Wednesday, December 25, 2024

ಕಾಂಗ್ರೆಸ್ ಮುಟ್ಟಿದವರೆಲ್ಲಾ ನಾಶ ಆಗ್ತಿದ್ದಾರೆ : ಕೆ.ಎಸ್. ಈಶ್ವರಪ್ಪ

ಶಿವಮೊಗ್ಗ : ಸಿದ್ದರಾಮಯ್ಯನಿಗೆ ಹಿಡಿದಿರುವ ಹುಚ್ಚು ಬಿಡಿಸಲು ಈ ಪ್ರಪಂಚದಲ್ಲೇ ಯಾವುದೇ ಔಷಧಿ ಇಲ್ಲ ಎಂದು ಹೇಳಿದ್ದಾರೆ.

ರಾಜ್ಯಕ್ಕೆ ಪ್ರಧಾನಿ ಮೋದಿ ಭೇಟಿ ವಿಚಾರ ಸಿದ್ದರಾಮಯ್ಯ ಟೀಕೆ ವಿಚಾರವಾಗಿ ಮಾತನಾಡಿದ ಅವರು, ಸಿದ್ದರಾಮಯ್ಯನಿಗೆ ಹಿಡಿದಿರುವ ಹುಚ್ಚು ಬಿಡಿಸಲು ಈ ಪ್ರಪಂಚದಲ್ಲೇ ಯಾವುದೇ ಔಷಧಿ ಇಲ್ಲ. ಇಂತಹ ಸಂದರ್ಭದಲ್ಲಿ ಮೋದಿ ಇಡೀ ದೇಶಕ್ಕೆ ಮಾಡಿರುವ ಸೇವೆ ಮೆಚ್ಚಿಕೊಳ್ಳಬೇಕು. ಪ್ರತಿಯೊಬ್ಬ ವ್ಯಕ್ತಿಗೂ ಉಚಿತ ವ್ಯಾಕ್ಸಿನ್ ಕೊಟ್ಟಿದ್ದು ಮೋದಿ. ಇದನ್ನು ಬೇರೆ ದೇಶದವರೇ ಮೆಚ್ಚಿಕೊಂಡಿದ್ದಾರೆ. ಆದರೆ ಸಿದ್ದರಾಮಯ್ಯ ಟೀಕೆ ಮಾಡಲು ಬೆಲೆ ಇಲ್ಲ. ಟೀಕೆ ಮಾಡುವುದೇ ಇವರ ಕೆಲಸವಾಗಿದೆ ಎಂದರು.

ಇನ್ನು, ಕೋವಿಡ್ ಸಂದರ್ಭದಲ್ಲಿ ಬಡವರಿಗೆ ಎಷ್ಟೆಷ್ಟು ಕೆಜಿ ಅಕ್ಕಿ ಕೊಟ್ಟಿದ್ದು. ಸಿದ್ದರಾಮಯ್ಯ ಅವರಿಗೆ ನೆನಪು ಇದೆಯಾ…..? ಟೀಕೆ ಮಾಡುವ ಸಲುವಾಗಿಯೇ ಟೀಕೆ ಮಾಡಿದರೆ ನಮ್ಮ‌ ದೇಶದಲ್ಲಿ ಅದಕ್ಕೆ ಔಷಧಿ ಇಲ್ಲ. ಜನನೇ ಕಾಂಗ್ರೆಸ್ ನವರಿಗೆ ಉತ್ತರ ಕೊಟ್ಟಿದ್ದಾರೆ. ಮಹಾರಾಷ್ಟ್ರದಲ್ಲೂ ಜ‌ನ ಕಾಂಗ್ರೆಸ್​ಗೆ ಔಷಧಿ ಕೊಟ್ಟಿದ್ದಾರೆ ಎಂದು ಹೇಳಿದರು.

ಅದಲ್ಲದೇ, ಕಾಂಗ್ರೆಸ್ ಮುಟ್ಟಿದವರೆಲ್ಲಾ ನಾಶ ಆಗ್ತಿದ್ದಾರೆ. ಯುಪಿಯಲ್ಲಿ ಕಾಂಗ್ರೆಸ್ ಎಲ್ಲಿದೆ ಅಂತ ಹುಡುಕಬೇಕು. ಮಹಾರಾಷ್ಟ್ರದಲ್ಲಿ ಸರ್ಕಾರ ಪಥನ ವಿಚಾರ. ಮಹಾರಾಷ್ಟ್ರದಲ್ಲಿ ಸರ್ಕಾರ ಬಿದ್ದು ಹೋಗ್ತಿದೆ. ಅವರಾಗಿ ಅವರೇ ಬಂದ್ರೆ ಸರ್ಕಾರ ರಚನೆ ಮಾಡ್ತೀವಿ. ಈಗಿನ ಸರಕಾರದಲ್ಲಿ ಎಷ್ಟು ಪಕ್ಷ ಇದೆಯೋ ಗೊತ್ತಿಲ್ಲ. ಒಬ್ವರಿಗೊಬ್ಬರು ನಂಬಿಕೆ ಇಲ್ಲ. ಮಹಾರಾಷ್ಟ್ರದಲ್ಲಿ ಹಿಂದುತ್ವದ ಬಗ್ಗೆ ಬಾಳಠಾಕ್ರೆ ಹುಲಿ ಇದ್ದ ರೀತಿ ಇದ್ದರು. ಆದರೆ ಉದ್ಬವ್ ಟಾಕ್ರೆ ಇಲಿ ಇದ್ದಂಗೆ ಇದ್ದಾರೆ ಎಂದರು.

RELATED ARTICLES

Related Articles

TRENDING ARTICLES