Monday, December 23, 2024

ತಲೈವಾ 169 ‘ಜೈಲರ್’.. ಅಖಾಡದಲ್ಲಿ ರಜಿನಿ, ಶಿವಣ್ಣ

ತಲೈವಾ ರಜಿನೀಕಾಂತ್ 169ನೇ ಸಿನಿಮಾ ಸೆಟ್ಟೇರೋಕೆ ಮೊದಲೇ ಹತ್ತು ಹಲವು ಕಾರಣಗಳಿಂದ ಟಾಕ್ ಆಫ್ ದ ಟೌನ್ ಆಗಿತ್ತು. ಇದೀಗ ನೆಲ್ಸನ್ ಌಕ್ಷನ್ ಕಟ್ ಹೇಳ್ತಿರೋ ಆ ಮಾಸ್ ವೆಂಚರ್ ಟೈಟಲ್ ಲಾಂಚ್ ಆಗಿದೆ. ಒಂದೇ ಫ್ರೇಮ್​ನಲ್ಲಿ ಸ್ಟೈಲ್ ಕಿಂಗ್ ಜೊತೆ ಸ್ಯಾಂಡಲ್​ವುಡ್ ಕಿಂಗ್ ಮಿಂಚಲಿರೋ ಆ ಮೆಗಾ ಇಂಟರೆಸ್ಟಿಂಗ್ ಸ್ಟೋರಿ ನಿಮಗಾಗಿ ಕಾಯ್ತಿದೆ ಜಸ್ಟ್ ಹ್ಯಾವ್ ಎ ಲುಕ್.

ಸ್ಟೈಲ್ ಕಿಂಗ್- ಕರುನಾಡ ಕಿಂಗ್​ಗೆ ಸಿಂಗಲ್ ಫ್ರೇಮ್..!

ಸಿನಿರಸಿಕರಿಗೆ ಒಂದ್ಕಡೆ ಖುಷಿ.. ಮತ್ತೊಂದ್ಕಡೆ ಟೆನ್ಷನ್

ಅಂದು ಬಾಲಯ್ಯನ ಸ್ನೇಹ.. ಇಂದು ರಜಿನಿಯ ಪ್ರೀತಿ

ವಿಶ್ವದಾದ್ಯಂತ ಬಹುದೊಡ್ಡ ಅಭಿಮಾನಿ ಬಳಗ ಹೊಂದಿರೋ ಹಾಗೂ ಇಳಿವಯಸ್ಸಿನಲ್ಲೂ ಅದೇ ಎನರ್ಜಿ, ಅದೇ ಚಾರ್ಮ್​ ಇರೋ ಎಜರ್ನಿಟಿಕ್ ಹೀರೋ ರಜಿನೀಕಾಂತ್​ರ ನೆಕ್ಸ್ಟ್ ಪ್ರಾಜೆಕ್ಟ್ ಸಖತ್ ಇಂಟರೆಸ್ಟಿಂಗ್ ಅನಿಸಿದೆ. ಕಾರಣ ಚಿತ್ರದ ಟೈಟಲ್ ಹಾಗೂ ಸ್ಟಾರ್​ಕಾಸ್ಟ್. ಯೆಸ್.. ರಜಿನಿ 169ನೇ ಸಿನಿಮಾ ಬೀಸ್ಟ್ ಡೈರೆಕ್ಟರ್ ನೆಲ್ಸನ್ ಜೊತೆಗೆ ಅನ್ನೋದು ಈ ಹಿಂದೆಯೇ ಪಕ್ಕಾ ಆಗಿತ್ತು. ಇದೀಗ ಟೈಟಲ್ ಸಮೇತ ಚಿತ್ರದ ಫಸ್ಟ್ ಲುಕ್ ರಿವೀಲ್ ಮಾಡಿದೆ ಸನ್ ಪಿಕ್ಚರ್ಸ್​.

ಜೈಲರ್.. ಈ ಟೈಟಲ್ ಕೇಳ್ತಿದ್ರೇನೇ ಪಕ್ಕಾ ಉರಂ ಮಾಸ್ ಸಿನಿಮಾ ಅನ್ನೋದು ಕನ್ಫರ್ಮ್​ ಆಗಲಿದೆ. ಹೌದು.. ತಲೈವಾ ಅಂದ್ಮೇಲೆ ಅಲ್ಲಿ ಮಾಸ್ ಎಲಿಮೆಂಟ್ಸ್ ಇರಲೇಬೇಕು. ಅಷ್ಟೇ ಅಲ್ಲ, ಈ ಸಿನಿಮಾದಲ್ಲಿ ರಜಿನಿ ಬಾಸ್ ಜೊತೆ ನಮ್ಮ ಕರುನಾಡ ಚಕ್ರವರ್ತಿ ಡಾ. ಶಿವರಾಜ್​ಕುಮಾರ್ ಬಣ್ಣ ಹಚ್ಚುತ್ತಿರೋದು ಹಾಟ್ ಟಾಪಿಕ್.

