ಶಿವಮೊಗ್ಗ: ಒಂದು ಕಾಲದಲ್ಲಿ ತುಂಗಭದ್ರಾ ಶುಗರ್ಸ್ ಕಾರ್ಖಾನೆ ರಾಜ್ಯದಲ್ಲಿಯೇ ಪ್ರಖ್ಯಾತಿ ಪಡೆದುಕೊಂಡಿತ್ತು.ಆದ್ರೆ, ಈ ಕಾರ್ಖಾನೆ ಶಿವಮೊಗ್ಗದಲ್ಲಿ ಇರಲಿಲ್ಲ. ಆದ್ರೂ, ಅಂದು ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದವರಿಗೆ, ಅವರವರು ವಾಸ ಮಾಡುತ್ತಿದ್ದ ಕ್ವಾಟ್ರಸ್ ಮನೆಗಳನ್ನು ಅವರವರಿಗೆ ಬಿಟ್ಟುಕೊಡಲಾಗಿತ್ತು. ಕಾರ್ಖಾನೆ ಮಾಲಿಕರೇ, ಸಭೆ ಕರೆದು, ನಿಮ್ಮ ಕ್ವಾಟ್ರಸ್ನಲ್ಲಿ ನೀವು ಇರಿ. ನಿಮ್ಮ ದಾಖಲೆಗಳನ್ನು ನೀವು ಮಾಡಿಕೊಳ್ಳಿ, ಕಂದಾಯ ಕಟ್ಟಿಕೊಳ್ಳಿ, ನೀರು, ವಿದ್ಯುತ್ ಸಂಪರ್ಕ ನಿಮ್ಮ ಹೆಸರಿನಲ್ಲೇ ಮಾಡಿಕೊಳ್ಳಿ.ನಿಮ್ಮ ಮನೆಯನ್ನು ನೀವು ನವೀಕರಣ ಮಾಡಿಕೊಳ್ಳಿ ಎಂದು ಹೇಳಿ ಹೊರಟು ಹೋಗಿದ್ರು.ಆದ್ರೆ,ಈ ಕ್ವಾಟ್ರಸ್ ನಿವಾಸಿಗಳಿಗೆ, ಕೆಲ ಮಧ್ಯವರ್ತಿಗಳು ಪೀಡಿಸತೊಡಗಿದ್ದಾರೆ.ನಿಮ್ಮ ಮನೆ ಖಾಲಿ ಮಾಡಿ. ಇಲ್ಯಾಕೆ ಇದೀರಾ..? ಇದೇನು ನಿಮ್ಮ ಮನೆನಾ ಎಂದು ಫೋನ್ ಮಾಡಿ ಆವಾಜ್ ಹಾಕುತ್ತಿದ್ದಾರಂತೆ.
ಶಿವಮೊಗ್ಗದ ಪ್ರತಿಷ್ಠಿತ ಶುಗರ್ ಫ್ಯಾಕ್ಟರ್ ನಿಂತು ಹೋಗಿ 30 ವರ್ಷಗಳಾಗುತ್ತಾ ಬಂದಿದ್ದು, ಇದುವರೆಗೂ ತಮ್ಮ ಅವಸ್ಥೆ ಕೇಳದ ಯಾರು ಕೂಡ, ಇದೀಗ ಏಕಾಏಕೀ ಬಂದು ಮನೆ ಖಾಲಿ ಮಾಡಿ ಎಂದರೆ, ನಾವು ಎಲ್ಲಿ ಹೋಗಬೇಕೆಂದು ಪ್ರಶ್ನಿಸುತ್ತಿದ್ದಾರೆ. ಎಲ್ಲಾ ಕೇಸುಗಳನ್ನು ನಾವು ಗೆದ್ದು ಬಂದಿದ್ದು, ಎಲ್ಲವೂ ಸೂಸುತ್ರವಾಗಿ ಬಗೆಹರಿದಿದ್ದರೂ ಇದೀಗ ನಮಗೆ ಟಾರ್ಚರ್ ನೀಡುತ್ತಿದ್ದಾರೆ ಎಂದು ಕಾರ್ಮಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಒಟ್ಟಿನಲ್ಲಿ ದೇವರು ವರ ಕೊಟ್ರೂ, ಪೂಜಾರಿ ಕೊಡಲಿಲ್ಲ ಎಂಬ ಗಾದೆ ಮಾತಿನಂತಾಗಿದೆ ಈ ಪರಿಸ್ಥಿತಿ.ಏನೇ ಆಗ್ಲಿ, ಕ್ವಾಟ್ರಸ್‌ನಲ್ಲಿರುವ ಬಡ ಕಾರ್ಮಿಕ ಕುಟುಂಬಗಳಿಗೆ ನ್ಯಾಯ ಸಿಗಲೇಬೇಕಿದೆ.
ಗೋ.ವ.ಮೋಹನಕೃಷ್ಣ, ಪವರ್ ಟಿ.ವಿ.ಶಿವಮೊಗ್ಗ