Monday, December 23, 2024

ರಾಯರ ದಿನ ಸಖತ್ ಜೋರಿರಲಿದೆ ಶೆಟ್ರ ‘ಹರಿಕಥೆ’

ಭಾರತೀಯ ಚಿತ್ರಪ್ರೇಮಿಗಳನ್ನೆಲ್ಲಾ  ಕಣ್ಣೀರಲ್ಲೇ ಕೈತೊಳೆಸಿದ ಶೆಟ್ರ ಗ್ಯಾಂಗ್​​​ ಸಿನಿಮಾ 777ಚಾರ್ಲಿ. ಇದೀಗ ನಿಮ್ಮನ್ನೆಲ್ಲಾ ಭಯಂಕರ ನಗಿಸೋಕೆ ರಿಷಭ್​ ಶೆಟ್ಟಿ ಬರ್ತಿದ್ದಾರೆ. ಕಾಮಿಡಿ ಜಾನರ್​ನಲ್ಲಿ ಹೊಣ್ಣೆ ಹುಣ್ಣಾಗಿಸುವಂತೆ ನಗಿಸಲು ಹರಿಕಥೆ ಅಲ್ಲ ಗಿರಿಕಥೆ ಸಿನಿಮಾ ಸಜ್ಜಾಗಿದೆ. ಯೆಸ್​​.. ಶೆಟ್ರ ಸಿನಿಮಾದ ಇಂಟ್ರೆಸ್ಟಿಂಗ್ ಅಪ್ಡೇಟ್​ ಇಲ್ಲಿದೆ.

ಜೂನ್​ 23ಕ್ಕೆ  ಸಿಗಲಿದೆ  ಭರ್ಜರಿ ನಗುವಿನ ಟಾನಿಕ್

ಸ್ಯಾಂಡಲ್​ವುಡ್​​ನ ಮೋಸ್ಟ್​​ ಟ್ಯಾಲೆಂಟೆಡ್​ ಡೈರೆಕ್ಟರ್ ಕಮ್​ ಆ್ಯಕ್ಟರ್​ಗಳಲ್ಲಿ ರಿಷಬ್​​​ ಕೂಡ ಒಬ್ರು. ಇವ್ರ ಸಿನಿಮಾ ಅಭಿರುಚಿ ಪ್ರೇಕ್ಷಕರಿಗೆ ಸಖತ್​ ಇಷ್ಟವಾಗುತ್ತೆ. ರಿಷಬ್​​​ ಮ್ಯಾನರಿಸಂಗೆ ಅಭಿಮಾನಿಗಳು ಕೂಡ ಫಿದಾ ಆಗಿದ್ದಾರೆ. ಶೆಟ್ರು ಇದ್ರೆ ನೋ ಡೌಟ್​​ ಅದು ಪಕ್ಕಾ ಹಿಟ್​ ಸಿನಿಮಾ. ಕಂಟೆಂಟ್​ ಓರಿಯೆಂಟೆಡ್​ ಕಥೆಯ ಜೊತೆ ಭರ್ಜರಿ ಮನರಂಜನೆಯ ರಸದೌತಣ ಅಂತೂ ಖಂಡಿತ ಸಿಗುತ್ತೆ.

ಭೂಗತ ಲೋಕದ ನಕ್ಸಲೇಟ್​​ ಕಥೆ ರಿಕ್ಕಿ, ಕಾಲೇಜ್​ ಕ್ಯಾಂಪಸ್ಸಿನ ಕಿರಿಕ್​ ಸಿನಿಮಾ ಕಿರಿಕ್​ ಪಾರ್ಟಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಸಿನಿಮಾಗಳು ರಿಷಬ್​ ಕೈ ಕುಸುರಿಯಲ್ಲಿ ಅರಳಿದ ಸುಂದರ ಶಿಲ್ಪಗಳು. ನಟನೆಯಲ್ಲೂ ಸೈ, ನಿರ್ದೇಶನಕ್ಕೂ ಜೈ ನಮ್​ ರಿಷಬ್​ ಶೆಟ್ರು. ಇದೀಗ ಇದು ಹರಿಕಥೆ ಅಲ್ಲಾ ಸಾಮಿ ಗಿರಿಕಥೆ ಅಂತಾ ಎಲ್ಲರೂ ಬಿದ್ದು ಬಿದ್ದು ನಗುವಂತೆ ಮಾಡೋಕೆ ರೆಡಿಯಾಗಿದೆ ರಿಷಬ್​ ಟೀಮ್​​.

ಗಿರಿಕಥೆಯೊಳಗೆ ಪೊಲೀಸಪ್ಪನಿಗೆ ರಿಷಬ್​ ಚಳ್ಳೆ ಹಣ್ಣು..!

