Monday, December 23, 2024

ಸಿಲಿಕಾನ್ ಸಿಟಿಯಲ್ಲಿ ಹೆಚ್ಚಾಗಿದಿಯಾ ಪುಡಿ ರೌಡಿಗಳ ಹಾವಳಿ ?

ಬೆಂಗಳೂರು : ಸಿಲಿಕಾನ್​ ಸಿಟಿಯಲ್ಲಿ ಪುಡಿ ರೌಡಿಗಳ ಹಾವಳಿ ಹೆಚ್ಚಾಗುತ್ತಿದ್ದು, ರಾತ್ರಿ ಅಲ್ಲ ಹಗಲಿನಲ್ಲೇ ಓಡಾಡೋದು ಕಷ್ಟವಾಗಿದೆ.

ನಗರದಲ್ಲಿ ರಾತ್ರಿ ಅಲ್ಲ ಹಗಲಿನಲ್ಲೇ ಓಡಾಡೋದು ಕಷ್ಟವಾಗಿದ್ದು, ಮನೆಯಿಂದ ನೀವು‌ ಒಬ್ಬರೇ ಹೋದರೆ ಅಪಾಯ ಖಂಡಿತ. ಸಿನಿಮೀಯ ಸ್ಟೈಲ್ ನಲ್ಲಿ ದರೋಡೆ ಮಾಡುವ ವಿಡಿಯೋ ಲಭ್ಯವಾಗಿದ್ದು, ಬೈಕ್​ನಲ್ಲಿ ಬಂದು ಹಿಗ್ಗಾಮುಗ್ಗ ತಳ್ಳಿ ನಿಮ್ಮ ಬಳಿ ಇರೋದನ್ನು ಕಿತ್ತುಕೊಂಡು ಹೋಗುತ್ತಾರೆ.

ಬೆಂಗಳೂರಿನ ‌ಅನ್ನಪೂರ್ಣೆಶ್ವರ ನಗರ ಪೊಲೀಸ್ ‌ಠಾಣಾ ವ್ಯಾಪ್ತಿಯಲ್ಲಿ ನಡೆದ ದರೋಡೆ ನಡೆದಿದ್ದು, ಅನ್ನಪೂರ್ಣೆಶ್ವಯ ನಗರ ಠಾಣಾ ವ್ಯಾಪ್ತಿಯಲ್ಲಿ ಒಬ್ಬ ವ್ಯಕ್ತಿ ನಡೆದುಕೊಂಡು ಹೋಗ್ತಾ ಇರ್ತಾರೆ. ಈ ಸಂದರ್ಭದಲ್ಲಿ ಬೈಕ್ ‌ನಲ್ಲಿ ಇಬ್ಬರು ಅಸಾಮಿಗಳು‌ ಬಂದು ರಸ್ತೆಯಲ್ಲಿ ನಡೆದುಕೊಂಡರು ‌ಹೋಗ್ತಾ‌ ಇರೋ ವ್ಯಕ್ತಿ ಹಿಗ್ಗಾಮುಗ್ಗ ಥಳಿಸುತ್ತಾರೆ. ಆ ವ್ಯಕ್ತಿ ಬಳಿ‌ ಇರೋ ಚಿನ್ನದ ಸರ,ಎಟಿಎಂ ಕಿತ್ತುಕೊಂಡು ಪರಾರಿಯಾಗಿದ್ದು ಇದೀಗ ಇಬ್ಬರು ಪುಡಿ ರೌಡಿಗಳನ್ನ ಅನ್ನಪೂರ್ಣೇಶ್ವರಿ ಪೊಲೀಸರು ಬಂಧಿಸಿದ್ದಾರೆ.

RELATED ARTICLES

Related Articles

TRENDING ARTICLES