Sunday, January 5, 2025

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಗೆ ಆರ್ಥಿಕ ಸಂಕಷ್ಟ

ಧಾರವಾಡ: 22-ರಾಜ್ಯದ ಎರಡನೇ ಅತಿದೊಡ್ಡ ಪಾಲಿಕೆಯಾಗಿರುವ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ.

ಕಳೆದ ಮೂರು ವರ್ಷಗಳಿಂದ ಅಧಿಕಾರಿಗಳ ಕೈಯಲ್ಲಿದ್ದ ಪಾಲಿಕೆಗೆ ಇದೀಗ ಮೇಯರ, ಉಪ ಮೇಯರ ಬಂದಾಗಿದೆ. ಕೋವಿಡ್​ ಪರಿಣಾಮ ಪಾಲಿಕೆಗೆ ಎರಡು ವರ್ಷಗಳಿಂದ ಬರಬೇಕಿದ್ದ ವಾರ್ಷಿಕ ನೂರು ಕೋಟಿ ರೂಪಾಯಿ ಅನುದಾನ ಬರದೇ ಇರೋ ಕಾರಣಕ್ಕೆ ಆರ್ಥಿಕ ಸ್ಥಿತಿ ಹದಗೆಟ್ಟಿದೆ. ಇದ್ದ ಸಂಪನ್ಮೂಲಗಳಲ್ಲಿಯೇ ಆಡಳಿತ ಮತ್ತು ಅಭಿವೃದ್ಧಿ ಕೆಲಸ ಕೈಗೊಳ್ಳಲು ಪಾಲಿಕೆಗೆ ಆರ್ಥಿಕ ಶಕ್ತಿ ತುಂಬಬೇಕಾಗಿದೆ.

ಕಳೆದ ಒಂದು ವರ್ಷದಿಂದ ಪಾಲಿಕೆ 64 ಕೋಟಿ ವಿದುತ್​​ ಬಿಲ್ ಬಾಕಿ ಉಳಿಸಿಕೊಂಡಿದೆ. ಇನ್ನು ಕುಡಿಯುವ ನೀರಿನ ಯೋಜನೆಗೆ ಬರಬೇಕಿದ್ದ 84 ಕೋಟಿ ಹಣ ರಾಜ್ಯ ಸರ್ಕಾರ ಉಳಿಸಿಕೊಂಡಿದೆ. ಇನ್ನು ನಗರೋತ್ತಾನ ಯೋಜನೆಯಡಿ ಪಾಲಿಕೆಗೆ 52 ಕೋಟಿ ಬರಬೇಕಿದೆ.

ಒಟ್ಟು 141 ಕೋಟಿ ಹಣ ಪಾಲಿಕೆಗೆ ಬರಬೇಕಿದ್ದು, ಇಷ್ಟು ಹಣ ಪಾಲಿಕೆಗೆ ಬಂದರೆ ಪಾಲಿಕೆ ಆಡಳಿತ ಸುಗಮವಾಗಿ ನಡೆಯಲಿದೆ. ಇನ್ನು ಎರಡು ವರ್ಷಗಳಿಂದ ರಾಜ್ಯ ಸರ್ಕಾರದಿಂದ ಪಾಲಿಕೆಗೆ ಬರಬೇಕಿದ್ದ ವಾರ್ಷಿಕ ನೂರು ಕೋಟಿ ವಿಶೇಷ ಅನುದಾನ ಬರದೇ ಇರುವದು ಅಭಿವೃದ್ಧಿಗೆ ಹಿನ್ನೆಡೆಯಾಗಿದೆ. ಮೂರು ವರ್ಷಗಳ ನಂತರ ಪಾಲಿಕೆಗೆ ಮೇಯರ, ಉಪ ಮೇಯರ ಆಯ್ಕೆಗೊಂಡಿದ್ದು, ಪಾಲಿಕೆಗೆ ರಾಜ್ಯ ಸರ್ಕಾರದಿಂದ ಬರುವ ಬಾಕಿ ಹಣವನ್ನು ತರಲು ಮುಂದಾಗಿದ್ದಾರೆ.

ಮುಸ್ತಫಾ ಕುನ್ನಿಭಾವಿ ಪವರ್ ಟಿ ವಿ ಧಾರವಾಡ

RELATED ARTICLES

Related Articles

TRENDING ARTICLES