ಮೈಸೂರು : ವಿಶ್ವ ಯೋಗ ದಿನಾಚರಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳಲುತ್ತಿರುವುದರಿಂದ ಅರಮನೆ ನಗರಿ ಮೈಸೂರು ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿದೆ.
ಮೊದಲಿಗೆ ಬೆಂಗಳೂರಿಗೆ ಆಗಮಿಸಲಿದ್ದು, ಬಳಿಕ ಮೈಸೂರಿನ ಮಂಡಕಳ್ಳಿ ಏರ್ ಪೋರ್ಟ್ ಗೆ ಆಗಮಿಸಲಿದ್ದು, ಸಂಜೆ 6 ಗಂಟೆ ವೇಳೆ ನಗರದ ಮಹಾರಾಜ ಕಾಲೇಜು ಮೈದಾನಕ್ಕೆ ಆಗಮಿಸಲಿದ್ದಾರೆ. ಕೇಂದ್ರ ಸರ್ಕಾರದ ಪಲಾನುಭವಿಗಳೊಂದಿಗೆ ಪ್ರಧಾನಿ ಸಂವಾದ ನಡೆಯಲಿದ್ದು, ಬಳಿಕ ಸುತ್ತೂರು ಶಾಖಾ ಮಠಕ್ಕೆ ಭೇಟಿ ನೀಡಲಿದ್ದಾರೆ.
ಇನ್ನು, ರಾತ್ರಿ 8:15ರ ವೇಳೆಗೆ ಚಾಮುಂಡಿಬೆಟ್ಟಕ್ಕೆ ತೆರಲಿದ್ದಾರೆ. ಮೋದಿ ಆಗಮನ ಹಿನ್ನೆಲೆ ಜಗಮಗಿಸುತ್ತಿರುವ ನಗರದ ರಸ್ತೆಗಳು. ಚಾಮುಂಡಿ ತಾಯಿಯ ದರ್ಶನ ಬಳಿಕ ಎಂ. ಜಿ ರಸ್ತೆಯ ರಾಡಿಸನ್ ಬ್ಲೂ ಹೋಟೆಲ್ನಲ್ಲಿ ವಾಸ್ತವ್ಯ ಹೂಡಲಿದ್ದಾರೆ. ನಾಳೆ ಬೆಳಗ್ಗೆ 6:30ಕ್ಕೆ ಅರಮನೆ ಅಂಗಳದಲ್ಲಿ ಯೋಗ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದು, ಬಳಿಕ ರಾಜ ವಂಶಸ್ಥೆ ಪ್ರಮೋದ ದೇವಿ ಒಡೆಯರ್ ಹಾಗೂ ಕುಟುಂಬಕ್ಕೆ ಭೇಟಿ ನೀಡಲಿದ್ದಾರೆ.
ರಾಜಮನೆತನದ ಜೊತೆ ಬೆಳಗಿನ ಉಪಹಾರದ ಬಳಿಕ ಮೈಸೂರಿನಿಂದ ನಿರ್ಗಮಿಸಲಿದ್ದಾರೆ. ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆಯುವ ವಿಶ್ವ ಯೋಗ ದಿನಾಚರಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳಲುತ್ತಿರುವ ವಿಶ್ವ ಯೋಗ ದಿನಾಚರಣೆ. ಅರಮನೆ ನಗರಿ ಮೈಸೂರು ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿದೆ. ಮೈಸೂರಿನ ಪಾರಂಪರಿಕ ಕೆ.ಆರ್.ಸರ್ಕಲ್, ಚಾಮರಾಜ ಒಡೆಯರ್ ಸರ್ಕಲ್, ಕಾರ್ಪೊರೇಷನ್ ಬಿಲ್ಡಿಂಗ್ ಸೇರಿದಂತೆ ಹಲವೆಡೆಗೆ ವಿದ್ಯುತ್ ದೀಪಗಳಿಂದ ಆಲಂಕಾರಗೊಂಡಿದೆ.