Wednesday, January 22, 2025

ನಾನು ರಾಜೀನಾಮೆಗೆ ಸಿದ್ಧ ಎಂದ ಸಿಎಂ ಉದ್ಧವ್‌ ಠಾಕ್ರೆ

ಮಹಾರಾಷ್ಟ್ರ ಸರ್ಕಾರ ಪತನವಾಗೋದು ಫಿಕ್ಸ್‌ ಆದಂತೆ ಕಾಣ್ತಿದೆ.. ಕೆಲ ದಿನಗಳಿಂದ ಮಹಾ ನಾಟಕ ಜೋರಾಗಿತ್ತು.. ಇವತ್ತು, ಒಂದು ಹೆಜ್ಜೆ ಮುಂದೆ ಹೋಗಿ ನಾನು ರಾಜೀನಾಮೆಗೆ ಸಿದ್ಧ ಎಂದು ಹೇಳಿದ್ದಾರೆ ಸಿಎಂ ಉದ್ಧವ್‌ ಠಾಕ್ರೆ.. ಈ ಮಧ್ಯೆ, ರಾಜ್ಯಪಾಲರ ಭೇಟಿಗೆ ರೆಡಿಯಾಗಿದೆ ಶಿಂಧೆ ಟೀಂ.

ಮಹಾರಾಷ್ಟ್ರ ರಾಜಕಾರಣದಲ್ಲಿ ನಡಿತಿರುವ ಹೈಡ್ರಾಮಾ.. ಕರ್ನಾಟಕ ಹೈಡ್ರಾಮಾಗಿಂತ ರೋಚಕವಾಗಿದೆ.. ಈ ಮಹಾ ನಾಟಕದಲ್ಲಿ ಶಿಂಧೆ ಹಿರೋ ರೋಲ್‌ ಮಾಡ್ತಿದ್ದಾರೆ.. ಇಷ್ಟು ದಿನ ತಣ್ಣಗಿದ್ದ ಮಹಾರಾಷ್ಟ್ರದಲ್ಲಿ ರಾಜಕೀಯ ಬಿರುಗಾಳಿ ಎಬ್ಬಿಸೋ ಮೂಲಕ ಹಿಂದುತ್ವ ಅಜೆಂಡಾ ಪ್ರದರ್ಶನ ಮಾಡ್ತಿದ್ದಾರೆ. ವಿಶೇಷ ಅಂದ್ರೆ, ಇದು ಉದ್ಧವ್‌ ಠಾಕ್ರೆ ವರ್ಸಸ್‌ ಏಕ್‌ನಾಥ್‌ ಶಿಂಧೆ ಎನ್ನುವಂತಾಗಿದೆ. ಸದ್ಯ ಮಹಾ ನಾಟಕದ ಮಹಾ ಮಂಗಳಾರತಿಗೂ ವೇದಿಕೆ ಸಿದ್ಧವಾಗಿದೆ.

ಸಾಕಷ್ಟು ಬಾರಿ ಮೀಟಿಂಗ್‌ ಮಾಡಿ ಮನವೊಲಿಸುವ ತಂತ್ರ ಉದ್ಧವ್‌ ಠಾಕ್ರೆ ಟೀಂಗೆ ಸಾಧ್ಯವಾಗಲೇ ಇಲ್ಲ. ನಾನಾ ನೀನಾ ಅಂತ ತೊಡೆ ತಟ್ಟಿದ ಏಕನಾಥ್‌ ಶಿಂಧೆ ಪ್ರಬಲ ಟೀಂ ಕಟ್ಟಿಕೊಂಡು ಶಿವಸೇನೆ ಮೇಲೆ ದಂಡೆತ್ತಿ ಬಂದಿದ್ದಾರೆ. ಸುಮಾರು 34 ಶಾಸಕರು ನಮ್‌ ನಾಯಕ ಇವ್ರೇ ಅಂತ ಶಿಂಧೆ ಪರ ಸಹಿ ಹಾಕಿಕೊಟ್ಟು ಬಿಟ್ಟಿದ್ದಾರೆ.