ಶಿವಣ್ಣ ಈಗಾಗ್ಲೇ ರಜಿನಿ ಜೊತೆ ನಟಿಸೋಕೆ ಗ್ರೀನ್ ಸಿಗ್ನಲ್ ಕೊಟ್ಟಾಗಿದೆ ಅನ್ನೋದು ಅಂತೆ ಕಂತೆ ಆಗಿತ್ತು. ಆದ್ರೀಗ ಚಿತ್ರತಂಡವೇ ಅದನ್ನ ಅಧಿಕೃತವಾಗಿ ಖಚಿತಪಡಿಸಿದೆ. ಇದು ಇಬ್ಬರು ಲಿವಿಂಗ್ ಲೆಜೆಂಡ್​ಗಳ ಮೆಗಾ ಮಲ್ಟಿಸ್ಟಾರ್ ಮೂವಿ. ಟೈಟಲ್ ಜೈಲರ್ ಅಂತ ಇರೋದ್ರಿಂದ ಟೈಟಲ್ ರೋಲ್​ನಲ್ಲಿ ಯಾರು ನಟಿಸ್ತಾರೆ ಅನ್ನೋ ಕನ್ಫ್ಯೂಷನ್ ಬೇರೆ ಶುರುವಾಗಿದೆ.

ಸ್ಟೈಲ್ ಕಿಂಗ್ ರಜಿನಿ- ಸ್ಯಾಂಡಲ್​ವುಡ್ ಕಿಂಗ್ ಶಿವಣ್ಣ ಒಟ್ಟಿಗೆ ನಟಿಸ್ತಿದ್ದಾರೆ ಅಂತ ಖುಷಿ ಪಡ್ಬೇಕೋ ಅಥ್ವಾ ಇಂತಹ ಗ್ರೇಟ್ ಌಕ್ಟರ್​ಗಳನ್ನ ಇಟ್ಕೊಂಡು ಬೀಸ್ಟ್​ನ ಒಂದೇ ಮಾಲ್​ನಲ್ಲಿ ಚಿತ್ರಿಸಿದಂತೆ, ಜೈಲರ್ ಸಿನಿಮಾನ ಎಲ್ಲಿ ಒಂದೇ ಜೈಲ್​ನಲ್ಲಿ ಚಿತ್ರಿಸ್ತಾರೋ ಅನ್ನೋ ಟೆನ್ಷನ್ ಶುರುವಾಗಿದೆ ಸಿನಿಪ್ರಿಯರಿಗೆ. ಅದೂ ನಿಜಾನೇ ಬಿಡಿ, ಇದು ಬರೀ ಸಿನಿಪ್ರಿಯರಿಗಷ್ಟೇ ಅಲ್ಲ, ರಜಿನಿ- ಶಿವಣ್ಣ ಫ್ಯಾನ್ಸ್​ಗೆ ಡಬಲ್ ಡೋಸ್ ಟೆನ್ಷನ್ ಕೊಡ್ತಿದೆ.

ಈ ಹಿಂದೆ ಬಾಲಯ್ಯನ ಪ್ರೀತಿ, ಸ್ನೇಹಕ್ಕೆ ಕಟ್ಟುಬಿದ್ದು, ತೆಲುಗಿನ ಗೌತಮಿಪುತ್ರ ಶಾತಕರ್ಣಿ ಚಿತ್ರದಲ್ಲಿ ಮೊದಲ ಬಾರಿಗೆ ಪರಭಾಷೆಗೆ ಕಾಲಿಟ್ಟಿದ್ರು ಶಿವಣ್ಣ. ಇದೀಗ ಅಣ್ಣಾವ್ರ ಕುಟುಂಬ- ರಜಿನಿ ಜೊತೆಗಿನ ನಂಟು ಮತ್ತಷ್ಟು ಗಟ್ಟಿಯಾಗಲು ಅದೇ ರೀತಿ ಕಾಲಿವುಡ್​ಗೆ ಪದಾರ್ಪಣೆ ಮಾಡ್ತಿದ್ದಾರೆ ನಮ್ಮ ಸನ್ ಆಫ್ ಬಂಗಾರದ ಮನುಷ್ಯ.

ಮಾಸ್, ಕ್ಲಾಸ್, ಫ್ಯಾಮಿಲಿ ಹೀಗೆ ತರಹೇವಾರಿ ರೋಲ್​ಗಳಲ್ಲಿ ಸದಾ ಸಿನಿಪ್ರಿಯರನ್ನು ರಂಜಿಸುತ್ತಾ ಬರ್ತಿರೋ ಶಿವರಾಜ್​ಕುಮಾರ್​ರ ಚೊಚ್ಚಲ ತಮಿಳು ಸಿನಿಮಾ ಹೇಗೆ ಮೂಡಿಬರಲಿದೆ ಅನ್ನೋ ಕ್ಯೂರಿಯಾಸಿಟಿ ಎಲ್ಲರಲ್ಲೂ ಮನೆ ಮಾಡಿದೆ. ಅದಕ್ಕೆ ಉತ್ತರ ಸಿಗಲು ಕನ್ನಡಿಗರು ಮತ್ತಷ್ಟು ದಿನ ಕಾಯಲೇಬೇಕು.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES