Sunday, November 24, 2024

ನಂದಿಗದ್ದೆಯಲ್ಲಿ ಹಲಸಿನ ಮೇಳ

ಕಾರವಾರ: ಉತ್ತರಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ನಂದಿಗದ್ದಾದಲ್ಲಿ ಹರಿಪ್ರೀಯಾ ಸಂಜಿವಿನಿ ಗ್ರಾಮ ಪಂಚಾಯತ ಒಕ್ಕೂಟ ನಂದಿಗದ್ದೆ ಇವರ ಆಶ್ರಯದಲ್ಲಿ ಹಲಸಿನ ಮೇಳ ನಡೆಯಿತು.

ಹೆಚ್ಚಾಗಿ ಮಹಿಳೆಯರೆ ಈ ಹಲಸಿನ ಮೇಳದಲ್ಲಿ ಪಾಲ್ಗೊಂಡಿದ್ದು, ಬಹಳಷ್ಟು ಸ್ವಸಹಾಯ ಸಂಘಗಳು ಹಲಸಿನ ಕಾಯಿಯಿಂದ ಮಾಡಿದ ಖಾಧ್ಯಗಳನ್ನು ತಂದು ಮಾರಾಟ ಮಾಡಿದ್ದು,ಇದರಿಂದಾಗಿ ಮಹಿಳೆಯರಿಗೆ ತಾವು ದುಡಿಯಬಹುದು ಎಂಬುವ ಕಲ್ಪನೆ ಈ ಮೇಳದಿಂದ ಬರಬಹುದು ಎನ್ನುವುದು ಈ ಮೇಳದ ಉದ್ದೇಶ.ಒಂದು ವಾರಗಳಿಂದ ಶ್ರಮ ಪಟ್ಟು ಮನೆಯಲ್ಲಿಯಲ್ಲಿರುವ ಹೆಣ್ಣು ಮಕ್ಕಳು ಹಲಸಿನ‌ ಖಾಧ್ಯ ಮಾಡಿ ಇಲ್ಲಿ ಪ್ರದರ್ಶನಕ್ಕೆ ತಂದಿರುವುದು ವಿಶೇಷ.

ಆಧುನಿಕ ಯುಗದಲ್ಲಿ ಜನರು ಜಂಕ್ ಪುಡ್ ಕಡೆಗೆ ಹೆಚ್ಚಿನ ಜನರು ವಾಲುತ್ತಿರುವ ಈ ಸಂದರ್ಭದಲ್ಲಿ ಇಂತಹ ಹಲಸಿನ ಮೇಳವನ್ನು ಮಾಡುವುದರಿಂದ ನಿಸರ್ಗ ದತ್ತವಾಗಿ ಸಿಗುವ ಹಲಸು, ಬಾಳೆ ಹೀಗೆ ಮುಂತಾದ ಬೆಳೆಗೆಳ ಖಾಧ್ಯಗಳನ್ನು ಸೇವಿಸಬಹುದಾಗಿದೆ, ಮಹಿಳೆಯರೇ ಹಲಸಿನ ಮೇಳವನ್ನು ಆಯೋಜನೆ ಮಾಡಿರುವುದು ಮೆಚ್ಚುಗೆ ತಂದಿದೆ.

ಹಲಸಿನ ಮೇಳದಲ್ಲಿ ಹಲಸಿನ ಕಾಯಿಯಿಂದ ಮಾಡಿದ ವಿವಿಧ ರೀತಿಯ ಖಾಧ್ಯಗಳನ್ನು ಮಾಡಲಾಗಿತ್ತು, ನೂರಾರು ಜನರು ಹಲಸಿನ ಮೇಳದಲ್ಲಿ ಭಾಗವಹಿಸಿ ತಿಂಡಿ ತಿನಿಸುಗಳನ್ನು ಖರೀದಿ ಮಾಡಿ ಸಂತಸ ಪಟ್ಟರು.

*ಉದಯ ಬರ್ಗಿ ಪವರ್ ಟಿವಿ ಕಾರವಾರ

RELATED ARTICLES

Related Articles

TRENDING ARTICLES