Tuesday, December 24, 2024

ಬಾದಾಮಿ ಎಂದು ಮರಳಿಕಾಯಿ ಬೀಜ ತಿಂದು ಐವರು ಮಕ್ಕಳು ಅಸ್ವಸ್ಥ

ಚಾಮರಾಜನಗರ : ಮರಳಿಕಾಯಿ ಬೀಜವನ್ನು ಬಾದಾಮಿ ಎಂದು ತಿಂದು ಐವರು ಅಸ್ವಸ್ಥರಾಗಿರುವ ಘಟನೆ ಗಡಿಭಾಗವಾದ ತಮಿಳುನಾಡಿನ ತಾಳವಾಡಿಯ ಡಾ.ರಾಜ್ ತವರೂರು ಗಾಜನೂರಲ್ಲಿ ನಡೆದಿದೆ.

ಸಂಜೆ ಆಟ ಆಡುತ್ತಿದ್ದ ವೇಳೆ 11 ವರ್ಷದ ಆದರ್ಶ ಎಂವಾತ ಸೇರಿ 7 ವರ್ಷದ ಇಬ್ಬರು ಬಾಲಕಿಯರು, ಬಾಲಕರು ಮರಳಿಕಾಯಿ ಬೀಜವನ್ನು ಜಜ್ಜಿ ತಿಂದಿದ್ದಾರೆ‌ ಎನ್ನಲಾಗಿದೆ. ಬೀಜ ತಿನ್ನುತ್ತಿದ್ದಂತೆ ಗಂಟಲು ಹಿಡಿದುಕೊಂಡು ಅಸ್ವಸ್ಥರಾಗಿದ್ದಾರೆ.

ಕೂಡಲೇ ಎಚ್ಚೆತ್ತ ಪಾಲಕರು ತಮಿಳುನಾಡಿನ ಆ್ಯಂಬುಲೆನ್ಸ್ ಮಾಡಿಕೊಂಡು ಚಾಮರಾಜನಗರ ಜಿಲ್ಲಾಸ್ಪತ್ರೆಗೆ ತಂದು ದಾಖಲಿಸಿದ್ದಾರೆ. ಸದ್ಯ, ಐವರು ಮಕ್ಕಳು ಎಮರ್ಜೆನ್ಸಿ ವಾರ್ಡ್ ನಲ್ಲಿದ್ದು ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ.

RELATED ARTICLES

Related Articles

TRENDING ARTICLES