Wednesday, January 22, 2025

ಬಿ ಸಿ ನಾಗೇಶ್​ ವಿರುದ್ಧ ಹರಿಹಾಯ್ದ ಸಿದ್ದರಾಮಯ್ಯ

ವಿಜಯಪುರ : ರೋಹಿತ್ ಚಕ್ರವರ್ತಿ ತಿರುಚಿದ ಪಠ್ಯವನ್ನ ಮಕ್ಕಳಿಗೆ ಬೋಧಿಸಬಾರದು ಎಂದು ಬಿ ಸಿ ನಾಗೇಶ್​ ವಿರುದ್ಧ ಸಿದ್ದರಾಮಯ್ಯ ಕಿಡಿಕಾಡಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪುಸ್ತಕ ಪರಿಷ್ಕರಣೆ ಹಿಂದೆ ಇರೋದು ಬಿ ಸಿ ನಾಗೇಶ್ ರೋಹಿತ್ ಚಕ್ರತೀರ್ಥ ಅರೆಸ್ಟ್ ಆಗಬೇಕು. ಬಿ ಸಿ ನಾಗೇಶ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಮಹಾನ್ ವ್ಯಕ್ತಿಗಳಿಗೆ ಅಪಮಾನ ಮಾಡಿದ್ದಾರೆ. ಇವರು ದೇಶ ಆಳೋಕೆ ಅಯೋಗ್ಯರು. ಬಿಜೆಪಿ ನಾಯಕರ ವಿರುದ್ದ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅದಲ್ಲದೇ, ಈ ಪಠ್ಯ ವಾಪಾಸ್ ತೆಗೆದುಕೊಳ್ಳಬೇಕು. ರೋಹಿತ ಚಕ್ರತೀರ್ಥ ಕೇಸರಿಕರಣಕ್ಕಾಗಿ ಹೀಗೆ ಮಾಡಿದ್ದಾರೆ. ರೋಹಿತ್ ಚಕ್ರವರ್ತಿ ತಿರುಚಿದ ಪಠ್ಯವನ್ನ ಮಕ್ಕಳಿಗೆ ಬೋಧಿಸಬಾರದು. ಈ ಪಠ್ಯವನ್ನ ತಿರಸ್ಕರಿಸಬೇಕು ಇದನ್ನ ಮಕ್ಕಳಿಗೆ ಬೋಧಿಸಲೇಬಾರದು. ಮಕ್ಕಳಿಗೆ ವೈಚಾರಿಕ, ವೈಜ್ಞಾನಿಕ ಜ್ಞಾನ ಕೊಡಬೇಕು. ಕುವೆಂಪು, ಅಂಬೇಡ್ಕರ್, ಬಸವಣ್ಣ, ನಾರಾಯಣಗುರು, ಬಾಲಗಂಗಾಧರ ಸ್ವಾಮೀಜಿ, ಸಿದ್ದಗಂಗಾಶ್ರೀಗಳಿಗೆ ಪಠ್ಯದಲ್ಲಿ ಅಪಮಾನವಾಗಿದೆ ಎಂದರು.

RELATED ARTICLES

Related Articles

TRENDING ARTICLES