Monday, December 23, 2024

ಧ್ರುವ ಸಾರಥ್ಯದಲ್ಲಿ ಚಿರು ರಾಜಮಾರ್ತಾಂಡ ಖದರ್

ಅಂತೂ ಇಂತೂ ಸಿಲ್ವರ್ ಸ್ಕ್ರೀನ್ ಮೇಲೆ ರಾಜಾಮಾರ್ತಾಂಡನ ಭರಾಟೆಗೆ ಡೇಟ್ ಫಿಕ್ಸ್ ಆಗಿದೆ. ಚಿರು ಅಭಿನಯದ ಕೊನೆಯ ಸಿನಿಮಾ ಕಣ್ತುಂಬಿಕೊಳ್ಳೋ ಸುದಿನ ಹತ್ತಿರವಾಗ್ತಿದೆ. ಅತೀ ಶೀಘ್ರದಲ್ಲೇ ನಿಮಗೆಲ್ಲಾ ಗುಡ್ ನ್ಯೂಸ್ ಕೊಡೋದಾಗಿ ಚಿತ್ರತಂಡ ಮಾತು ಕೊಟ್ಟಿತ್ತು. ಇದೀಗ ಚಿತ್ರತಂಡದ ಅನೌನ್ಸ್​​ಮೆಂಟ್ ಕೇಳಿ ಪ್ರೇಕ್ಷಕರು ಫುಲ್ ಥ್ರಿಲ್ ಆಗಿದ್ದಾರೆ.

ಚಿರು ಅಭಿಮಾನಿಗಳಿಗೆ ಸಿಗಲಿದೆ ಸರ್​​ಪ್ರೈಸಿಂಗ್ ನ್ಯೂಸ್

ಕನ್ನಡ ಸಿನಿಲೋಕದಲ್ಲಿ ಬಹುಬೇಗನೆ ನಮ್ಮಿಂದ ದೂರಾದ ಧೃವತಾರೆ ಚಿರಂಜೀವಿ ಸರ್ಜಾ. ಅವರ ಸ್ಮೈಲ್, ಆ್ಯಕ್ಟಿಂಗ್, ಅವ್ರ ಸಿಂಪಲ್ ಕ್ಯಾರೆಕ್ಟರ್​ಗೆ ಫ್ಯಾನ್ಸ್ ಕೂಡ ಮನಸೋತಿದ್ರು. ಆದ್ರೆ ವಿಧಿಯ ಕ್ರೂರ ಆಟದೆದುರು ಚಿಕ್ಕ ವಯಸ್ಸಿನಲ್ಲೇ ಅಪಾರ ಅಭಿಮಾನಿಗಳನ್ನು ತೊರೆದು ಬಾರದ ಲೋಕಕ್ಕೆ ಪಯಣ ಬೆಳೆಸಿದ್ರು. ಆದ್ರೆ ಅವ್ರ ಸಿನಿಮಾಗಳ ಮೂಲಕ ಚಿರು ಇಂದಿಗೂ ಜೀವಂತವಾಗಿದ್ದಾರೆ.

ಚಿರು ನಮ್ಮನ್ನೆಲ್ಲಾ ಅಗಲಿದ ಆ ಕರಾಳ ದಿನವನ್ನು ನೆನಪು ಮಾಡಿಕೊಳ್ಳಲು ಕೂಡ ಕಷ್ಟವಾಗುತ್ತೆ. ಚರಂಜೀವಿ ಸರ್ಜಾ ಅಭಿನಯದ ಕೊನೆಯ ಸಿನಿಮಾ ರಾಜಾಮಾರ್ತಾಂಡ ಇದೀಗ ರಿಲೀಸ್ ಆಗೋಕೆ ರೆಡಿಯಾಗಿದೆ. ತುಂಬಾ ಇಷ್ಟ ಪಟ್ಟು, ಸಖತ್ ಎಫರ್ಟ್ ಹಾಕಿ ಮಾಡಿದ ಸಿನಿಮಾ ಇದು. ಹೆಚ್ಚಾಗಿ ಈ ಸಿನಿಮಾ ಮೇಲೆ ಚಿರು ಅವ್ರಿಗೆ ತುಂಬಾ ಪ್ರೀತಿ ಇತ್ತಂತೆ. ಈ ಸಿನಿಮಾ ಗೆಲ್ಲೋದಾಗಿಯೂ ಕೂಡ ಚಿರುಗೆ ನಂಬಿಕೆ ಇತ್ತು. ಆದ್ರೇ ಡಬ್ಬಿಂಗ್ ಮುಂಚೆಯೇ ಇಹಲೋಕ ತ್ಯಜಿಸಿಬಿಟ್ರು ಅಭಿಮಾನಿಗಳ ಆರಾಧ್ಯ ಧೈವ ಚಿರಂಜೀವಿ ಸರ್ಜಾ.

