Monday, December 23, 2024

ರಾಷ್ಟ್ರೀಯ ಹೆದ್ದಾರಿಯಲ್ಲಿ ಮುಂದುವರಿದ ಆನೆ ರಂಪಾಟ

ಚಾಮರಾಜನಗರ : ತಮಿಳುನಾಡಿನಿಂದ ಕರ್ನಾಟಕಕ್ಕೆ ತರಕಾರಿ ತುಂಬಿಕೊಂಡು ಬರುತ್ತಿದ್ದ ಪಿಕ್ ಅಪ್ ವಾಹನದ ಮೇಲೆ ಆನೆ ದಾಳಿ ಮಾಡಿದ ಘಟನೆ ಚಾಮರಾಜನಗರ ಜಿಲ್ಲೆಯಲ್ಲಿ ನಡೆದಿದೆ.

ಗೂಡ್ಸ್ ವಾಹನದ ಮೇಲೆ ಆನೆ ದಾಳಿ ಮಾಡಿದ್ದು, ತರಕಾರಿ ಗುಳುಂ ಮಾಡಿ – ವಾಹನದ ಮುಂಭಾಗ ಮರಿಯೊಂದಿಗೆ ಸೇರಿ ಆನೆ ದಾಳಿ ಮಾಡಿದೆ. ಬೆಂಗಳೂರು-ದಿಂಡಿಗಲ್ ರಾಷ್ಟ್ರೀಯ ಹೆದ್ದಾರಿ ಚಾಮರಾಜನಗರ ಗಡಿಭಾಗ ಅಸನೂರು ಸಮೀಪ ಕಬ್ಬಿನ ಲಾರಿಗಾಗಿ ಕಾದು ನಿಂತಿದ್ದ ಆನೆಗೆ ತರಕಾರಿ ತುಂಬಿಕೊಂಡು ಬರುತ್ತಿದ್ದ ಗೂಡ್ಸ್ ಮೇಲೆ ದಾಳಿ ಮಾಡಿದೆ.

ಇನ್ನು, ಆನೆ ದಾದಾಗಿರಿಗೆ ವಾಹನದ ಗಾಜು ಪುಡಿ ಪುಡಿ, ವಾಹನ ಮುಂಭಾಗ ಕೂಡ ಜಖಂಗೊಂಡಿದ್ದು, ಆನೆ ರಂಪಾಟದ ವಿಡಿಯೋವನ್ನು ಬೇರೆ ವಾಹನ ಚಾಲಕರು ಸೆರೆಹಿಡಿದಿದ್ದಾರೆ. ಕಬ್ಬಿನ ಲಾರಿಗಳಿಗೆ ಮಾತ್ರ ಕಣ್ಣಿಡುತ್ತಿದ್ದ ಈ ಆನೆ ಈಗ ಗೂಡ್ಸ್ ವಾಹನದ ಮೇಲೂ ದಾಳಿ ಮಾಡಲು ಆರಂಭಿಸಿದೆ. ಹೀಗಾಗಿ ಚಾಲಕರು ಆತಂಕಗೊಂಡಿದ್ದಾರೆ.

RELATED ARTICLES

Related Articles

TRENDING ARTICLES