Monday, December 23, 2024

ದೇಶದಲ್ಲಿ ಗಾಂಧಿ ಕುಟುಂಬಕ್ಕೊಂದು, ಜನರಿಗೊಂದು ಕಾನೂನಿಲ್ಲ : ಆರಗ ಜ್ಞಾನೇಂದ್ರ

ಚಿಕ್ಕಮಗಳೂರು : ಈ ದೇಶದಲ್ಲಿ ಗಾಂಧಿ ಕುಟುಂಬಕ್ಕೊಂದು, ಜನರಿಗೊಂದು ಕಾನೂನಿಲ್ಲ ಎಲ್ಲರಿಗೂ ಒಂದೇ ಕಾನೂನು, ಈ ನೆಲದ ಕಾನೂನುನನ್ನ ಎಲ್ಲರೂ ಗೌರವಿಸಬೇಕು ಎಂದು ಕಾಂಗ್ರೆಸ್ ಪ್ರತಿಭಟನೆ ವಿರುದ್ಧ ಗೃಹ ಸಚಿವ ಆರಗ ಜ್ಞಾನೇಂದ್ರ ಕಿಡಿಕಾರಿದ್ದಾರೆ.

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಪ್ಪಿದ್ದಾಗ ಇಡಿ ಕರೆದು ವಿಚಾರಣೆ ಮಾಡಿದಾಗ ಪ್ರತಿಭಟನೆ ಮಾಡ್ತಾರೆ. ಅವರಿಗೆ ಈ ದೇಶದ ಕಾನೂನಿನ ಬಗ್ಗೆ ಗೌರವವಿಲ್ಲ. ಕಾಂಗ್ರೆಸ್ ದೇಶದ ಜನರ ವಿಶ್ವಾಸ ಕಳೆದುಕೊಳ್ತಾರೆ, ಅಲ್ಲದೆ ಇದರಿಂದ ಜನರು ಅವರನ್ನು ತುಚ್ಛವಾಗಿ ನೋಡ್ತಾರೆ ಎಂದು ಟೀಕಿಸಿದರು.

ಇನ್ನು ಮಹಾರಾಷ್ಟ್ರ ಅತೃಪ್ತ ಶಾಸಕರು ರೇಸಾರ್ಟ್ ಹೋಗಿರೋ ಹಿನ್ನೆಲೆ ಪ್ರತಿಕ್ರಿಯಿಸಿ, 2019 ಬಿಜೆಪಿ-ಶಿವಸೇನೆ ಒಟ್ಟಿಗೆ ಜನರ ಬಳಿ ಹೋಗಿದರು, ಜನ ತೀರ್ಪು ನೀಡಿದ್ದಾರೆ. ಉದ್ಧವ ಠಾಕ್ರೆ ಉದ್ದಟತನ ಮಾಡಿ 8 ಪಕ್ಷ ಸೇರಿಸಿಕೊಂಡು ಸಿಎಂ ಆಗಿದ್ದರು. ಎಲ್ಲರಿಗೂ ಗೊತ್ತಿತ್ತು ಇದು ಬಹಳ ದಿನ ನಡೆಯಲ್ಲ, ಈ ಸರ್ಕಾರಕ್ಕೆ ಆಯಸ್ಸು ಕಡಿಮೆ ಅಂತ. ಇಂದು ಅದರಂತೆಯೇ ಎಲ್ಲಾ ನಡೆಯುತ್ತಿದೆ, ಇದು ಮೊದಲೇ ಗೊತ್ತಿತ್ತು ಎಂದು ಚಿಕ್ಕಮಗಳೂರಿನಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

RELATED ARTICLES

Related Articles

TRENDING ARTICLES