Wednesday, January 22, 2025

ಬಿಜೆಪಿ ಸಚಿವರುಗಳ ವಿರುದ್ಧ ಏಕವಚನದಲ್ಲಿ ಮಾತನಾಡಿದ್ದು ಸರಿಯಲ್ಲ : ಶಾಂತನಗೌಡಾ ಪಾಟೀಲ್

ಬಾಗಲಕೋಟೆ : ದೇಶದಲ್ಲಿ ಒಳ್ಳೆಯ ಕಾರ್ಯ ಮಾಡುವರಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಭಯೋತ್ಪಾದಕರು ಅಂತಾರೆ ಎಂದು ಬಾಗಲಕೋಟೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಶಾಂತನಗೌಡಾ ಪಾಟೀಲ್ ಹೇಳಿದ್ದಾರೆ.

ಆರ್ ಎಸ್ ಎಸ್ ಮೇಲಿನ ಸಿದ್ದು ಆರೋಪ ವಿಚಾರವಾಗಿ ಮಾತನಾಡಿದ ಅವರು, ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ ರಾಷ್ಟ್ರಸೇವಕರು ಭಯೋತ್ಪಾದಕರ ತರಾ ಕಾಣ್ತಾರೆ. ಭಯೋತ್ಪಾದಕರು ಸಿದ್ದುಗೆ ರಾಷ್ಟ್ರಸೇವಕರ ತರಾ ಕಾಣ್ತಾರೆ. ದೇಶದಲ್ಲಿ ಒಳ್ಳೆಯ ಕಾರ್ಯ ಮಾಡುವರಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಭಯೋತ್ಪಾದಕರು ಅಂತಾರೆ ಎಂದರು.

ಅದಲ್ಲದೇ, ಬಿಜೆಪಿ ಸಚಿವರ ವಿರುದ್ಧ ಮಾಜಿ ಸಿಎಂ ಸಿದ್ದು ಏಕವಚನ ಪದ ಬಳಕೆ ವಿಚಾರವಾಗಿ ಮಾತನಾಡಿದ ಅವರು, ಮಾಜಿ ಸಿಎಂ ಸಿದ್ದರಾಮಯ್ಯ ಅವರು ಹಿರಿಯ ಅನುಭವಿ ರಾಜಕಾರಣಿ. ಅವರ ರಾಜಕೀಯ ಅನುಭವ ಇತರರಿಗೆ ಮಾದರಿಯಾಗಬೇಕು. ಬಿಜೆಪಿ ಸಚಿವರುಗಳ ವಿರುದ್ಧ ಏಕವಚನದಲ್ಲಿ ಮಾತನಾಡಿದ್ದು ಸರಿಯಲ್ಲ ಎಂದು ಹೇಳಿದರು.

ಇನ್ನು, ಕೇಂದ್ರ ಸಚಿವ ಪಿ.ರಾಜೀವ್ ಚಂದ್ರಶೇಖರ್ ಮತ್ತು ಸಿ.ಸಿ.ಪಾಟೀಲ್ ವಿರುದ್ಧ ಮಾತನಾಡಿದ್ದು ತಪ್ಪು. ಸಚಿವರುಗಳಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಗೌರವ ನೀಡಬೇಕು. ಸಚಿವರಿಗೆ ಹಗುರವಾಗಿ ಮಾತನಾಡಿದ ಪದಗಳನ್ನ ಮಾಜಿ ಸಿಎಂ ವಾಪಸ್ ಪಡೆಯಬೇಕು. ಇದು ಹೀಗೆ ಮುಂದುವರೆಸಿದ್ರೆ ಪ್ರತಿಯಾಗಿ ಬಿಜೆಪಿ ಕೂಡಾ ಅದೇ ಭಾಷೆ ಬಳಸಬೇಕಾಗುತ್ತೆ ಎಂದು ಬಾಗಲಕೋಟೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಶಾಂತನಗೌಡ ಪಾಟೀಲ್ ಹೇಳಿದ್ದಾರೆ.

RELATED ARTICLES

Related Articles

TRENDING ARTICLES