರ ಶೆಟ್ಟಿ ಅವರಿಗೆ ಟಿಕೇಟ್ ತಪ್ಪಿಸಬೇಕು ಎಂದು ಆ ಪಕ್ಷದಲ್ಲಿನ ಪ್ರಮುಖರೆ ತೆರೆಮರೆಯಲ್ಲಿ ಕಸರಸ್ತು ನಡೆಸುತ್ತಿದ್ದಾರೆ.ಈ ವಿಚಾರವನ್ನ ದಿನಕರ ಶೆಟ್ಟಿ ಅನೇಕ ಕಡೆ ತಮ್ಮ ಆಪ್ತರಲ್ಲಿ ಹೇಳಿಕೊಳ್ಳುತ್ತಿದ್ದಾರೆ. ಟಿಕೇಟ್ ತಪ್ಪಿಸಲು ಪ್ರಯತ್ನಿಸುವುದರ ಹಿಂದೆ ಹತ್ತು ಹಲವು ಕಾರಗಳು ಇವೆ.
ಶಾಸಕ ದಿನಕರ ಶೆಟ್ಟಿ ಏನು ಮೂಲ ಬಿಜೆಪಿ,ಅಥವಾ ಆರ್ ಎಸ್ ಎಸ್ ನಿಂದ ಬಂದವರಲ್ಲ.ಇವರು ಜೆಡಿಎಸ್ ನಲ್ಲಿ ಶಾಸಕರಾಗಿ ಅಧಿಕಾರ ಅನುಭವಿಸಿ ಬಂದವರು.ಕಳೆದ ಚುನಾವಣೆ ಪೂರ್ವದಲ್ಲಿ ಜೆಡಿಎಸ್ ತೊರೆದು ಬಿಜೆಪಿ ಸೇರಿಕೊಂಡು ಪರೇಶ ಮೆಸ್ತಾ ಅಲೆಯಲ್ಲಿ ಭಾರೀ ಮತಗಳ ಅಂತರದಲ್ಲಿ ಗೆದ್ದು ಶಾಸಕರಾಗಿದ್ದರು. ಶಾಸಕರಾಗೋ ಮೊದಲು ಟಿಕೇಟಗಾಗಿ ಕ್ಷೇತ್ರದ ಅನೇಕ ಬಿಜೆಪಿ ಮುಖಂಡರ ಮನೆ ಬಾಗಿಲು ತಟ್ಟಿದ್ದರು. ಆದರೆ ಶಾಸಕರಾದ ಬಳಿಕ ಎಲ್ಲವೂ ಅದಲು ಬದಲು.
ದಿನಕರ ಶೆಟ್ಟಿ ಯಾವಾಗ ಬಿಜೆಪಿಯಿಂದ ಗೆದ್ದು ಶಾಸಕರಾದರೋ ಅಂದಿನಿಂದ ಅವರ ಗೆಲುವಿಗಾಗಿ ಶ್ರಮಿಸಿದ ಎಲ್ಲಾ ಬಿಜೆಪಿ ನಾಯಕರನ್ನ ಬದಿಗಿಟ್ಟು ಜೆಡಿಎಸ ನಿಂದ ತನ್ನ ಜೊತೆ ಯಾರೆಲ್ಲಾ ಬಿಜೆಪಿಗೆ ಬಂದಿದ್ದರೋ ಅವರನ್ನೆ ಮುಂದೆ ಇಟ್ಟುಕೊಂಡು ಮೂಲ ಬಿಜೆಪಿಗರನ್ನೆ ಶಾಸಕ ದಿನಕರ ಶೆಟ್ಟಿ ಮೂಲೆಗುಂಪು ಮಾಡುತ್ತಾ ಬಂದಿದ್ದಾರೆ.ಇದರಲ್ಲಿ ಪ್ರಮುಖವಾಗಿ ಕುಮಟಾ ಪುರಸಭೆ ಅಧ್ಯಕ್ಷರ ಆಯ್ಕೆ ಸಮಯದಲ್ಲಿಯೂ ಬಿಜೆಪಿಯಲ್ಲಿ ಸಾಕಷ್ಟು ಸಮರ್ಥ ಅಭ್ಯರ್ಥಿಗಳು ಇದ್ದರೂ ಕೂಡ ಜೆಡಿಎಸ್ ನಿಂದ ಬಂದವರಿಗೆ ಅಧ್ಯಕ್ಷ ಸ್ಥಾನ ನೀಡುವ ಮೂಲಕ ಬಿಜೆಪಿ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದರು. ಇನ್ನೂ ಕಳೆದ ಕೆಲ ತಿಂಗಳ ಹಿಂದೆ ಪುರಸಭೆಯಲ್ಲಿ ನಡೆದ ಸಭೆಯಲ್ಲಿ ಉಪಾಧ್ಯಕ್ಷ ( ಮೂಲ ಬಿಜೆಪಿಗ) ರಾಜೇಶ ಪೈ ಹಾಲಿ ಶಾಸಕ ದಿನಕರ ಶೆಟ್ಟಿ ವಿರುದ್ಧ ಬಹಿರಂಗವಾಗಿಯೇ ಆಕ್ರೋಶ ಹೊರಹಾಕಿದ್ದರು.
ಕಳೆದ ಭಾರಿ ಇವರಿಗೆ ಟಿಕೇಟ್ ಕೊಡಿಸಲು ಪ್ರಮುಖವಾಗಿ ಯಾರೇಲ್ಲಾ ಕಾರಣವಾಗಿದ್ದರೋ ಅವರುಗಳೆ ಈ ಬಾರಿ ಟಿಕೆಟ್ ತಪ್ಪಿಸಲು ಮುಂದೆ ನಿಂತು ಪ್ರಯತ್ನಿಸುತ್ತಿರುವುದು ಕ್ಷೇತ್ರದಲ್ಲಿ ಎಲ್ಲೆಡೆ ಬಹಿರಂಗವಾಗಿ ಚರ್ಚೆಗಳು ಆರಂಭವಾಗಿದೆ. ಈ ಬಾರಿಯ ಕುಮಟಾ ವಿಧಾನ ಸಭಾ ಕ್ಷೇತ್ರದ ಟಿಕೇಟ್ ರೇಸ್ ನಲ್ಲಿ ಬಿಜೆಪಿಯ ಹಾಲಿ ಜಿಲ್ಲಾಧ್ಯಕ್ಷ ವೆಂಕಟೇಶ ನಾಯ್ಕ ಪ್ರಮುಖರಾಗಿದ್ದಾರೆ.ಇದು ದಿನಕರ ಶೆಟ್ಟಿ ಅವರಿಗೂ ಸಹ ತಿಳಿದ ವಿಚಾರವಾಗಿದ್ದು,ಮುಂದೆ ಏನು ಎನ್ನುವ ಬಗ್ಗೆ ಚಿಂತನೆಯಲ್ಲಿದ್ದಾರೆ ದಿನಕರ ಶೆಟ್ಟಿ.