Wednesday, January 22, 2025

ಕುಂದಾನಗರಿಯಲ್ಲಿ ಮತ್ತೆ ಖಾಕಿ ಗುಂಡಿನ ಸದ್ದು

ಬೆಳಗಾವಿ : ಬೆಳ್ಳಂಬೆಳಗ್ಗೆ ಗುಂಡಿನ ಸದ್ದು ಮೊಳಗಿದೆ. ತುಂತುರು ಮಳೆಯಲ್ಲಿ ಮನೆಯಿಂದ ತರಾತುರಿಯಲ್ಲಿ ಕಚೇರಿಗೆ ತೆರಳುತ್ತಿದ್ದ ಜನರಿಗೆ ಪೊಲೀಸ್ ಶಬ್ಧ ಸ್ವಾಗತ ನೀಡಿತ್ತು.ಒಂದು ಕ್ಷಣ ದಂಗಾಗಿ ವಾಹನ ನಿಲ್ಲಿಸಿ ತಿರುಗಿ ನೋಡಿದ್ರೆ…ರಕ್ತದ ಮಡುವಿನಲ್ಲಿ ರೌಡಿ ಶೀಟರ್ ನರಳಾಡುತ್ತಿದ್ದ.

ಹೀಗೆ ಬೆಡ್ ಮೇಲೆ ಕಾಲಿಗೆ ಬ್ಯಾಂಡೇಜ್ ಸುತ್ತಿಕೊಂಡು ಮಲಗಿರುವ ಭೂಪನೇ ರೌಡಿ ಶೀಟರ್ ವಿಶಾಲ್ ಸಿಂಗ್ ಚವ್ಹಾಣ್. ಕಿತ್ತೂರು ತಾಲೂಕಿನ ಚಿಕ್ಕನಂದಿಹಳ್ಳಿ ನಿವಾಸಿ. ಮೋಸ್ಟ್ ವಾಂಟೆಡ್ ಕ್ರಿಮಿನಲ್​.​ ಆರು ಆಫ್ ಮರ್ಡರ್, ಒಂದು ರಾಬರಿ, ಒಂದು ಡಕಾಯಿತಿ, ಒಂದು ಸುಪಾರಿ ಕಿಲ್ಲರ್ ಕೇಸ್ ಈತನ ಮೇಲಿದೆ.ಮಂಗಳವಾರ ಬೆಳಗ್ಗೆ ಆರೋಪಿ ನಗರದ ಧರ್ಮನಾಥ್ ವೃತ್ತದ ಬಳಿ ಯಾಸೀನ್ ಎಂಬ ಪೊಲೀಸ್ ಪೇದೆ ಮೇಲೆ ಚಾಕುವಿನಿಂದ ಇರಿದು ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ್ದ. ಆಗ ಅಲ್ಲೇ ಇದ್ದ ಎಸಿಪಿ ನಾರಾಯಣ್ ಭರಮನಿ ಚವ್ಹಾಣ್ ಕಾಲಿಗೆ ಗುಂಡು ಹಾರಿಸಿದ್ದಾರೆ.

ಸದ್ಯ ಗಾಯಾಳು ಚವ್ಹಾಣ್​, ಬಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.ಈತ ಕಳೆದ ಮಾರ್ಚ್‌ 15ರಂದು ಬೆಳಗಾವಿ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದು, ಈತನ ಪತ್ತೆಗಾಗಿ ಪೊಲೀಸರು ರಾಜ್ಯಾದ್ಯಂತ ಹುಡುಕಾಟ ನಡೆಸಿದ್ದರು. ಆದ್ರೆ, ಪೊಲೀಸರ ಕೈಗೆ ಸಿಗದೆ ತಲೆ ಮರೆಸಿಕೊಂಡಿದ್ದ.
ಒಟ್ಟಾರೆ ಬೆಳಗಾವಿ ಪೊಲೀಸರ ಕಾರ್ಯಕ್ಕೆ ಎಲ್ಲೆಡೆ ಜನಮೆಚ್ಚುಗೆ ವ್ಯಕ್ತವಾಗುತ್ತಿದೆ. ಜೊತೆಗೆ ಪೊಲೀಸರ ಕೈಗೆ ಸಿಗದೆ ಆಟ ಆಡುತ್ತಿರುವ ನಟೋರಿಯಸ್​​ ರೌಡಿಗಳಿಗೆ ಈ ಘಟನೆ ನಡುಕ ಹುಟ್ಟಿಸಿದೆ.

ಕ್ಯಾಮರಾಮನ್ ರಾಹುಲ್‌ ಜೊತೆ ಅಣ್ಣಪ್ಪ ಬಾರ್ಕಿ ಪವರ್ ಟಿವಿ ಬೆಳಗಾವಿ

RELATED ARTICLES

Related Articles

TRENDING ARTICLES