ರಾಜಮಾರ್ತಾಂಡನಿಗೆ ದನಿಯಾದ ಆ್ಯಕ್ಷನ್ ಫ್ರಿನ್ಸ್ ಧ್ರುವ

ಚಿರು ಕೊನೆಯ ಸಿನಿಮಾದಲ್ಲಿ ಪುತ್ರ ರಾಯನ್ ಆ್ಯಕ್ಟಿಂಗ್..!

ರಾಜಮಾರ್ತಾಂಡ ಸಿನಿಮಾದ ಟ್ರೈಲರ್ ಗೆ ಈಗಾಗ್ಲೇ ಫ್ಯಾನ್ಸ್ ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ. ಸಿನಿಮಾದ ಹಾಡುಗಳು ಕೂಡ ಎಲ್ಲರ ಕಿವಿಯಲ್ಲಿ ಗುನುಗುತ್ತಿವೆ. ಚಿರುಗೆ ದನಿಯಾಗಿ ಮಾರ್ಟಿನ್ ಧ್ರುವ ಡಬ್ಬಿಂಗ್ ಕಾರ್ಯವನ್ನು ಮುಗಿಸಿದ್ದಾರೆ. ಅಣ್ಣನಿಗೆ ದನಿಯಾಗಬೇಕಾದ ಸಂದರ್ಭವನ್ನು ಎಂದಿಗೂ ಊಹಿಸಿರದ ಮಾರ್ಟಿನ್ ಭಾವುಕರಾಗಿ ಡಬ್ಬಿಂಗ್ ಕಾರ್ಯ ಮುಗಿಸಿದ್ದಾರೆ. ಚಿರು ಕೊನೆ ಬಾರಿ ತೆರೆಯ ಮೇಲೆ ನೋಡಿ ಕಣ್ತುಂಬಿಕೊಳ್ಳೋಕೆ ನೆಚ್ಚಿನ ಅಭಿಮಾನಿಗಳು ತುದಿಗಾಲಲ್ಲಿ ಕಾಯ್ತಿದ್ದಾರೆ.

ಇದೀಗ ರಾಜಾಮಾರ್ತಾಂಡ ಚಿತ್ರತಂಡ ಜೂನ್ 23ರಂದು ರಿಲೀಸ್ ಡೇಟ್ ಅನೌನ್ಸ್ ಹೇಳಿದೆ. ರಿಲೀಸ್ ಡೇಟ್​ನ ಚಿರು ಸಹೋದರ ಆ್ಯಕ್ಷನ್ ಪ್ರಿನ್ಸ್ ಧ್ರುವ ಅನೌನ್ಸ್ ಮಾಡಲಿದ್ದು, ಅಭಿಮಾನಿಗಳಿಗೆ ಡಬಲ್ ಖುಷಿಯಾಗಿದೆ. ಚಿರಂಜೀವಿ ಸರ್ಜಾ ಅಭಿನಯ ಚಿತ್ರದಲ್ಲಿ ಅದ್ಭುತವಾಗಿ  ಮೂಡಿ ಬಂದಿದೆ. ನಾಯಕಿಯಾಗಿ ದೀಪ್ತಿ ಸಾಥಿ ಕೂಡ ಸಖತ್ ಆಗಿ ಮಿಂಚಿದ್ದಾರೆ. ಇದ್ರ ಜೊತೆಯಲ್ಲಿ ಚಿರು ಪುತ್ರ ರಾಯನ್ ಕೂಡ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಕೆ ರಾಮ್ ನಾರಾಯಣ್ ನಿರ್ದೇಶನದಲ್ಲಿ ಮೂಡಿ ಬಂದಿರೋ ರಾಜಮಾರ್ತಾಂಡ ಚಿತ್ರಕ್ಕೆ ಶಿವಕುಮಾರ್ ಬಂಡವಾಳ ಹೂಡಿದ್ದಾರೆ. ಶ್ರೀ ಮಾದೇಶ್ವರ ಪ್ರೊಡಕ್ಷನ್ ಅಡಿಯಲ್ಲಿ ಮಾರ್ತಾಂಡನ ಮ್ಯಾಜಿಕ್ ಇಂಪ್ರೆಸ್ ಮಾಡಲಿದೆ. ಅರ್ಜುನ್ ಜನ್ಯಾ ಮ್ಯೂಸಿಕ್ ಈಗಾಗ್ಲೇ ಹಿಟ್ ಆಗಿದೆ. ಸಿನಿಮಾ ರಿಲೀಸ್​ಗೆ ಕಾಯ್ತಿದ್ದ ಅಭಿಮಾನಿಗಳಿಗೆ ಕೊನೆಗೂ ಜೂನ್ 23  ಸಿಹಿ ಸುದ್ದಿ ಕೊಡಲಿದೆ.

ರಾಕೇಶ್ ಆರುಂಡಿ, ಫಿಲ್ಮ್ ಬ್ಯೂರೋ, ಪವರ್ ಟಿವಿ

RELATED ARTICLES

Related Articles

TRENDING ARTICLES