ಬೆಳಗಾವಿ: ಅಗ್ನಿಪಥ್ ಯೋಜನೆಯನ್ನು ಬಹಳ ಸೂಕ್ಷ್ಮವಾಗಿ ಹಲವಾರು ತಜ್ಞರನ್ನು ಕೂಡಿದುಕೊಂಡು ವಿಶೇಷವಾಗಿ ವಿಶ್ಲೇಷಣೆ ಮಾಡಿಕೊಂಡು ಯೋಜನೆ ತಂದಿದ್ದಾರೆ ಎಂದು ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಶಾಸಕ ಮಹೇಶ್ ಕುಮಠಳ್ಳಿ ಹೇಳಿದರು.
ಅಗ್ನಿಪಥ್ ಯೋಜನೆ ಕುರಿತು ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಲವಾರು ನಿರುದ್ಯೋಗ ಯುವಕರಿಗೆ ಯೋಜನೆಯಿಂದ ಪ್ರಾಧ್ಯಾನತೆ ಸಿಗುತ್ತದೆ, ಕೇವಲ ನಾಲ್ಕು ವರ್ಷದಲ್ಲಿ ದೇಶ ಸೇವೆ ಜೊತೆಗೆ ತಮ್ಮ ಆರ್ಥಿಕ ಸಮಸ್ಯೆಯನ್ನು ಹೋಗಲಾಡಿಸಲು ಯೋಜನೆ ಉತ್ತಮವಾಗಿದೆ ಎಂದರು. ಯೋಜನೆಯ ಬಗ್ಗೆ ದೇಶದೆಲ್ಲಡೆ ಉತ್ತಮ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಕೆಲವರು ಸುಮ್ಮನೆ ಆರೋಪ ಮಾಡುತ್ತಿದ್ದಾರೆ ಎಂದರು.
ನಾನು ಪ್ರತಿ ಗ್ರಾಮಗಳಿಗೆ ಭೇಟಿ ನೀಡಿದಾಗ, ಹಾಗೂ ರಸ್ತೆಯಲ್ಲಿ ಹೋಗುವ ಕಾಲೇಜ್ ಹುಡುಗರನ್ನು ಕರೆದು ಅಗ್ನಿಪಥ್ ಯೋಜನೆ ಬಗ್ಗೆ ನಾನು ಕೇಳುತ್ತಿದ್ದೇನೆ, ಉತ್ತಮ ಯೋಜನೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ. ಕೆಲವರು ಪರ-ವಿರೋಧ ಚರ್ಚೆಗಳನ್ನು ಮಾಡುತ್ತಿದ್ದಾರೆ ಅದರಲ್ಲೂ ಕಾಂಗ್ರೆಸ್ ಪಕ್ಷ ಯೋಜನೆಯ ಬಗ್ಗೆ ಯುವಕರಲ್ಲಿ ತಪ್ಪು ಕಲ್ಪನೆಯನ್ನು ಮೂಡಿಸುತ್ತಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ಆರೋಪ ಮಾಡಿದರು.
ಅಲ್ಲದೇ ಕೆಲವು ಯುವಕರು ನಾಲ್ಕು ವರ್ಷ ಕೆಲಸ ಮಾಡಿ ತಿರುಗಿ ಮನೆಗೆ ಬರುತ್ತಾರೆ ಇನ್ನು ಸೇವೆ ಮಾಡಬೇಕೆಂದು ಅನ್ನುವರು ಮುಂದುವರಿಸುತ್ತಾರೆ. ಯೋಜನೆಯಿಂದ ಲಾಭವೇ ಹೊರತು ಯಾವುದೇ ನಷ್ಟವಿಲ್ಲವೆಂದರು