Wednesday, January 15, 2025

ಪ್ರಧಾನಿ ಸ್ವಾಗತಿಸಲು ಹಾಕಿದ್ದ ಹಿಂದಿ ಬ್ಯಾನರ್​ಗೆ ಮಸಿ

ಬೆಂಗಳೂರು: ಪ್ರಧಾನಿ ಮೋದಿ ಗಮನ ಸೆಳೆಯಲು ಹಿಂದಿ ಭಾಷೆಯಲ್ಲಿ ಬ್ಯಾನರ್ ಹಾಕಿ ಪ್ರಚಾರ ಗಿಟ್ಟಿಸಲು ಯತ್ನಿಸಿದ ಸಚಿವ ಮುನಿರತ್ನ ಅವರ ಬ್ಯಾನರ್ ಗಳಿಗೆ ಕರವೇ ಕಾರ್ಯಕರ್ತರು ಮಸಿ ಬಳಿದು ಧ್ವಂಸಗೊಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಸಂಚರಿಸುವ ಮಾರ್ಗದಲ್ಲಿ ಹಿಂದಿ ಭಾಷೆ ಬಳಿಸಿ ರಸ್ತೆಯುದ್ಧಕ್ಕೂ ಸಚಿವ ಮುನಿರತ್ನ ಹಾಕಿಸಿದ್ದ ಹಿಂದಿ ಬ್ಯಾನರ್ ಗಳನ್ನು ಮೋದಿ ನೋಡುವ ಮುನ್ನವೇ ಕನ್ನಡ ಪರ ಸಂಘಟನೆಗಳು ಕಿತ್ತೆಸೆದಿವೆ.ಟಿಎ ನಾರಾಯಣಗೌಡ ನೇತೃತ್ವದ ಕರ್ನಾಟಕ ರಕ್ಷಣಾ ವೇದಿಕೆ ಯುವ ಘಟಕದ ಅಧ್ಯಕ್ಷ ಧರ್ಮರಾಜ್ ಮತ್ತು ಬೆಂಬಲಿಗರು ಮೈಸೂರು ರಸ್ತೆಯಲ್ಲಿ ಮುನಿರತ್ನ ಬ್ಯಾನರ್ ತೆರವುಗೊಳಿಸಲು ಯತ್ನಿಸಿದರು.

ಕನ್ನಡ ವಿರೋಧಿ ಮುನಿರತ್ನ ಹಾಗೂ ಬೆಂಬಲಿಗರ ವಿರುದ್ಧ ಧಿಕ್ಕಾರ ಕೂಗಿದ ಕರವೇ ಕಾರ್ಯಕರ್ತರನ್ನು ಪೊಲೀಸರು ತಡೆಯಲು ಯತ್ನಿಸಿದರು. ಇದರ ಮಧ್ಯೆಯೂ ಮುನಿರತ್ನ ಮತ್ತು ಅವರ ಬೆಂಬಲಿಗರ ಹಿಂದಿ ಬ್ಯಾನರ್ ಗಳಿಗೆ ಮಸಿ ಬಳಿದು ಕರವೇ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.

RELATED ARTICLES

Related Articles

TRENDING ARTICLES