ನನ್ನ ಪರ 46 ಶಾಸಕರು ಇದ್ದಾರೆಂದು ಬಹಿರಂಗವಾಗಿಯೇ ಹೇಳಿಕೊಂಡಿದ್ದಾರೆ ಏಕನಾಥ್‌ ಶಿಂಧೆ. ನಮಗೆ ಶಿವಸೇನೆ ಜೊತೆ ಯಾವುದೇ ತಕರಾರು ಇಲ್ಲ.. ನಮಗಿರೋದು ಮೈತ್ರಿ ಪಕ್ಷಗಳಾದ ಕಾಂಗ್ರೆಸ್‌ ಹಾಗು ಎನ್‌ಸಿಪಿ ಜೊತೆ ಅನ್ನೋದನ್ನು ಸ್ಪಷ್ಟವಾಗಿಯೇ ತಿಳಿಸಿದ್ದಾರೆ ಏಕನಾಥ್‌ ಶಿಂಧೆ.

ಇದೆಲ್ಲದ್ರ ಮಧ್ಯೆ ದಿಢೀರ್‌ ಫೇಸ್‌ಬುಕ್‌ ಲೈವ್‌ ಬಂದ ಮಹಾರಾಷ್ಟ್ರ ಸಿಎಂ, ನನಗೆ ಕೋವಿಡ್‌ ಆಗಿದ್ದು, ಆರೋಗ್ಯ ಸರಿ ಇಲ್ಲ ಅಂತ ತಮ್ಮ ಮಾತು ಆರಂಭಿಸಿದ್ರು.. ಬಂಡಾಯ ಶಾಸಕರು ಯಾವುದೇ ಸುಳಿವು ನೀಡದೇ ಈ ರೀತಿ ಮಾಡಿದ್ದಾರೆಂದು ಅಸಮಾಧಾನ ಹೊರಹಾಕಿದ್ರು.. ಏಕನಾಥ್ ಶಿಂಧೆ ನನ್ನ ಜೊತೆ ನೇರವಾಗಿ ಮಾತಾಡಲಿ.. ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡ್ತೀನಿ ಅಂದ್ರು.

ಈಗ್ಲೂ ನಮ್ಮ ಜೊತೆ 63 ಶಾಸಕರು ಮುಂಬೈನಲ್ಲೇ ಇದ್ದಾರೆ.. ಬಂಡಾಯ ಶಾಸಕರು ಹಿಂದುತ್ವ ವಿಚಾರ ಎತ್ತಿದ್ದಾರೆ.. ಆದ್ರೆ, ಹಿಂದುತ್ವ ಶಿವಸೇನೆ ಒಂದೇ ನಾಣ್ಯದ ಎರಡು ಮುಖ ಎಂದು ರೆಬೆಲ್ಸ್‌ಗೆ ತಿರುಗೇಟು ನೀಡಿದ್ರು. ನಮ್ಮ ಶಾಸಕರು ಬಯಸಿದ್ರೆ ನಾನು ರಾಜೀನಾಮೆ ನೀಡಲು ಸಿದ್ಧ ಅಂತ ಸ್ಪಷ್ಟವಾಗಿಯೇ ಹೇಳಿದ್ದಾರೆ.. ಈ ಸಂಬಂಧ ರಾಜ್ಯಪಾಲರಿಗೆ ತಿಳಿಸಿದ್ದೇನೆ ಎಂದು ಉದ್ಧವ್‌ ಠಾಕ್ರೆ ಹೇಳಿದ್ದಾರೆ.

46 ಶಾಸಕರು ಗುವಾಹಟಿಯ ಹೋಟೆಲ್‌ನಲ್ಲಿದ್ದಾರೆ. ಇತ್ತ, 63 ಶಾಸಕರು ಮುಂಬೈನಲ್ಲೇ ಇದ್ದಾರೆ ಅಂತ ಉದ್ಧವ್‌ ಠಾಕ್ರೆ ಹೇಳ್ತಿದ್ದಾರೆ.. ಈ ಮಧ್ಯೆ, ಅಧಿಕೃತವಾಗಿ 34 ಶಾಸಕರು ಸಹಿ ಹಾಕುವ ಮೂಲಕ ಶಿಂಧೆಗೆ ಬೆಂಬಲಿಸಿದ್ದಾರೆ. ಈಗಾಗಲೇ ಉದ್ಧವ್‌ ಠಾಕ್ರೆ ರಾಜೀನಾಮೆ ಸುಳಿವು ನೀಡಿದ್ದಾರೆ.. ಮುಂದಿನ ಮಹಾ ನಾಟಕಕ್ಕೆ ಮಹಾ ಮಂಗಳಾರತಿ ಒಂದೇ ಬಾಕಿ ಇರುವಂತಿದೆ.

ಬ್ಯೂರೋ ರಿಪೋರ್ಟ್‌ ಪವರ್ ಟಿವಿ

RELATED ARTICLES

Related Articles

TRENDING ARTICLES