ಇನ್ನು ಕಾಯೋಕೆ ಆಗಲ್ಲ.. ತುದಿಗಾಲಲ್ಲಿ ರಿಷಬ್​ ಫ್ಯಾನ್ಸ್​​​

ಜ್ಯೂನಿಯರ್​ ಮೋನಾಲಿಸಾ ಹಾಡು ಕೇಳಿ ಸಂಗೀತದ ಸ್ವರ ಸಾಗರದಲ್ಲಿ ತೇಲಾಡುತ್ತಿದ್ದ ಅಭಿಮಾನಿಗಳಿಗೆ ಟ್ರೈಲರ್​ ಮೂಲಕ ಮತ್ತಷ್ಟು ಮನರಂಜನೆಯ ಭರವಸೆ ಕೊಟ್ಟವರು ರಿಷಬ್​​​. ಈ ಚಿತ್ರಕ್ಕಾಗಿ ಒಂದಾಗಿರುವ ಕರಣ್​ ಅನಂತ್​​ ಹಾಗೂ ಅನಿರುದ್ಧ್​ ಮಹೇಶ್​​ ನಿರ್ದೇಶನದ ಮೋಡಿ ಟ್ರೈಲರ್​​ನಲ್ಲೇ ಪ್ರೂವ್​ ಆಗಿದೆ. ಪೋಲಿಸಪ್ಪನಿಗೆ ಸುಳ್ಳಿನ ಮೇಲೆ ಸುಳ್ಳು ಹೇಳಿ ಚಳ್ಳೆ ಹಣ್ಣು ತಿನ್ನಿಸೋ ರಿಷಬ್​​ ಆ್ಯಕ್ಟಿಂಗ್​ ಕೂಡ ಅದ್ಭುತವಾಗಿದೆ.

ಚಿತ್ರದ ನಾಯಕ ರಿಷಬ್​​ಗೆ ಡೈರೆಕ್ಟರ್​ ಆಗೋ ಕನಸು. ಅಪಾರ ಕನಸು ಹೊತ್ತ ನಾಯಕನ ಹಠ ಗೆಲ್ಲುತ್ತಾ ಅನ್ನೋದೆ ಒನ್​ ಲೈನ್​ ಸ್ಟೋರಿ. ಆದ್ರೆ, ಚಿತ್ರದಲ್ಲಿ ಇದರಾಚೆಗೆ ಹೇಳಲಾಗದ ನಗುವಿನ ಸಿಹಿ ಭೋಜನವಿದೆ. ತರಲೆ, ತಮಾಷೆ, ಜೂಟಾಟ, ತುಂಟಾಟಗಳು ನಾಯಕನನ್ನು ಪೇಚಿಗೆ ಸಿಲುಕುವಂತೆ ಮಾಡುತ್ತವೆ. ಈ ಜರ್ನಿಯೇ  ವಂಡರ್​ಫುಲ್​ ಆಗಿದೆಯಂತೆ.

ಚಿತ್ರದಲ್ಲಿ ನಾಯಕಿಯಾಗಿ  ಹೆಂಗೆ ನಾವು ಖ್ಯಾತಿಯ ರಚನಾ ಇಂದರ್​​, ನ್ಯು ಕಮರ್​ ತಪಸ್ವಿನಿ ಪೊಣಚ್ಚ ಮ್ಯಾಜಿಕ್​ ಕೂಡ ಮಸ್ತ್​ ಆಗಿದೆ.  ರಿಷಬ್​​ ಶೆಟ್ಟಿ ಹಾಗೂ ಪ್ರಮೋದ್​ ಶೆಟ್ಟಿ ಕಾಮಿಡಿ ಕಮಾಲ್​​ ಎಲ್ಲರ ಗಮನ ಸೆಳೆಯಲಿದೆ. ಸಂದೇಶ್​ ಪ್ರೊಡಕ್ಷನ್​ ಬ್ಯಾನರ್​ ಅಡಿಯಲ್ಲಿ  ಸಂದೇಶ್​ ನಾಗರಾಜ್​​ ಅವರು ಈ ಸಿನಿಮಾ ನಿರ್ಮಾಣ ಮಾಡಿದ್ದು ಸಹಜವಾಗಿ ನಿರೀಕ್ಷೆ ಕೂಡ ಡಬಲ್​​ ಆಗಿದೆ. ವಾಸುಕಿ ವೈಭವ್​​ ಮ್ಯೂಸಿಕ್​ ಕಂಪೋಸಿಂಗ್​ ಇಂಪ್ರೆಸ್ಸಿವ್​ ಆಗಿದೆ. ಯ್ಯೂಟ್ಯೂಬ್​ನಲ್ಲಿ ಟಾಪ್​ ಟ್ರೆಂಡಿಂಗ್​ ಸರ್ಚಿಂಗ್​ನಲ್ಲಿರೋ ಗಿರಿಕಥೆ ನೋಡೋಕೆ  ಜೂನ್​ 23ರವರೆಗೆ ಕಾಯಲೇಬೇಕು.

ರಾಕೇಶ್​ ಅರುಂಡಿ, ಫಿಲ್ಮ್​ ಬ್ಯೂರೋ, ಪವರ್​ ಟವಿ.

RELATED ARTICLES

Related Articles

TRENDING ARTICLES