Tuesday, January 21, 2025

ಯುವ ನಟ ಸತೀಶ್ ವಜ್ರ ಬರ್ಬರ ಹತ್ಯೆ ಪ್ರಕರಣ : ಆರೋಪಿಗಳ ಹೆಜ್ಜೆಗುರುತು ಸಿಸಿಟಿವಿಯಲ್ಲಿ ಸೆರೆ

ಬೆಂಗಳೂರು: ರಾತ್ರೋರಾತ್ರಿ ಬರುವ ಇವರ ತಲೆಯಲ್ಲಿ ಒಂದು ಕೊಲೆಯ ಸಂಚು ಅಡಗಿತ್ತು. ಅಂದುಕೊಂಡಂತೆ ಜಸ್ಟ್ ಒಂದೇ ಒಂದು ಗಂಟೆಯಲ್ಲಿ ಕೆಲಸ ಮುಗಿಸಿ ಹೊರಟು ಹೋಗಿದ್ರು. ಇದೇ ಸಿಸಿಟಿವಿ ಆಧಾರದ ಮೇಲೆ ಕಾರ್ಯಾಚರಣೆಗೆ ಇಳಿದಿದ್ದ ಆರ್.ಆರ್.ನಗರ ಠಾಣೆ ಇನ್ಸ್‌ಪೆಕ್ಟರ್ ಶಿವಣ್ಣ ನೇತೃತ್ವದ ತಂಡ ರಾತ್ರಿಯಾಗೋದರೊಳಗೆ ಆರೋಪಿಗಳ ಹೆಡೆಮುರಿ ಕಟ್ಟಿದ್ರು.

ಅವತ್ತು ಜೂನ್ 18ರ ಬೆಳಗ್ಗೆ ಆರ್.ಆರ್.ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಪಟ್ಟಣಗೆರೆಯಲ್ಲಿ ಒಂದು ಭೀಕರ ಕೊಲೆ ನಡೆದುಹೋಗಿತ್ತು. ಬಾಗಿಲಿಗೆ ಅಂಟಿದ ರಕ್ತದ ಕಲೆ ನೋಡಿದ್ದ ಮನೆ ಮಾಲೀಕ ಪೊಲೀಸರಿಗೆ ಮಾಹಿತಿ ನೀಡಿದ್ದ. ಸ್ಥಳಕ್ಕೆ ಬಂದು ನೋಡಿದ ಪೊಲೀಸರಿಗೆ ಕಂಡಿದ್ದೇ ಸತೀಶ್ ವಜ್ರ ಎಂಬ ಯುವ ನಟನ‌ ಮೃತದೇಹ.
ಬಾವನನ್ನು ಕೊಲ್ಲಲೇಬೇಕೆಂದು ನಿರ್ಧರಿಸಿದ್ದ ಭಾಮೈದ ಸುದರ್ಶನ್, ನಾಗೇಂದ್ರ ಜೊತೆ ಮಂಡ್ಯದಿಂದ ಬೆಂಗಳೂರಿಗೆ ಆಗಮಿಸಿದ್ದ.ಬಂದವರೇ K.R.ಮಾರ್ಕೆಟ್​​ನಲ್ಲಿ ಚಾಕುವೊಂದನ್ನು ಖರೀದಿಸಿದ್ದಾರೆ. ನಂತರ ವಜ್ರ ಕೆಲಸ ಮಾಡ್ತಿದ್ದ ವಜ್ರ ಸಲೂನ್ ಸುತ್ತ ವಾಚ್ ಮಾಡಿದ್ದಾರೆ. ಸತೀಶ್ ಮನೆಗೆ ಹೊರಟಿದ್ದೇ ತಡ ಇವರು ಫಾಲೋ ಮಾಡ್ಕೊಂಡು ನಂತರ ಸತೀಶ್ ಮನೆಗೆ ಬಂದಿದ್ದಾರೆ.ಲೇಟಾಗಿದೆ ಇವತ್ತು ಇಲ್ಲೇ ಇದ್ದು ನಾಳೆ ಹೋಗ್ತೀವಿ ಅಂದಿದ್ದಾರೆ. ಆಯ್ತು ಅಂದ ಸತೀಶ್ ರೂಮ್​ನಲ್ಲಿ ಅವರಿಗೆ ಮಲಗಲು ವ್ಯವಸ್ಥೆ ಮಾಡಿ, ತಾನೂ ಮಲಗಿದ್ದ.

ನಂತರ ಇದ್ದಕ್ಕಿದ್ದಂತೆ ರಾಕ್ಷಸ ರೂಪ ತಾಳಿದ ಸುದರ್ಶನ್, ಸತೀಶ್ ಕತ್ತಿಗೆ ಚಾಕು ಹಾಕಿದ್ದ.ನಂತರ ನಾಗೇಂದ್ರ ಆತನನ್ನು ಹಿಡಿದುಕೊಂಡಿದ್ರೆ.ಹೊಟ್ಟೆಗೆ ಇರಿದು ಬರ್ಬರವಾಗಿ ಕೊಂದು, ಅಲ್ಲೇ ಕೈಕಾಲು ತೊಳೆದುಕೊಂಡು, ಸತೀಶ್ ಬಂದಿದ್ದ ಬೈಕ್ ಕೀ ತೆಗೆದುಕೊಂಡು ಸರಿಯಾಗಿ 18ರ ರಾತ್ರಿ 12.25 ಕ್ಕೆ ಮನೆಯಿಂದ ಬೈಕ್ ತೆಗೆದುಕೊಂಡು ಹೊರಟಿದ್ದಾರೆ.

ಏನೇ..ಹೇಳಿ ಒಂದು ಅನಾರೋಗ್ಯದ ಸಾವು ಮತ್ತೊಂದು ಪ್ರಾಣವನ್ನೂ ಬಲಿ ಪಡೆದಿದೆ. ಆದರೆ, ಏನೂ ಅರಿಯದ ಆ ದಂಪತಿಯ ಪುಟ್ಟ ಮಗುವೊಂದು ತಂದೆ ತಾಯಿ ಇಬ್ಬರನ್ನೂ ಕಳೆದುಕೊಂಡು ಅನಾಥವಾಗಿದೆ.

ಅಶ್ವಥ್ ಎಸ್.ಎನ್.ಕ್ರೈಂ ಬ್ಯೂರೋ ಪವರ್ ಟಿವಿ

RELATED ARTICLES

Related Articles

TRENDING ARTICLES