Monday, December 23, 2024

ದೂದ್ ಪೇಡಾ ದಿಗಂತ್ ಆರೋಗ್ಯದಲ್ಲಿ ಚೇತರಿಕೆ

ಬೆಂಗಳೂರು: ಗೋವಾದಲ್ಲಿ ಸಮ್ಮರ್ ಸಾಲ್ಟ್ ಜಂಪ್ ಮಾಡುವ ವೇಳೆ ಆಯತಪ್ಪಿ ಬಿದ್ದು ನಟ‌ ದಿಗಂತ್ ಕುತ್ತಿಗೆ ಭಾಗಕ್ಕೆ ಬಲವಾದ ಪೆಟ್ಟು ಮಾಡಿಕೊಂಡಿದ್ದರು‌.

ಕುತ್ತಿಗೆ ಭಾಗದಲ್ಲಿ ನೋವು ಜಾಸ್ತಿ ಆಗಿದ್ದರಿಂದ ಕೂಡಲೇ ಅವರ ಕುಟುಂಬಸ್ಥರು ಏರ್ ಲಿಫ್ಟ್ ಮೂಲಕ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು. ದಿಗಂತ್ ಆರೋಗ್ಯದ ಸ್ಥಿತಿ ಅರಿತ ವೈದ್ಯರು ಆಪರೇಷನ್ ಮಾಡಿದ್ದು, ಯಾವುದೇ ಅಪಾಯವಿಲ್ಲ ಎಂದು ತಿಳಿಸಿದ್ದಾರೆ.

ಮಣಿಪಾಲ್ ಆಸ್ಪತ್ರೆಯು ದಿಗಂತ್ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದೆ. ಬೆಳಗ್ಗೆ 11 ಗಂಟೆ ನಂತರ ಎರಡನೇ ಹೆಲ್ತ್ ಬುಲೇಟಿನ್ ರಿಲೀಸ್ ಮಾಡಲಿದ್ದೇವೆ ಎಂದು ಮಣಿಪಾಲ್ ಆಸ್ಪತ್ರೆಯಿಂದ ಹೇಳಲಾಗಿದೆ. ಈ ಹೆಲ್ತ್ ಬುಲೆಟಿನ್​ನಲ್ಲಿ ವೈದ್ಯರು ಹೇಳುವ ಹಾಗೆ ಇದೊಂದು ಸ್ಪೋರ್ಟ್ಸ್ ಇಂಜುರಿ ಆಗಿದ್ದು, ಇದಕ್ಕೆ ಚಿಕಿತ್ಸೆ ನೀಡಲಾಗಿದೆ. ದಿಗಂತ್‌ಗೆ ಆಪರೇಷನ್ ಮಾಡಿ ಮುಗಿಸಿದ್ದು, ಸದ್ಯಕ್ಕೆ ಅಬ್ಸರ್ವೇಷನ್​ನಲ್ಲಿದ್ದಾರೆ ಎಂದಿದ್ದಾರೆ.

RELATED ARTICLES

Related Articles

TRENDING ARTICLES